fbpx
ಮನೋರಂಜನೆ

ಅಬ್ಬಾ..ಮಹೋನ್ನತ ದಾಖಲೆ ಮಾಡಿದ ‘ಭರ್ಜರಿ’ ಟೈಟಲ್ ಸಾಂಗ್! ಆ ದಾಖಲೆ ಯಾವುದು ಗೊತ್ತಾ?

ಮಹೋನ್ನತ ದಾಖಲೆ ಮಾಡಿದ ‘ಭರ್ಜರಿ’ ಟೈಟಲ್ ಸಾಂಗ್! ಆ ದಾಖಲೆ ಯಾವುದು ಗೊತ್ತಾ?

 

 

ಅದ್ದೂರಿ ಸ್ಟಾರ್ ದ್ರುವ ಸರ್ಜಾ ಅಭಿನಯಿಸಿರುವ ಬಹುನಿರೀಕ್ಷಿತ “ಭರ್ಜರಿ’ ಚಿತ್ರ ಬಹಳ ದಿನಗಳ ನಂತರ ಮತ್ತೆ ಸೌಂಡ್ ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಭರ್ಜರಿ’ ಯಾವಾಗಲೋ ರಿಲೀಸ್ ಆಗಬೇಕಿತ್ತು ಆದರೆ ಕೆಲವು ಕಾರಣಗಳಿಂದ ಲೇಟ್ ಆಗಿರುವ ಈ ಚಿತ್ರ ಈಗ ರಿಲೀಸ್ ಗೆ ರೆಡಿಯಾಗಿದೆ. ಕೆಲವು ದಿನಗಳ ಹಿಂದೇ ಚಿತ್ರದ ಟೀಸರ್‌ ವೊಂದನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಈಗ ಚಿತ್ರತಂಡ “ಭರ್ಜರಿ ಚಿತ್ರದ ಟೈಟಲ್‌ ಸಾಂಗ್ ರಿಲೀಸ್ ಮಾಡಿದೆ.

 

 

ಆಗಸ್ಟ್ 24 ರಂದು ‘ಭರ್ಜರಿ’ ಚಿತ್ರದ ‘ಭರ್ಜರಿ ಸೌಂಡು’ ಯ್ಯೂಟ್ಯುಬ್ ನಲ್ಲಿ ರಿಲೀಸ್ ಆಗಿತ್ತು. ರಿಲೀಸ್ ಆದ 65 ಗಂಟೆಗಳಲ್ಲಿ 13 ಲಕ್ಷ ಜನ ಈ ಹಾಡನ್ನು ವೀಕ್ಷಿಸಿದ್ದಾರೆ. ಈ ಹಾಡನ್ನು ಈ ಚಿತ್ರದ ನಿರ್ದೇಶಕರೇ(ಚೇತನ್) ಬರೆದಿದ್ದು, ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಹರ್ಷ ರವರ ಕೊರಿಯೋಗ್ರಾಫಿ ಈ ಹಾಡಿಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ತರಹದ ದಾಖಲೆ ಬೇರೆ ಯಾವ ಚಿತ್ರವೂ ಮಾಡಿಲ್ಲ ಎನ್ನುವುದೇ ವಿಶೇಷ. ಸಖತ್ ಜೋಶ್‍ನಲ್ಲಿ ಸ್ಟೆಪ್ ಹಾಕಿರುವ ಧ್ರುವ ಸರ್ಜಾರ ಈ ವಿಡಿಯೋ ಸಾಂಗ್‍ಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

 

 

ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯರಾಗಿ ರಚಿತಾ ರಾಮ್‌ ಹಾಗೂ ಹರಿಪ್ರಿಯಾ ಅಭಿನಯಿಸಿದ್ದಾರೆ.ಎಲ್ಲ ಅಂದುಕೊಂಡಂತೆ ಆದ್ರೆ ಚಿತ್ರ ಮುಂದಿನ ತಿಂಗಳು ಭರ್ಜರಿಯಾಗಿ ಪ್ರೇಕ್ಷಕನ ಮುಂದೆ ಬರಲಿದ್ದು, ಕನಕಪುರ ಶ್ರೀನಿವಾಸ್‌ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top