fbpx
ಸಮಾಚಾರ

ಇನ್ಮುಂದೆ 2000 ರೂಪಾಯಿ ನೋಟಿನ ಕತೆ ಏನಾಗುತ್ತೆ ಅನ್ನೋದನ್ನ ತಿಳ್ಕೊಳಿ.

ಇನ್ಮುಂದೆ 2000 ರೂಪಾಯಿ ನೋಟಿನ ಕತೆ ಏನಾಗುತ್ತೆ ಅನ್ನೋದನ್ನ ತಿಳ್ಕೊಳಿ.

 

 

ಇನ್ಮುಂದೆ ಒಂದು ಸಾವಿರ ಮುಖಬೆಲೆಯ ನೋಟ್ ಜಾರಿಗೆ ಬರಲಿದೆ. ಹೌದು ಒಂದು ಸಾವಿರ ರುಪಾಯಿಯ ಹೊಸ ನೋಟನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಆರ್ ಬಿ ಐ ನಿರ್ಧರಿಸಿದೆ.ಸಾವಿರದ ನೋಟುಗಳ ಮುದ್ರಣ ಕಾರ್ಯ ಈಗಾಗಲೇ ಆರಂಭವಾಗಿದೆ ಎಂಬ ವದಂತಿಯಿದೆ. ಆರ್‌ಬಿಐ ಮೂಲಗಳ ಪ್ರಕಾರ ಡಿಸೆಂಬರ್ ನಲ್ಲಿ ಹೊಸ ಸಾವಿರ ಮುಖಬೆಲೆಯ ನೋಟುಗಳ ಬಿಡುಗಡೆ ಮಾಡುವ ಸಾಧ್ಯತೆ ಇದೆ.

 

 

500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ರದ್ದಾದ ನಂತರ RBI 2000 ರುಪಾಯಿಯ ಮುಖಬೆಲೆಯ ನೋಟು ಜಾರಿಗೆ ತಂದಿತ್ತು. ಆದರೆ, ಸಾರ್ವಜನಿಕರಿಗೆ ಎರಡು ಸಾವಿರ ರುಪಾಯಿಗೆ ಚಿಲ್ಲರೆ ಸಮಸ್ಯೆ ಎದುರಾಗಿದ್ದರಿಂದ RBI 1000.ರೂ ಮುಖಬೆಲೆಯ ನೋಟು ಮುದ್ರಿಸಲಿದೆ ಎಂದು ವರದಿಯಾಗಿದೆ. ಹಳೆಯ 1,000 ರು. ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

 

2000 ರುಪಾಯಿಯ ನೋಟಿನ ಗತಿಯೇನು?

ಮುಂದಿನ ದಿನಗಳಲ್ಲಿ 2,000 ರುಪಾಯಿ ಮುಖಬೆಲೆಯ ನೋಟುಗಳನ್ನು ಕ್ರಮೇಣವಾಗಿ ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2,000 ರುಪಾಯಿ ಮುಖಬೆಲೆಯ ನೋಟುಗಳಿಂದ ಕಪ್ಪು ಹಣ ಸಂಗ್ರಹಣೆಯು ಸುಲಭವಾಗುತ್ತದೆ ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕ ಎಂಬಂತೆ ಎಟಿಎಂಗಳಲ್ಲಿ ಈಗ ಹೆಚ್ಚಾಗಿ 2,000 ರುಪಾಯಿ ಮುಖಬೆಲೆಯ ನೋಟುಗಳ ಬದಲಿಗೆ 500ರೂ. ನೋಟುಗಳು ದೊರೆಯುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top