fbpx
ಸಮಾಚಾರ

ಗೌರಿ ಹಬ್ಬದಂದೇ ಡೈವೋರ್ಸ್ ಕೇಸ್ ವಾಪಾಸ್ ತೆಗೆದುಕೊಂಡ ಕಿಚ್ಚಸುದೀಪ್ ದಂಪತಿ.

ಗೌರಿ ಹಬ್ಬದಂದೇ ಡೈವೋರ್ಸ್ ಕೇಸ್ ವಾಪಾಸ್ ತೆಗೆದುಕೊಂಡ ಕಿಚ್ಚಸುದೀಪ್ ದಂಪತಿ.

 

 

ಸ್ಯಾಂಡಲ್ ವುಡ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಂಸಾರಿಕ ಜೀವನದಲ್ಲಿ ಹೊಸ ಚಿಗುರು ಮೂಡಿದೆ, ಗೌರಿ ಹಬ್ಬ ಕಿಚ್ಚ ಸುದೀಪ್ ಮತ್ತು ಪ್ರಿಯ ಸುದೀಪ್ ರವರ ಬಾಳಲ್ಲಿ ಸಂತಸ ತಂದಿದೆ. ವಿಚ್ಛೇದನವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಟ ಸುದೀಪ್ ದಂಪತಿಗಳಿಬ್ಬರು ಪರಸ್ಪರ ಒಪ್ಪಿಗೆಯಿಂದ ಮೇರೆಗೆ ಹಿಂದಕ್ಕೆ ಪಡೆದಿದ್ದಾರೆ. ಮಗಳ ಭವಿಷ್ಯದ ಹಿತದೃಷ್ಟಿಯಿಂದ ಸುದೀಪ್​ ದಂಪತಿ ವಿಚ್ಛೇದನ ಅರ್ಜಿ ಹಿಂಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

 

 

2015ರಲ್ಲಿ ಸುದೀಪ್‌- ಪ್ರಿಯಾ ರಾಧಾಕೃಷ್ಣನ್ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದರು.ಇವರ ವಿಚ್ಚೇದನ ಅರ್ಜಿಯ ವಿಚಾರಣೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಅರ್ಜಿ ವಿಚಾರಣೆ ವೇಳೆ ಇಬ್ಬರೂ ಭಾಗಿಯಾಗಿರಲಿಲ್ಲ. ಆಗಲೇ ಇವರಿಬ್ಬರು ಮತ್ತೆ ಒಂದಾಗುವ ಸೂಚನೆ ಸಿಕ್ಕಿತು. ಇಬ್ಬರೂ ಜತೆಯಾಗಿ ಕೆಲವೊಂದು ಸಾರ್ವಜನಿಕ ಸಮಾರಂಭದಲ್ಲೂ ಕಾಣಿಸಿಕೊಂಡಿದ್ದರು.

 

 

ನಮ್ಮ ಇಬ್ಬರ ನಡುವಿನ ವೈಮನಸ್ಸು ಬಗೆಹರಿದಿದ್ದು ನಾವು ಒಟ್ಟಿಗೆ ಸಹ ಜೀವನ ನಡೆಸುತ್ತೇವೆ ಎಂದು ಸುದೀಪ್ ಮತ್ತು ಪ್ರಿಯಾ ಸಹಿ ಮಾಡಿರುವ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸುದೀಪ್‌ ದಂಪತಿಯ ವಿಚ್ಚೇದನ ವಾಪಾಸು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದು ಸುದೀಪ್ ಪರ ವಕೀಲ ಭಾಸ್ಕರ್ ತಿಳಿಸಿದ್ದಾರೆ.

 

 

ದಂಪತಿಯ ಮನವಿಯನ್ನು ಬೆಂಗಳೂರಿನಲ್ಲಿರುವ ಪ್ರಧಾನ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ.. ಸುದೀಪ್ ವಿದೇಶದಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಿರುವುದರಿಂದ ಸುದೀಪ್ ಪರ ವಕೀಲರು ಪ್ರಿಯಾ ಅವರ ಸಹಿಯಿರುವ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top