ಮಾಹಿತಿ

ಏರ್ಟೆಲ್ ಕೊಟ್ಟ ಈ ಆಫರ್ ಕಂಡು ಜಿಯೋ ಸಿಮ್ ಗೆ ಗುಡ್ ಬೈ ಹೇಳುತ್ತಿರುವ ಗ್ರಾಹಕ.

ಏರ್ಟೆಲ್ ಕೊಟ್ಟ ಈ ಆಫರ್ ಕಂಡು ಜಿಯೋ ಸಿಮ್ ಗೆ ಗುಡ್ ಬೈ ಹೇಳುತ್ತಿರುವ
ಗ್ರಾಹಕ.

 

 


ಜಿಯೋ ಸಿಮ್ ಬಂದಾಗಿನಿಂದಲೂ ಬೇರೆ ಟೆಲಿಕಾಂ ಸಂಸ್ಥೆಗಳು ಒಂದರ ಮೇಲೊಂದು ಅಗ್ಗದ ಆಫರ್ ಗಳನ್ನು ನೀಡುತ್ತಿವೆ. ಅವುಗಳಲ್ಲಿ ಪ್ರಮುಖವಾದವುದೆಂದರೆ ಏರ್ಟೆಲ್ ನೀಡಿರುವ ಆಫರ್. ಭಾರತದ ನಂಬರ್ 1 ಟೆಲಿಕಾಂ ಸಂಸ್ಥೆ ಎಂದೇ ಹೆಸರಾಗಿರುವ ಏರ್ಟೆಲ್ ತನ್ನ ಕಾಲ್ ರೇಟ್, ಡೇಟಾ ದರಗಳನ್ನು ಇಳಿಸಿಕೊಂಡು ಬರಿತ್ತಿದೆ. ಇದೀಗ ಮತ್ತೊಂದು ಆಫರ್ ಅನ್ನು ಬಿಡುಗಡೆಗೊಳಿಸಿದ್ದು ಆ ಆಫರ್ ಜಿಯೋ ಸಿಮ್ ಗೆ ಸೆಡ್ಡು ಹೊಡೆಯುವಂತಿದೆ.

 

 

ಸುಮಾರು ಮೂರು ತಿಂಗಳ ಅವಧಿಗೆ ಬಿಡುಗಡೆಗೊಳಿಸಿರುವ ಈ ಭರ್ಜರಿ ಆಫರ್ ನಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ಭಾರಿ ಕೊಡುಗೆಯನ್ನು ನೀಡಿದೆ. ಜಿಯೋ ನ ರೀತಿಯಲ್ಲೇ ಆಫರ್ ಘೋಷಣೆ ಮಾಡಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ₹399 ಕ್ಕೆ 84 ದಿನಗಳ ಕಾಲ ಪ್ರತಿನಿತ್ಯ 1gb ಡೇಟಾವನ್ನು ನೀಡಲಿದ್ದು ಎಲ್ಲಾ ಸ್ಥಳೀಯ ಮತ್ತು std ಕಾಲ್ ಗಳು ಉಚಿತವಾಗಿರಲಿದೆ.

ಈ ಆಫರ್ ನಿಂದ ಏರ್ಟೆಲ್ ಗ್ರಾಹಕರು ಹೇಗೆ ಒಂದು ದಿನಕ್ಕೆ 1gb ಇಂಟರ್ನೆಟ್ ಪಡೆದುಕೊಳ್ಳುತ್ತಾರೋ ಹಾಗೆ ಪ್ರತಿವರಕ್ಕೆ ಒಂದು ಸಾವಿರ ನಿಮಿಷ ಗಳ ಕರೆಗಳು ಮಾತ್ರವೇ ಉಚಿತವಾಗಿರುತ್ತವೆ. ಅದಕ್ಕಿಂತ ಹೆಚ್ಚು ಸಮಯ ಕರೆಯನ್ನು ಮಾಡಿದರೆ ಬೇರೆ ದರಗಳನ್ನು ವಿಧಿಸಲಾಗುತ್ತದೆ. ಇಂದಿನ ದಿನಗಳಲ್ಲಿ SMS ಮಾಡುವವರ ಸಂಖ್ಯೆ ಬಹಳ ಕಮ್ಮಿ ಇರುವುದರಿಂದ ಉಚಿತ SMS ಸೌಲಭ್ಯವನ್ನು ಈ ಆಫರ್ ನಲ್ಲಿ ಅಳವಡಿಸಿಲ್ಲ.

 

ಜಿಯೋ ಕೂಡ ಇದೆ ರೀತಿ 84 ದಿನಗಳಿಗೆ ಪ್ರತಿದಿನ 1gb ಇಂಟರ್ನೆಟ್ ಮತ್ತು ಫ್ರೀ ಕರೆಗಳ ನೀಡುವ ಆಫರ್ ಅನ್ನು ಹೊಂದಿದ್ದು ಜಿಯೋ ಕೂಡ ಈ ಆಫರ್ ಗೆ 399 ರೂಗಳನ್ನು ನಿಗದಿಪಡಿಸಿದೆ. ನಗರ ಮತ್ತು ಗ್ರಾಮೀಣ ಎಲ್ಲಾ ಭಾಗಗಳಲ್ಲೂ ಕೂಡ ಜಿಯೋಗಿಂತ ಚನ್ನಾಗಿ ಏರ್ಟೆಲ್ network ಸಿಗುವುದರಿಂದ ಗ್ರಾಹಕ ಮತ್ತೊಮ್ಮೆ ಏರ್ಟೆಲ್ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾನೆ.

 

 

ಒಟ್ನಲ್ಲಿ ಈ ದರ ಕಡಿಮೆ ಮಾಡುವ ಸಮರದಲ್ಲಿ ಟೆಲಿಕಾಂ ಸಂಸ್ಥೆಗಳಿಗೆ ಆಗುವ ಅನುಕೂಲಗಳಿಗಿಂತ ಗ್ರಾಹಕರಿಗಾಗುತ್ತಿರುವ ಅನುಕೂಲಗಳು ಹೆಚ್ಚಾಗುತ್ತಿವೆ. ಆದರೆ ಗ್ರಾಹಕ ಸ್ವಲ್ಪ ಬುದ್ಧಿವಂತಿಕೆಯಿಂದ ಪ್ಲಾನ್ ಗಳನ್ನ ಆಯ್ಕೆ ಮಾಡಿಕೊಳ್ಳಬೇಕಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

4 Comments
Lavakumarby says:

Airtel net speed illa Jio best

varadaraju says:

ಏರ್ ಟೆಲ್ ಪ್ರಪಂಚದ ಅತಿ ದೊಡ್ಡ ದರೋಡೆಕೋರ ಕಂಪನಿ. ಈವರೆಗೆ ಭಾರತೀಯರನ್ನು ದರೋಡೆ ಮಾಡಿರೋದೆ ಸಾಕು ಮಿತ್ರರೇ. ಒಂದು ವೇಳೆ ಜಿಯೋ ಬರದೇ ಇದ್ದಿದ್ದರೆ ಏರ್ಟೆಲ್ ಕಂಪನಿ ಇಡೀ ದೇಶವನ್ನೇ ಕೊಂಡುಕೊಳ್ಳುತ್ತಿದ್ದರು.
ಜೈ ಜಿಯೋ

pradeep says:

13 – 14 varshadalli ella telecom companygalu grahakara hatra chennagi sulige madiddare.

Ranganath says:

Jio is the best network and speed data compare to airtel … dont choose airtel dear frnds it is waste off money

To Top