ಮನೋರಂಜನೆ

ಪಾಪ! ಮೀರಾ ಜಾಸ್ಮಿನ್ ಗೆ ಇಂಥ ದಾರುಣ ಸ್ಥಿತಿ ಬರಬಾರದಿತ್ತು.

ನಟಿ ಮೀರಾ ಜಾಸ್ಮಿನ್ ಗೆ ಈ ಗತಿ ಬರಬಾರದಿತ್ತು ಪಾಪ!

 


ಸುಂದರ ಮುಖದ ನಟಿ ಮೀರಾ ಜಾಸ್ಮಿನ್ ಕನ್ನಡದ 5 ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದು ಪ್ರೀತಿಯನ್ನು ಗಳಿಸಿದ್ದರು. ಆದರೆ ಅವರ ವ್ಯಯಕ್ತಿಕ ಜೀವನ ಮಾತ್ರ ಘೋರವಾದ ಸ್ಥಿತಿಗೆ ಬಂದು ನಿಂತಿದೆ, ಅದಕ್ಕೆ ಯಾರು ಕಾರಣ?

 


ಮೀರಾ ಜಾಸ್ಮಿನ್ ಚಿತ್ರರಂಗದಲ್ಲಿ ಉತ್ತಮ ಬೇಡಿಕೆಯಲ್ಲಿದ್ದಾಗ ಸಂಗೀತ ವಿದ್ವಾಂಸ ರಾಜೇಶ್ ಅವರನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದರು ನಂತರ ರಾಜೇಶ್ ಜೊತೆ ಬ್ರೇಕ್ ಅಪ್ ಆಗಿ, ದುಬೈನ ಸಾಫ್ಟ್ವೇರ್ ಇಂಜಿನಿಯರ್ ಅನಿಲ್ ಅವರನ್ನು ವಿವಾಹವಾಗಿದ್ದರು.

 

 

ಮೀರಾ ಜಾಸ್ಮಿನ್ ರನ್ನು ಮದುವೆಯಾದ ಅನಿಲ್ ಅವರಿಗೆ ಆಗಾಗಲೇ ಒಂದು ಮದುವೆಯಾಗಿತ್ತು, ಆದ್ರೆ, ಮೊದಲ ಹೆಂಡತಿಗೆ ವಿಚ್ಛೇದನ ಕೊಡುವುದಾಗಿ ಹೇಳಿದ್ದ, ಮದುವೆಯಾದ ಮೇಲೆ ಗಂಡನ ಜೊತೆ ದುಬೈನಲ್ಲಿ ನೆಲೆಸಿದ್ದರು ಮೀರಾ ಜಾಸ್ಮಿನ್.ಪುನಃ ಚಲನಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿದ್ದ ಮೀರಾ, ಗಂಡ ಅನಿಲ ರನ್ನು ಚಿತ್ರದಲ್ಲಿ ಅಭಿನಯಿಸುವುದಾಗಿ ಕೇಳಿದ್ದಾರೆ, ಆದ್ರೆ ಅನಿಲ್ ಇದಕ್ಕೆ ಒಪ್ಪಲಿಲ್ಲ, ಈ ವಿಷಯವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಲೇ ಇತ್ತು, ಇದರಿಂದ ಬೇಸರಗೊಂಡ ಗಂಡ ಅನಿಲ್ ತನ್ನ ಮೊದಲ ಹೆಂಡತಿ ಜೊತೆ ಸೇರಿಕೊಂಡಿದ್ದಾನೆ.

 

 

ಗಂಡನ ಮೇಲೆ ಕೋಪಗೊಂಡ ಮೀರಾ ಜಾಸ್ಮಿನ್ ಗಂಡನನ್ನು ಬಿಟ್ಟು ಭಾರತಕ್ಕೆ ವಾಪಸ್ ಬಂದಿದ್ದಾರೆ, ಆದರೆ ಇದನ್ನು ಕಂಡ ಆಕೆಯ ತಂದೆ ತಾಯಿ ಕೂಡ ಮೀರಾ ಜೊತೆ ಮಾತನಾಡುತ್ತಿಲ್ಲ, ಈಗ ಎಲ್ಲಾ ಇದ್ದರೂ ಒಂಟಿಯಾಗಿದ್ದಾರೆ ಮೀರಾ ಜಾಸ್ಮಿನ್!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top