fbpx
ಮಾಹಿತಿ

ಪೊಲೀಸರು ಇನ್ಮುಂದೆ ಚಾಲಕರನ್ನ ನಿಲ್ಸಿ ಡಿ.ಎಲ್ ಕೇಳೋಹಾಗಿಲ್ಲ

ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್, ಇನ್ನುಮುಂದೆ ಪೊಲೀಸರು ಸುಮ್ಮನೆ ಡಿಎಲ್ ಚೆಕ್ ಮಾಡಲು ವಾಹನಗಳನ್ನು ತಡೆಯುವಂತಿಲ್ಲ. ಕಣ್ಣಿಗೆ ಕಾಣುವಂತಹ ನಿಯಮ ಉಲ್ಲಂಘನೆಯಾದರೆ ಮಾತ್ರ ಕ್ರಮಕ್ಕೆ ಮುಂದಾಗಬೇಕೆಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.

ಪ್ರವೀಣ್ ಸೂದ್ ಅವರು ಪೊಲೀಸ್ ಕಮಿಷನರ್ ಆಗಿ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ.

ಡಿಎಲ್ ಪರಿಶೀಲಿಸಲು ವಾಹನಗಳನ್ನು ತಡೆಯುವಂತಿಲ್ಲ.

‘ಸಂಚಾರ ಉಲ್ಲಂಘನೆ ಸಂಬಂಧ ತಿಂಗಳಿಗೆ ಇಂತಿಷ್ಟು ಪ್ರಕರಣ ದಾಖಲಿಸಲೇಬೇಕು ಅಥವಾ ಇಂತಿಷ್ಟು ದಂಡ ಸಂಗ್ರಹಿಸಲೇಬೇಕು ಎಂದು ಯಾವುದೇ ಟಾರ್ಗೆಟ್‌ ನೀಡುವುದಿಲ್ಲ.

ನಿಯಮ ಉಲ್ಲಂಘಿಸುವ ಸವಾರರ ವಾಹನಗಳನ್ನು ಮಾತ್ರ ತಡೆದು ಪ್ರಕರಣ ದಾಖಲಿಸಬೇಕು.

ಪಾಸ್‌ ಪೋರ್ಟ್ ಸೇರಿಯಾವುದೇ ದಾಖಲೆಗಳ ಪೊಲೀಸ್ ಪರಿಶೀಲನೆಗೆ 15 ದಿನಗಳ ಕಾಲಮಿತಿ ನಿಗದಿ.

ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಟ್ರಾಫಿಕ್ ಕಡೆಯೂ ಹೆಚ್ಚಿನ ಗಮನ.

ಸಂಚಾರ ವಿಭಾಗವನ್ನು ಬಲಪಡಿಸಲಾಗುವುದು.

ಸವಾರರಿಗೆ ತೊಂದರೆ ಕೊಡಬೇಡಿ: ಡಿಎಲ್ ಚೆಕ್ ಮಾಡಲು ವಾಹನಗಳನ್ನು ತಡೆಯುವಂತಿಲ್ಲ ಎಂದು ಸೂಚಿಸಿದ್ದೇನೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ದಾಖಲೆಗಳನ್ನು ನೋಡಲು ವಾಹನಗಳನ್ನು ತಡೆಯದಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧದ ಕಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಪಾಸ್ ಪೋರ್ಟ್ ಪರಿಶೀಲನೆ: ಪಾಸ್‌ ಪೋರ್ಟ್ ಸೇರಿದಂತೆ ಇನ್ನಿತರೆ ದಾಖಲೆಗಳ ಪರಿಶೀಲನೆ ವಿಚಾರದಲ್ಲಿ ಸಿಬ್ಬಂದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ. 15 ದಿನದೊಳಗೆ ಪಾಸ್ ಪೋರ್ಟ್ ಪರಿಶೀಲನೆ ಮುಗಿಯಬೇಕು. ಕ್ರಮೇಣ ಈ ಕಾಲಮಿತಿಯನ್ನು 10 ದಿನಕ್ಕೆ ಇಳಿಸಲಾಗುವುದು. ಒಂದು ವೇಳೆ 15 ದಿನಗಳಲ್ಲಿ ನಿಮಗೆ ಪಾಸ್‍ಪೋರ್ಟ್ ಸಿಕ್ಕಿಲ್ಲ ಅದ್ರೆ ನೇರವಾಗಿ ಪೊಲೀಸರನ್ನು ಸಂಪರ್ಕಿಸಿ. ಅನವಶ್ಯಕವಾಗಿ ಯಾರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬಾರದು ಎಂದು ಹೇಳಿದರು.

ಯಾರೇ ತಪ್ಪು ಮಾಡಿದರೂ ಶಿಕ್ಷೆ ಸಮಾನಾಗಿರುತ್ತದೆ. ಪೊಲೀಸ್ ಇಲಾಖೆ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಟ್ರಾಫಿಕ್ ಕಡೆಯೂ ಹೆಚ್ಚಿನ ಗಮನ ಹರಿಸುತ್ತಿದೆ. ಪ್ರಮುಖವಾಗಿ ನಾಗರಿಕರು ಟ್ರಾಫಿಕ್ ರೂಲ್ಸ್‍ಗಳಿಗೆ ಗೌರವ ಕೊಡಬೇಕು. ಇದಕ್ಕಾಗಿ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

7 Comments
Nanjunda says:

Sir nim department navru bari fake news kodthira aste en madudhrunu nim traffic police en madtharo adhe madodhu avrge yar este urgent idhru entha situation idhrunu nim department ge dud money beku aste nim police ge adh kottrene mundukke bidadhu

shashikant says:

Many of the common man’s public utility places like vegetables markets do not have ample parking space. Where do you expect us to park, sir ?

In such cases, even if the parked vehicles not impede normal traffic, the towing vehicles rush with utmost responsibility to tow the vehicles…

If a common man asks for justification or clarity with a police man, its like digging your own grave.

Is it a crime to ask for clarity ?

Shashikant says:

Most of the common man’s utility public places like vegetable markets in bengaluru, do not have ample parking space.
Where do you expect us to park vehicles.
In such cases, even when the parked vehicles do not impede the normal traffic.. towing vehicles rush with utmost sense of responsibility to tow away.

As per my experience, its a crime to ask for justification / clarity with police. Its like digging your own grave…

Sumanth M says:

super camishanar sahebre.

Santosh says:

..sir police avru tumba tondare agbittide. . Nan cab driver ..urgent agi airport ogu vaga baruvaga car stop madsi first car key kittukoltare. . Records ella torsidru car mele Hale case ive ..hage ige antare. . Ondu saari car ge ky hakidre bidoke minimum half and hour agutte. .customers ge tondare traffic agutte car biduvaga goladsi bidtare. .enadru mathadoke odre maathu tagedre seaz antare enukke seaz madtare sir seaz na sum Sumne

If violation done by police, where we have to complaint and what action you will take sir

To Top