ಮಾಹಿತಿ

ಈ ವಿಷಯಗಳಲ್ಲಿ 2000ನೇ ಇಸವಿಯ ಒಳಗೆ ಹುಟ್ಟಿದವರೇ ನಿಜವಾದ ಅದೃಷ್ಟವಂತರು ಹೇಗೆ ಅಂತೀರಾ? ಇಲ್ಲಿ ನೋಡಿ.

2000ನೇ ಇಸವಿಯ ಒಳಗೆ ಹುಟ್ಟಿದವರೇ ನಿಜವಾದ ಅದೃಷ್ಟವಂತರು ಹೇಗೆ ಅಂತೀರಾ? ಇಲ್ಲಿ ನೋಡಿ.

 

 

2000ನೇ ಇಸವಿಯ ನಂತರ ಹುಟ್ಟಿದ ಮಕ್ಕಳಿಗೆ ಹೋಲಿಸಿದರೆ 2000ನೇ ಇಸವಿಯ ಒಳಗೆ ಹುಟ್ಟಿದ ಮಕ್ಕಳು ತುಂಬಾ ಅದೃಷ್ಟವಂತರು ಹಾಗೂ ಪುಣ್ಯವಂತರು. ಇದಕ್ಕೆ ಪೂರಕವಾಗುವಂತಹ ಕೆಲವು ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ ನೋಡಿ.

1. 2000ನೇ ಇಸವಿಯ ಒಳಗೆ ಹುಟ್ಟಿದ ಮಕ್ಕಳು ಪ್ರಾಣಿಗಳಂತೆ ಹೆಣಭಾರದ ಪುಸ್ತಕಗಳನ್ನು ಹೊತ್ತು ಹೋಗುತ್ತಿರಲಿಲ್ಲ. ಸ್ನೇಹಿತರ ಜೊತೆ ಆಟ ಆಡುವಾಗ, ಸೈಕಲ್ ಓಡಿಸುವಾಗ ಹೆಲ್ಮೆಟ್ ಧರಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ.

 

 

2.2000ನೇ ಇಸವಿಯ ಒಳಗೆ ಹುಟ್ಟಿದ ಮಕ್ಕಳು ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ಆಟವಾಡುತ್ತಿದ್ದರು. ಅವರಿಗೆ ಟಿವಿ,ಮೊಬೈಲ್ ಕಂಪ್ಯೂಟರ್ ಗಳ ತಂಟೆಯೇ ಇರಲಿಲ್ಲ. ಮತ್ತು ಅವರು ಆಡಿದ್ದು ಕುಣಿದಿದ್ದು ಜಗಳವಾಡಿದ್ದು ಅವರ ನಿಜವಾದ ಫ್ರೆಂಡ್ಸ್ ಗಳ ಜೊತೆ ಮಾತ್ರ ಇಂದಿನವರ ರೀತಿ ಮುಖ-ಮೋರೆ ನೋಡದ ಭೇಟಿಯಾಗದ ಆನ್ ಲೈನ್ ಫೇಸ್ಬುಕ್ ಗೆಳೆಯರೊಂದಿಗಲ್ಲ.

 

 

3. ಬಾಯಾರಿಕೆಯಾದಾಗ ಆರಾಮಾಗಿ ನಲ್ಲಿ ನೀರನ್ನೋ, ಹಳ್ಳದ ನೀರನ್ನೋ, ಕೆರೆ ಬಾವಿಯ ನೀರನ್ನೋ ಕುಡಿದರು ಈಗಿನವರಾಗೇ ಬಾಟಲಿ ನೀರಿಗಾಗಿ ಹುಡುಕಾಡಲಿಲ್ಲ. ಒಂದೇ ಹಣ್ಣನ್ನು ನಾಲ್ಕು ಜನ ಕಚ್ಚಿ ತಿಂದೆವು, ಒಂದೇ ಲೋಟದಲ್ಲಿ ನಾಲ್ಕು ಗೆಳೆಯರು ಕಚ್ಚಿ ನೀರು ಕುಡಿದರೂ ಅವರಿಗೇನು ಆಗುತ್ತಿರಲಿಲ್ಲ ಮತ್ತು ಯಾವ ರೋಗವೂ ಬರುವ ಭಯವೂ ಇರಲಿಲ್ಲ.

 

 

4.2000ನೇ ಇಸವಿಯ ಒಳಗೆ ಹುಟ್ಟಿದವರಾದ ನಾವು ಬರಿಗಾಲಲ್ಲೇ ಊರೂರು ಸುತ್ತಿದರೂ, ನಮ್ಮ ಕಾಲು-ಪಾದಗಳಿಗೇನೂ ಆಗಲಿಲ್ಲ, ರೋಗಾಣು,ಕ್ರಿಮಿ ಕೀಟಗಳು ಅಂಟಿಕೊಳ್ಳಲಿಲ್ಲ.

 

 

5. 2000ನೇ ಇಸವಿಯ ಒಳಗೆ ಹುಟ್ಟಿದವರಾದ ನಾವು ಆಟವಾಡಲು ಆಟದ ಸಾಮಾನುಗಳನ್ನು ನಾವೇ ತಯಾರಿಸಿಕೊಳ್ಳುತ್ತಿದ್ದೆವು ಅದನ್ನು ಬಿಟ್ಟು ಇಂದಿನವರ ಹಾಗೆ ಆ ಆಟಿಕೆ ಕೊಡಿಸಿ ಈ ಆಟಿಕೆ ಕೊಡಿಸಿ ಎಂದು ತಂದೆ ತಾಯಿಯರನ್ನು ಪೀಡುಸುತ್ತಿರಲಿಲ್ಲ .

 

 

6. ಆಗ ನಮ್ಮ ನೆಂಟರ ಮನೆಗೆ, ಅಜ್ಜಿ ಮನೆಗೆ ಹೋಗಬೇಕು ಅನಿಸಿದಾಗಲೆಲ್ಲಾ ಹೋಗಿ ಆಟವಾಡಿ ಕಾಲ ಕಳೆದು ಬರಬಹುದಾಗಿತ್ತು ಆದರೆ ಸಂಭಂದಿಕರ ಮನೆಗೆ ಹೋಗಲು ಕಾಲ್ ಮಾಡಿ ಪರ್ಮಿಷನ್ ಕೇಳಬೇಕಾದ ಈಗಿರುವ ಪರಿಸ್ಥಿತಿ ಆಗಿರಲಿಲ್ಲ. 2000ನೇ ಇಸವಿಯ ಒಳಗೆ ಹುಟ್ಟಿದ ಮಕ್ಕಳ ಜೊತೆಯಲ್ಲಿ ಅಕ್ಕಪಕ್ಕದವರು,ಸಂಭಂದಿಕರು, ಹಿತೈಷಿಗಳೂ ಇದ್ದರು. ಇನ್ಷೂರನ್ಸ್ ಇಲ್ಲದೆಯೂ ಅವರು ಬದುಕಬಹುದಿತ್ತು.

 

7.2000ನೇ ಇಸವಿಯ ಒಳಗೆ ಹುಟ್ಟಿದವರಾದ ನಮ್ಮ ಫೋಟೋಗಳು ಹೆಚ್ಚಾಗಿ ಬ್ಲಾಕ್ ಆಂಡ್ ವೈಟ್ ಇರಬಹುದು;
ಆದರೆ, ನಮ್ಮ ಬಾಲ್ಯದ ಸವಿ ನೆನಪುಗಳು ಸಕತ್ ಕಲರ್ ಫುಲ್ ಆಗಿವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Keerthi Y G says:

Ya 100% correct remenber such a beautiful moments I like that type of life,

To Top