fbpx
ಉಪ್ಪಯುತ್ತ ಮಾಹಿತಿ

ನಿಮಗೆ ಅರ್ಜೆಂಟ್ ಹಣ ಬೇಕಾ? ಚಿಂತೆಬಿಡಿ facebook ಈಗ ಸಾಲ ಕೊಡುತ್ತೆ.!!!

ನಿಮಗೆ ಅರ್ಜೆಂಟ್ ಹಣ ಬೇಕಾ? ಚಿಂತೆಬಿಡಿ facebook ಈಗ ಸಾಲ ಕೊಡುತ್ತೆ.!!!

ಆದುನಿಕ ಪ್ರಪಂಚದಲ್ಲಿ ಜೀವನ ಸಾಗಿಸಲು ನಮ್ಮೆಲ್ಲರಿಗೂ ದುಡ್ಡಿನ ಅವಶ್ಯಕತೆ ಇದ್ದೆ ಇರುತ್ತದೆ. ಹಣದ ಅವಶ್ಯಕತೆಗಳು ಯಾವಾಗ ಯಾವ ರೀತಿಯಲ್ಲಿ ಬರುತ್ತದೋ ಎಂಬುದು ಯಾರಿಗೂ ಗೊತ್ತಿರೋದಿಲ್ಲ . ಶ್ರೀಮಂತರನ್ನು ಹೊರತು ಪಡಿಸಿದರೆ ಬಡ ಜನರಿಗೆ ತುರ್ತಾಗಿ ಹಣದ ಅವಶ್ಯಕತೆ ಬಂದರೆ ಅನೇಕ ರೀತಿಯ ಕಷ್ಟವನ್ನು ಎದುರಿಸುತ್ತಾರೆ. ಗೊತ್ತಿರೋರ ಹತ್ತಿರವೋ ಅಥವಾ ಸ್ನೇಹಿತರ ಹತ್ತಿರವೋ ದುಡ್ಡನ್ನು ಸಾಲವಾಗಿ ಪಡೆಯುತ್ತಾರೆ.

ಸಾಲ ಪಡೆದರೆ ತುರ್ತಿನ ಸಮಸ್ಯೆ ನಿವಾರಣೆ ಆಗುತ್ತದೆ ನಿಜ ಆದ್ರೆ ಸಾಲ ಕೊಡೇರೆ ಯಾರು ಇಲ್ಲವಾದರೆ ಏನು ಮಾಡೋದು. ಯಾರು ಸಾಲ ಕೊಡದಿದ್ದರೂ facebook ನಿಮಗೆ ಸಾಲವನ್ನು ಒದಗಿಸಿಕೊಡುತ್ತದೆ.ಅದು ಹೇಗೆ ಅಂತೀರಾ ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.ಇಲ್ಲಿಯವರೆಗೂ ಫ್ರೆಂಡ್ಸ್ ಗಳ ನಡುವೆ ಕೊಂಡಿಯಾಗಿದ್ದ ಫೇಸ್ ಬುಕ್ ಇನ್ಮುಂದೆ ಯಾರಿಗಾದರೂ ಹಣಕಾಸಿನ ಅವಶ್ಯಕತೆ ಇದ್ದಾರೆ ಅದನ್ನು ಪೂರೈಸುತ್ತದೆ. ಫ್ರೆಂಡ್ಸ್ ಗಳ ಮೂಲಕ ಸಾಲ ಪಡೆದುಕೊಳ್ಳುವ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

https://www.facebook.com/fundraisers

 

ಎಂಬ ಲಿಂಕ್ ಮೂಲಕ ಯಾರು ಬೇಕಾದರು ಫೇಸ್ ಬುಕ್ ನಲ್ಲಿ ಹಣಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಈ ಬೇಡಿಕೆಗೆ ಯೂಸರ್ ನ ಫೇಸ್ ಬುಕ್ ಫ್ರೆಂಡ್ಸ್ ಜೊತೆ ಲಿಂಕ್ ಮಾಡಿ ಹಣ ಕಲ್ಪಿಸಿಕೊಡಲಾಗುತ್ತದೆ.ಅದು ದಾನ ಅಥವಾ ಸಾಲದ ರೂಪದಲ್ಲಿರಬಹುದು. ತಮಗೆ ಅವಶ್ಯವಿರುವ ಮೊತ್ತ ಪೂರ್ಣ ಪ್ರಮಾಣದಲ್ಲಿ ಸಿಗದಿದ್ದರೂ ತಮ್ಮ ಫೇಸ್ ಬುಕ್ ಮೂಲಕ ಮೂಲಕ ಮೊತ್ತವನ್ನು ಬ್ಯಾಂಕಿಗೆ ವರ್ಗಾಯಿಸಿಕೊಳ್ಳಬಹುದು. ಆದರೆ, ಈ ಪ್ರಕ್ರಿಯೆಗಾಗಿ ಫೇಸ್ ಬುಕ್ ಗೆ ಸ್ವಲ್ಪ ಹಣವನ್ನು ನೀಡಬೇಕಾಗಿರುತ್ತದೆ.

ಯೂಸರ್ ಗಳು ಈ ವಹಿವಾಟಿನಲ್ಲಿ ಹಣವನ್ನು ಪಡೆದುಕೊಂಡರೆ ಆ ಹಣದ ಶೇ. 6.9%ರಷ್ಟು ಹಣವನ್ನು ಫೇಸ್ ಬುಕ್ ಗೆ ಕೊಡಬೇಕಾಗುತ್ತದೆ. ಹಣವನ್ನು ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯ ಮುಖಾಂತರ ಪಡೆದುಕೊಳ್ಳಬಹುದು.ಹಣಕ್ಕಾಗಿ ಬೇಡಿಕೆ ಸಲ್ಲಿಸುವಾಗ ಹಣ ಯಾವ ಕಾರಣಕ್ಕೆ ಅವಗ್ಯವಿದೆ ಎಂದು ತಿಳಿಸಬೇಕು. ನಷ್ಟವನ್ನು ಸರಿದೂಗಿಸಲು,ವಿದ್ಯಾಭ್ಯಾಸ,ವೈಯುಕ್ತಿಕ ಅಗತ್ಯ,ವೈದ್ಯಕೀಯ ಚಿಕಿತ್ಸೆ, ಅಂತ್ಯಕ್ರಿಯೆ, , ಕ್ರೀಡೆ, ಕನಿಟಿ ಹೀಗೆ ಅನೇಕ ವಿಭಾಗಗಳಿರುತ್ತವೆ. ಅವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬವೇಕು. ಹೀಗೆ ಸಂಬಂಧಿತ ವರ್ಗವನ್ನು ಆಯ್ದು ಕೊಂಡು, ಹಣಕ್ಕಾಗಿ ಬೇಡಿಕೆ ಸಲ್ಲಿಸಿ ಹಣವನ್ನು ಪಡೆಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Laxmi Taragar says:

I need money for my hospital treatment..

To Top