ಇತರೆ

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಈ ಆದೇಶದಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಜ್ಯದ 6000 ಶಿಕ್ಷಕರು!

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಈ ಆದೇಶದಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಜ್ಯದ 6000 ಶಿಕ್ಷಕರು! 

 

 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಹೊಸ ಆದೇಶವೊಂದು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಭಯವನ್ನುಂಟು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೆ.

 

 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಹೊಸ ಆದೇಶದ ಪ್ರಕಾರ ರಾಜ್ಯದಲ್ಲಿರುವ ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಡಿಪ್ಲೊಮಾ ಇನ್ ಎಜುಕೇಷನ್ (ಡಿ.ಎಡ್) ಅರ್ಹತೆಯನ್ನು ಪೂರ್ಣಗೊಳಿಸಿರಬೇಕು ಎಂದು ಸೂಚನೆ ನೀಡಿದೆ..ಆದರೆ ರಾಜ್ಯದ ಸುಮಾರು 6,000 ಶಿಕ್ಷಕರು ಡಿಪ್ಲೊಮಾ ಇನ್ ಎಜುಕೇಷನ್ (ಡಿ.ಎಡ್) ಅರ್ಹತೆಯನ್ನು ಪೂರ್ಣಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.

 

 

ಡಿಪ್ಲೊಮಾ ಇನ್ ಎಜುಕೇಷನ್ (ಡಿ.ಎಡ್) ಅರ್ಹತೆಯನ್ನು ಪೂರ್ಣಗೊಳಿಸಿಲ್ಲದ ಎಲ್ಲಾ ಶಿಕ್ಷಕರು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‍ಐಒಎಸ್) ಸಂಸ್ಥೆಯಿಂದ ಮುಕ್ತ ಮತ್ತು ದೂರಶಿಕ್ಷಣದ ಮೂಲಕ 31ನೇ ಮಾರ್ಚ್ 2019ರ ಒಳಗೆ ಈ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಬೇಕು ನಿಗದಿತ ಅವಧಿಯೊಳಗೆ ಅಗತ್ಯ ತರಬೇತಿ ಪಡೆಯಲು ವಿಫಲವಾಗುವ ಯಾವುದೇ ಶಿಕ್ಷಕ, ಶಿಕ್ಷಕಿಯರನ್ನು ವಜಾಗೊಳಿಸಲಾಗುವುದು ಎಂದು ಎಂದು ಸಚಿವಾಲಯ ನಿರ್ದೇಶನ ಎಚ್ಚರಿಕೆ ನೀಡಿದೆ.

 

 

ಈ ಸಂಬಂಧ ರಾಜ್ಯ ಸರ್ಕಾರಗಳು ಶಾಲೆಗಳಿಗೆ ಅಂತಿಮ ಗಡುವಿನ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಶಿಕ್ಷಕರು ಈ ವಿದ್ಯಾರ್ಹತೆ ಹೊಂದುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅನಿತಾ ಕಾರ್ವಾಲ್ ತಿಳಿಸಿದ್ಧಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top