fbpx
ಮನೋರಂಜನೆ

ದರ್ಶನ್ ಅವರ ಈ ಹೊಸ ತೀರ್ಮಾನಕ್ಕೆ ಎಲ್ಲಾಕಡೆ ಪ್ರಶಂಶೆ ವ್ಯಕ್ತವಾಗುತ್ತಿದೆ.

ದರ್ಶನ್ ಅವರ ಈ ಹೊಸ ತೀರ್ಮಾನಕ್ಕೆ ಎಲ್ಲಾಕಡೆ ಪ್ರಶಂಶೆ ವ್ಯಕ್ತವಾಗುತ್ತಿದೆ.

 

 

ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ ಒಂದು ಚಿತ್ರದ ಚಿತ್ರೀಕರಣ 30-40 ದಿನಗಳಲ್ಲಿ ಮುಗಿಯುತ್ತವೆ. ಆದರೆ ಕೆಲವು ಸ್ಟಾರ್ ನಂತರ ಸಿನಿಮಾಗಳೂ 6 ತಿಂಗಳಾದರೂ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾ ಅಂದ್ರೆ ದೊಡ್ಡ ಶೆಡ್ನೂಲ್‌. ಹೀರೋ ಡೇಟ್ಸ್‌ ನೂರು ದಿನ ಬೇಕು. ವಿದೇಶ ಚಿತ್ರೀಕರಣ ಮಾಡಲೇಬೇಕು ಎಂಬ ಮೈಂಡ್‌ಸೆಟ್‌ನಿಂದಲೇ ಬರುವ ನಿರ್ಮಾಪಕ, ನಿರ್ದೇಶಕರಿದ್ದಾರೆ.

 

 

ಹೀಗೆ ಹೆಚ್ಚು ದಿನಗಳನ್ನು ಒಂದೇ ಚಿತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಟಾರ್ ಗಳು ಬೇರೆ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗೋದಿಲ್ಲ ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಒಂದು ಹೊಸ ತೀರ್ಮಾನಕ್ಕೆ ಬಂದಿದ್ದಾರೆ.ಆ ತೀರ್ಮಾನ ಯಾವುದು ಎಂದು ತಿಳಿಯಲು ಮುಂದೆ ಓದಿ.

 

 

ಇನ್ನು ಮುಂದೆ ಒಂದು ಚಿತ್ರಕ್ಕೆ 65 ದಿನಕ್ಕಿಂತ ಹೆಚ್ಚಾಗಿ ಕಾಲ್‍ಶೀಟ್ ಕೊಡಬಾರದು ಎಂದು ದರ್ಶನ್ ತೀರ್ಮಾನಿಸಿದ್ದಾರೆ. ಹೌದು, ಯಾವುದೇ ಚಿತ್ರಕ್ಕಾದರೂ 65ದಿನಕ್ಕಿಂತ ಹೆಚ್ಚು ಡೇಟ್ಸ್ ಕೊಡುವುದಿಲ್ಲ ಎಂಬ ನಿರ್ಧಾರವನ್ನು ದರ್ಶನ್ ತೆಗೆದುಕೊಂಡಿದ್ದಾರೆ. ಒಂದು ವೇಳೆ ಹೆಚ್ಚು ಕಡಿಮೆಯಾದರೆ ಐದು ದಿನಗಾಲ ಹೆಚ್ಚುವರಿ ಡೇಟ್ಸ್ ಕೊಡುತ್ತಾರಂತೆ. ಅಲ್ಲಿಗೆ 70 ದಿನಗಳಿಗಿಂತ ಹೆಚ್ಚಾಗಿ ಡೇಟ್ಸ್ ಕೊಡಬಾರದು ಎಂಬ ನಿರ್ಧಾರ ಅವರದು.

 

 

ದರ್ಶನ್‌ರ ಈ ನಿರ್ಧಾರಕ್ಕೆ ಈಗ ಎಲ್ಲಾ ಕಡೆಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದು,ಎಲ್ಲವೂ ಅಂದುಕೊಂಡಂತೆ ಆದರೆ ದರ್ಶನ್ ಅಭಿಮಾನಿಗಳು ಮೂರು ತಿಂಗಳಿಗೊಮ್ಮ ಹೊಸ ಸಿನಿಮಾ ನೋಡಬಹುದು. ಹಾಗಾಗಿ ದರ್ಶನ್ ಅವರ ಈ ನಿರ್ಧಾರದಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top