ಇತರೆ

ಐಸಿಸ್ ಉಗ್ರರು ಈ ಹುಡುಗಿಯ ತಲೆಗೆ ಘೋಷಣೆ ಮಾಡಿದ ಬಹುಮಾನದ ಮೊತ್ತವನ್ನು ಕೇಳಿದರೆ ಶಾಕ್ ಆಗ್ತೀರಾ! ಅಷ್ಟಕ್ಕೂ ಅಷ್ಟು ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದೇಕೆ ಗೊತ್ತಾ?

ಐಸಿಸ್ ಉಗ್ರರು ಈ ಹುಡುಗಿಯ ತಲೆಗೆ ಘೋಷಣೆ ಮಾಡಿದ ಬಹುಮಾನದ ಮೊತ್ತವನ್ನು ಕೇಳಿದರೆ ಶಾಕ್ ಆಗ್ತೀರಾ!ಅಷ್ಟಕ್ಕೂ ಅಷ್ಟು ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದೇಕೆ ಗೊತ್ತಾ?

 

 

ಕುಖ್ಯಾತ ಐಸಿಸ್‌ ಉಗ್ರರ ರುಂಡ ಚೆಂಡಾಡಿದ್ದ ಕುರ್ದಿಶ್‌-ಡ್ಯಾನಿಶ್‌ ಯುವತಿ ಯೋರ್ವಳ ವಿರುದ್ಧ ಐಸಿಸ್‌ ಕೆಂಡಾಮಂಡಲ ವಾಗಿದ್ದು, ಆಕೆಯ ತಲೆಗೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದೆ. ಈ ಹುಡುಗಿ ಐಸಿಸ್ ಭಯೋತ್ಪಾದಕರ ಬೆವರು ಇಳಿಸಿದ್ದಾಳೆ.

 

 

2014ರಲ್ಲಿ ವಿಶ್ವವಿದ್ಯಾಲಯದಿಂದ ಹೊರಬಿದ್ದ 23 ವರ್ಷ ವಯಸ್ಸಿನ ಜೋನ್ನಾ ಪಲಾನಿ ಎಂಬ ಯುವತಿ ಡೆನ್ಮಾರ್ಕ್‌ನವಳಾಗಿದ್ದು ಇರಾಕ್‌-ಸಿರಿಯಾದಲ್ಲಿ ಐಸಿಸ್‌ ಉಗ್ರರ ವಿರುದ್ಧ ದಿಟ್ಟವಾಗಿ ಹೋರಾಡಿದ್ದಳು. ಈ ಪರಿಣಾಮ ಆಕೆಯನ್ನು ಹತ್ಯೆಗೈದವರಿಗೆ ಬಹುಮಾನ ನೀಡುವುದಾಗಿ ಐಸಿಸ್‌ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಕಟಿಸಿದೆ ಎಂದು ಅರಬ್‌ ಮಾಧ್ಯಮಗಳು ವರದಿ ಮಾಡಿವೆ.

 

 

ಅಷ್ಟಕ್ಕೂ ಜೊನ್ನಾಳ ತಲೆಯ ಮೇಲೆ ವಿಧಿಸಲಾಗಿದ್ದ ಬಹುಮಾತಾ ಎಷ್ಟು ಅಂದರೆ ಅದು ಬರೋಬ್ಬರಿ ಹತ್ತು ಮಿಲಿಯನ್ ಡಾಲರ್ ಅಂದರೆ 60 ಕೋಟಿ ರೂಪಾಯಿಗೂ ಹೆಚ್ಚು.ಸದ್ಯ ಜೋನ್ನಾ ಕೋಪನ್‌ಹೇಗನ್‌ನಲ್ಲಿ ಬಂಧನದಲ್ಲಿದ್ದಾಳೆ. ಆಕೆ ಅಪರಾಧ ಸಾಬೀತಾದರೆ ಆಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ. 2014ರಲ್ಲಿ ಐಸಿಸ್‌ ವಿರುದ್ಧ ಹೋರಾಟಕ್ಕಾಗಿ ಆಕೆ ರಾಜ್ಯಶಾಸ್ತ್ರ ಪದವಿ ಕಲಿಕೆಯನ್ನು ಅರ್ಧಕ್ಕೇ ತ್ಯಜಿಸಿದ್ದು, ಕುರ್ದಿಶ್‌ ಪೀಪಲ್ಸ್‌ ಪ್ರೊಟೆಕ್ಷನ್‌ ಯುನಿಟ್ಸ್‌ (ವೈಪಿಜಿ) ಸೇರಿ ಉತ್ತರ ಸಿರಿಯಾ ಮತ್ತು ಇರಾಕ್‌ನ ಪೆಶಮೆರ್ಗದಲ್ಲಿ ಐಸಿಸ್‌ ವಿರುದ್ಧ ಹೋರಾಡಿದ್ದಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top