fbpx
ಮನೋರಂಜನೆ

ಚಿತ್ರರಂಗಕ್ಕೆ ಕಾಲಿಟ್ಟ ಉಪ್ಪಿ ಮಗಳು! ಉಪ್ಪಿ ಮಗಳ ಮೊದಲ ಚಿತ್ರ ಯಾವುದು ಗೊತ್ತಾ?

ಚಿತ್ರರಂಗಕ್ಕೆ ಕಾಲಿಟ್ಟ ಉಪ್ಪಿ ಮಗಳು! ಉಪ್ಪಿ ಮಗಳ ಮೊದಲ ಚಿತ್ರ ಯಾವುದು ಗೊತ್ತಾ?

 

 

ರಿಯಲ್ ಸ್ಟಾರ್ ಉಪೇಂದ್ರ ಅವರ ಮುದ್ದಿನ ಮಗಳಾದ ಐಶ್ವರ್ಯ ಉಪೇಂದ್ರ ಈಗ ಸಿನಿಮಾಲೋಕಕ್ಕೆ ಕಾಲಿಡುತ್ತಿದ್ದಾರೆ. ತನ್ನ ಅಪ್ಪ-ಅಮ್ಮನ ರೀತಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಐಶ್ವರ್ಯ ರೆಡಿಯಾಗಿದ್ದಾರೆ.

 

 

ಐಶ್ವರ್ಯ ಉಪೇಂದ್ರ ಮೊದಲಬಾರಿಗೆ ನಟಿಸುತ್ತಿರುವ ಆ ಹೊಸ ಚಿತ್ರ ಯಾವುದು ಎಂದರೆ ಅದು “ಹೌರಾ ಬ್ರಿಡ್ಜ್”. ತನ್ನ ತಾಯಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ಹೊಸ ಚಿತ್ರ ‘ಹೌರಾ ಬ್ರಿಡ್ಜ್’ ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ಕೂಡ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ.

 

 

ಹೌರಾ ಬ್ರಿಡ್ಜ್’ ಚಿತ್ರದಲ್ಲಿಉಪ್ಪಿ ಮಗಳು ನಟಿಸುವುದು ಪಕ್ಕಾ ಆಗಿದ್ದು, ಅವರ ಪಾತ್ರದ ಬಗ್ಗೆ ಮಾಹಿತಿ ಹೊರ ಬಂದಿಲ್ಲ. ಆದರೆ ಆ ಚಿತ್ರದಲ್ಲಿ ಐಶ್ವರ್ಯ ಒಂದು ಮಹತ್ವದ ಪಾತ್ರವನ್ನು ಮಾಡಲಿದ್ದಾರಂತೆ.ಈ ಹಿಂದೆ ಪ್ರಿಯಾಂಕ ಉಪೇಂದ್ರ ಅವರ ‘ಮಮ್ಮಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ.

 

 

ಈ ಚಿತ್ರದ ಚಿತ್ರೀಕರಣ ಕೋಲ್ಕೊತ್ತಾದಲ್ಲೇ ನಡೆಯುವ ಕಾರಣ, ಪ್ರಿಯಾಂಕಾರ ತವರಿಗೂ ಹತ್ತಿರವಾಗುತ್ತದೆ ಎನ್ನುವ ಕಾರಣಕ್ಕೆ ತಮ್ಮ ಮಗಳ ಪಾತ್ರಕ್ಕೂ ಓಕೆ ಎಂದಿದ್ದಾರೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top