fbpx
ಮಾಹಿತಿ

ನಿಮ್ ಫ್ರೆಂಡ್ಸ್ ಗೆ ಸಾಲ ಕೊಡೋ ಮುಂಚೆ ಈ ವಿಷಯಗಳ್ನ ತಿಳ್ಕೊಂಡಿದ್ರೆ ಒಳ್ಳೇದು.

ನಿಮ್ ಫ್ರೆಂಡ್ಸ್ ಗೆ ಸಾಲ ಕೊಡೋ ಮುಂಚೆ ಈ ವಿಷಯಗಳ್ನ ತಿಳ್ಕೊಂಡಿದ್ರೆ ಒಳ್ಳೇದು. 

 

 

ಸಾಲ ಎನ್ನುವುದು ನಾವು ಕರಿಯದೆ ನಮ್ಮ ಮನೆಗೆ ಬರುವ ಅತಿಥಿ. ಸಾಲ ಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲವು ಸಂದರ್ಭಗಳು ಜನರನ್ನು ಸಾಲ ಮಾಡುವಂತೆ ಮಾಡುತ್ತದೆ. ಹೀಗೆ ಕಷ್ಟ ಎಂದು ಹೇಳಿಕೊಂಡು ಬಂದ ಗೆಳೆಯನಿಗೆ ಸಾಲ ನೀಡುವುದು ತುಂಬಾ ಸೂಕ್ಷ್ಮವಾದ ವಿಚಾರ. ಹೀಗೆ ಸಾಲ ಕೇಳಿಕೊಂಡು ಬಂದ ಗೆಳೆಯನಿಗೆ ಹಣ ಇಲ್ಲ ಎಂದು ಹೇಳುವುದು ಕಷ್ಟ ಯಾಕೆಂದರೆ ಅವನು ನಿಮ್ಮ ಸ್ನೇಹಿತ ಹಾಗೆ ಅವನಿಗೆ ಹಣ ನೀಡುವುದೂ ಕೂಡ ಕಷ್ಟ ಯಾಕೆಂದರೆ ಮುಂದೆ ಸಾಲವನ್ನು ವಾಪಸ್ಸು ಕೇಳುವಾಗ ಎಲ್ಲಿ ಅವನ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಮತ್ತು ಹಣ ವಾಪಸ್ಸು ಬರುತ್ತದೋ ಇಲ್ಲವೋ ಎಂಬ ಅನುಮಾನ ನಿಮ್ಮಲ್ಲಿ ಇರುತ್ತದೆ.

 

 

ನಿಮ್ಮ ಫ್ರೆಂಡ್ಸ್ ಗಳಿಗೆ ಸಾಲ ನೀಡುವ ಮುಂಚೆ ಯಾವ್ಯಾವ ವಿಷಯಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕೆಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ ಓದಿ ತಿಳಿದುಕೊಳ್ಳಿ .

1.ನೀವು ನಿಮ್ಮ ಗೆಳೆಯನಿಗೆ ಸಾಲ ಕೊಡುವಾಗ ಯಾವುದೇ ರೀತಿಯ ಕಾನೂನು ಆಧಾರಗಳನ್ನು ನೀವು ಪಡೆಯದಿದ್ದರೆ ಸರಿಯಾದ ಸಮಯದಲ್ಲಿ ಹಣವು ವಾಪಸ್ಸು ಬರುವುದು ಅನುಮಾನವಾಗಬಹುದು.

 

 

2.ಒಂದು ವೇಳೆ ಪಡೆದಿರುವ ಹಣವನ್ನು ನಿಮ್ಮ ಗೆಳೆಯರಿಗೆ ಸರಿಯಾದ ಸಮಯದಲ್ಲಿ ವಾಪಸ್ಸು ಕೊಡಲು ಸಾಧ್ಯವಾಗದಿದ್ದರೆ ಅವನಿಗೆ ಏನಾದರೂ ಆರ್ಥಿಕ ಸಮಸ್ಯೆ ಇದೆಯೇ ಎಂದು ನೀವೇ ತಿಳಿದುಕೊಂಡು ಅವನಿಗೆ ಮತ್ತಷ್ಟು ಸಮಯಾವಕಾಶವನ್ನು ಕೊಡುವುದು ಒಳ್ಳೆಯದು

 

 

3.ನಿಮ್ ಗೆಳೆಯ ನಿಮ್ಮ ಹತ್ತಿರ ಸಾಲ ಕೇಳಿದರೆ ಸಾಲ ಪಡೆಯಬಹುದಾದ ಇತರ ಮಾರ್ಗ ಬಗ್ಗೆ ಸಲಹೆ ನೀಡಿ ಉದಾಹರಣೆಗೆ ಬ್ಯಾಂಕಿನ ಸಾಲ. ಒಡವೆ ಮೇಲೆ ಸಾಲ, ಪ್ರಾಪರ್ಟಿ ಸಾಲಗಳನ್ನು ತಿಳಿಸಿಕೊಡಿ

 

4.ನಿಮ್ಮ ಗೆಳೆಯನಿಗೆ ಸಾಲಕೊಡುವಾಗ ಕೇವಲ ನಂಬಿಕೆಯ ಮೇಲೆ ಹಣವನ್ನು ಕೊಡುವ ಬದಲು ಯಾವುದಾದರೂ ಒಂದು ರೀತಿಯ ಕಾನೂನು ದಾಖಲೆಯನ್ನು ಸಿದ್ಧಪಡಿಸಿಕೊಂಡು ಸಾಲವನ್ನು ನೀಡಿದರೆ ಉತ್ತಮ.

 

 

5.ನಿಮ್ಮ ಗೆಳೆಯನಿಗೆ ಸಾಲವನ್ನು ನೀಡುವಾಗ ದಾಖಲೆಯನ್ನು ಕೀಲಾಲು ಮುಜುಗರವಾದರೇ ಹಣವನ್ನು ಅವನ ಬ್ಯಾಂಕ್ ಅಕೌಂಟಿಗೆ ನೇರವಾಗಿ ಆನ್ಲೈನ್ ಬ್ಯಾಂಕಿಂಗ್ ಮೂಲಕ ಅಥವಾ ಚೆಕ್ ಮೂಲಕ ವರ್ಗಾಯಿಸಿ. ಹೀಗೆ ಮಾಡುವುದು ಕಾನೂನು ಮೂಲಕ ನಿಮಗೆ ದಾಖಲೆಯಾಗುತ್ತದೆ.

 

 

6.ಒಂದು ವೇಳೆ ನಿಮ್ಮ ನಿಮ್ಮ ಗೆಳೆಯ ಹಣವನ್ನು ನೀಡದೆ ಇದ್ದಾಗ ಅವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವ ಮುನ್ನ ಒಮ್ಮೆ ಯೋಚಿಸಿ ಏಕೆಂದರೆ ಕಾನೂನು ಕ್ರಮ ಕಳೆಯುವುದರಿಂದ ನಿಮ್ಮ ಗೆಳೆಯನನ್ನು ಕಳೆದುಕೊಳ್ಳುವುದರ ಜೊತೆಗೆ ಕ್ರಮ ಕೈಗೊಳ್ಳುವದಕ್ಕೆ ತಗುಲುವ ಖರ್ಚಿನ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top