fbpx
ಕನ್ನಡ

ಬೆಂಗಳೂರಿನ 40 ಮೆಟ್ರೊ ನಿಲ್ದಾಣದಲ್ಲಿನ ಹಿಂದಿ ನಾಮಫಲಕಗಳಿಗೆ ಕಪ್ಪುಮಸಿ ಕನ್ನಡ ಪರ ಹೋರಾಟಗಾರರು.

ಬೆಂಗಳೂರಿನ 40 ಮೆಟ್ರೊ ನಿಲ್ದಾಣದಲ್ಲಿನ ಹಿಂದಿ ನಾಮಫಲಕಗಳಿಗೆ ಕಪ್ಪುಮಸಿ ಕನ್ನಡ ಪರ ಹೋರಾಟಗಾರರು.

ಇವತ್ತು ಬೆಂಗಳೂರಿನ ಬಹುತೇಕ ಎಲ್ಲ ಮೆಟ್ರೋ ಸ್ಟೇಷನ್ ಗಳಲ್ಲಿನ ಹಿಂದಿ ನಾಮಫಲಕಗಳಿಗೆ ಕನ್ನಡ ಪರ ಹೋರಾಟಗಾರರು ಕಪ್ಪು ಮಸಿಯನ್ನು ಬಳೆದಿದ್ದಾರೆ.ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ  ಹಿಂದಿ ಭಾಷೆ ಬಳಕೆ ಕುರಿತು ಘೋಷಣೆ ಕೂಗುತ್ತಿದ್ದ ಕನ್ನಡಪರ ಹೋರಾಟಗಾರರು ಮೆಟ್ರೊ ನಿಲ್ದಾಣಗಳಲ್ಲಿನ ಹಿಂದಿ ಫಲಕಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟಿಸಿದ್ದಾರೆ.

ನಗರದ ಎಂಜಿ ರಸ್ತೆ,ರಾಜಾಜಿನಗರ, ಮೈಸೂರು ರಸ್ತೆ,ಪೀಣ್ಯಾ,ಯಶವಂತಪುರ,ಚಿಕ್ಕಪೇಟೆ, ಜಯನಗರ,ಸೇರಿದಂತೆ  40 ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳಿಗೆ ಕಪ್ಪುಮಸಿ ಬಳಿಯಲಾಗಿದೆ.

ಮೆಟ್ರೋ ನಿಲ್ದಾಣಗಳಲ್ಲಿ ಆಗುತ್ತಿದ್ದ ಪ್ರತಿಭಟನೆಯಿಂದ ಪ್ರಯಾಣಿಕರಿಗೆ ಸ್ವಲ್ಪ ಸಮಯದವರೆಗೆ ಸಮಸ್ಯೆ ಉಂಟಾಯಿತು. ಆಗ ಪೊಲೀಸರು ಸ್ಥಳಕ್ಕೆ ಧಾವಿಸಿ,ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರರನ್ನ ತೊರೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ನಂತರ ಪೊಲೀಸರು ಪ್ರತಿಭಟನಾ ಕಾರ್ಯಕರ್ತರನ್ನು ಬಂಧಿಸಿದರು.
ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top