fbpx
ಉದ್ಯೋಗ

ಕಾರ್ಮಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ನೀವು ಕೆಲಸ ಬಿಟ್ಟು ಬೇರೆ ಕೆಲಸ ಸೇರಿಕೊಂಡಾಗ ನಿಮ್ ಜೊತೆ ನಿಮ್ ಪಿಎಫ್ ಅಕೌಂಟ್ ಕೂಡ ಬರುತ್ತದೆ.

ಕಾರ್ಮಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ನೀವು ಕೆಲಸ ಬಿಟ್ಟು ಬೇರೆ ಕೆಲಸ ಸೇರಿಕೊಂಡಾಗ ನಿಮ್ ಜೊತೆ ನಿಮ್ ಪಿಎಫ್ ಅಕೌಂಟ್ ಕೂಡ ಬರುತ್ತದೆ.

 

 

 

ಮುಂದಿನ ದಿನಗಳಲ್ಲಿ ನೀವು ಉದ್ಯೋಗ ಬದಲಾಯಿಸಿದರೇ ಪಿಎಫ್ ಬಗ್ಗೆ ಯೋಚಿಸುವಂತಿಲ್ಲ, ಏಕೆಂದರೇ ಇನ್ನು ಮುಂದೆ ನಿಮ್ಮ ನೌಕರಿಯ ಜೊತೆಗೆ, ನಿಮ್ಮ ಪಿಎಫ್ ಬ್ಯಾಂಕ್ ಅಕೌಂಟ್ ಕೂಡ ವರ್ಗಾವಣೆಯಾಗಲಿದೆ.

 

 

 

ಸೆಪ್ಟೆಂಬರ್ ತಿಂಗಳಿನಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ನೌಕರರು ಕೆಲಸವನ್ನು ಬದಲಿಸಿದ ಸಂಸ್ಥೆಗೆ ನಿಮ್ಮ ಹಿಂದಿನ ಕಂಪನಿಯ ಪಿಎಫ್ ಹಣ ಮತ್ತು ಅಕೌಂಟ್ ಸ್ವಯಂ ವರ್ಗಾವಣೆಯಾಗುತ್ತದೆ. ಪಿಎಫ್‌ ಸೇರ್ಪಡೆಗೆ ಆಧಾರ್‌
ಅನ್ನು ಲಿಂಕ್ ಮಾಡುವುದು ಕಡ್ಡಾಯ ಗೊಳಿಸಲಾಗಿದೆ. ಹೀಗಾಗಿ ಕಾರ್ಮಿಕರು ಅದೇ ಖಾತೆಯನ್ನು ಉಳಿಸಿಕೊಳ್ಳಬಹುದು’ ಎಂದು ಭವಿಷ್ಯ ನಿಧಿ(ಪಿಎಫ್) ಮುಖ್ಯ ಆಯುಕ್ತ ವಿ.ಪಿ. ಜಾಯ್‌ ಹೇಳಿದ್ದಾರೆ.

 

 

ಒಬ್ಬ ವ್ಯಕ್ತಿ ಉದ್ಯೋಗ ಬದಲಿಸಿದಾಗ ಪಿಎಫ್ ಅಕೌಂಟ್ ನ ಯಾವುದೇ ಅರ್ಜಿಯನ್ನು ಹಾಕುವ ಅಗತ್ಯವಿಲ್ಲದೆ ಕೇವಲ ಮೂರೇ ದಿನಗಳಲ್ಲಿ ಖಾತೆಯ ವರ್ಗಾವಣೆಯಾಗಲಿದೆ. ಆಧಾರ್‌ ಐಡಿ ಮತ್ತು ದೃಢೀಕೃತ ಐಡಿ ಹೊಂದಿದ್ದರೆ ಸಾಕು, ಆತ ದೇಶದ ಯಾವುದೇ ಭಾಗಕ್ಕೆ ಹೋದರೂ ಖಾತೆ ವರ್ಗಾವಣೆಯಾಗುತ್ತದೆ.

 

 

ಈ ಹಿಂದೆ ಉದ್ಯೋಗ ಬದಲಿಸಿದ ಸಂದರ್ಭಗಳಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಬೇಕಿತ್ತು, ನಂತರ ಉದ್ಯೋಗಿಗಳು ಹೊಸ ಖಾತೆ ತೆರೆಯಬೇಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top