fbpx
ಜಾಗೃತಿ

10 ರುಪಾಯಿಯ ನಾಣ್ಯವನ್ನು ತಗೋಳಲ್ಲ ಅಂದ್ರೆ ಜೈಲಿಗೆ ಹೋಗ್ಬೇಕಾಗುತ್ತೆ ಹುಷಾರ್.

10 ರುಪಾಯಿಯ ನಾಣ್ಯವನ್ನ ತಗೋಳಲ್ಲ ಅಂದ್ರೆ ಜೈಲಿಗೆ ಹೋಗ್ಬೇಕಾಗುತ್ತೆ ಹುಷಾರ್..! 

 

ಕೆಲವು ಮಾಹಿತಿಯಿಲ್ಲದ ಜನರು ಸೃಷ್ಟಿ ಮಾಡಿರುವ ಸುಳ್ಳು ವದಂತಿಗಳಿಂದ 10 ರುಪಾಯಿಯ ನಾಣ್ಯವನ್ನು ತಮಗೆ ತಾವೇ ಅಮಾನ್ಯವಾಗಿದೆ ಎಂದು ತಿಳಿದುಕೊಂಡು ವಹಿವಾಟಿಗೆ 10 ರುಪಾಯಿಯ ನಾಣ್ಯವನ್ನು ತಿರಸ್ಕರಿಸುವ ಜನರಿಗೆ ಆರ್.ಬಿ.ಐ ಖಡಕ್ ವಾರ್ನಿಂಗ್ ಕೊಟ್ಟಿದೆ.

 

 

10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲಿಲ್ಲ ಎಂಬ ವದಂತಿಯನ್ನು ಅಲ್ಲಗಳೆದಿರುವ ಆರ್.ಬಿ.ಐ ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ 10 ರೂಪಾಯಿ ನಾಣ್ಯವನ್ನು ವಹಿವಾಟುಗಳಿಗೆ ಸಾರ್ವಜನಿಕರು ಉಪಯೋಗಿಸಬೇಕು ಎಂದು ಆರ್.ಬಿ.ಐ ಎಚ್ಚರಿಸಿದೆ.

 

 

ದೇಶದ ಎಲ್ಲಾ ಕಡೆಯಲ್ಲಿಯೂ 10 ರೂಪಾಯಿಯ ನಾಣ್ಯಗಳು ಈಗಲೂ ಚಲಾವಣೆಯಲ್ಲಿದೆ. 10 ರೂಪಾಯಿಯ ನಾಣ್ಯವನ್ನು ಅಮಾನ್ಯ ಮಾಡಿಲ್ಲ. ನಾಣ್ಯ ಚಲಾವಣೆಯಿಲ್ಲ ಎಂಬುದು ಸುಳ್ಳುವದಂತಿ. ಈ ನಾಣ್ಯವನ್ನು ವಹಿವಾಟಿನಲ್ಲಿ ಬಳಸಬೇಕು ಒಂದು ವೇಳೆ 10 ರೂಪಾಯಿಯ ನಾಣ್ಯವನ್ನು ಸ್ವೀಕರಿಸದಿರುವವರ ವಿರುದ್ಧ ಪೊಲೀಸರಿಗೆ ಕಂಪ್ಲೇಂಟ್ ಕೊಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕ್ಷೇತ್ರೀಯ ನಿರ್ದೇಶಕ ಯುಜನ್‌ ಇ.ಕಾರ್ತಿಕ್‌ ಹೇಳಿದರು.

 

 

ನಗರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಹಾಗೂ ತಿಳಿವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವ್ರು 10 ರೂಪಾಯಿಯ ನಾಣ್ಯ ಇವತ್ತಿಗೂ ಕೂಡ ಕಾನೂನಿನ ಸಕ್ರಮ ನಾಣ್ಯವಾಗಿದೆ. ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯ ಮಾಡಿದಂತೆ 10 ರೂ. ನಾಣ್ಯವನ್ನು ಅಮಾನ್ಯಗೊಳಿಸಿಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top