fbpx
ಮನೋರಂಜನೆ

ಕಿಚ್ಚನ ಬರ್ತಡೇ ಗೆ ಅಭಿಮಾನಿಗಳಿಗೆ ತ್ರಿಬಲ್ ಗಿಫ್ಟ್! ಆ 3 ಗಿಫ್ಟ್ ಯಾವು ಗೊತ್ತಾ?

ಕಿಚ್ಚನ ಬರ್ತಡೇ ಗೆ ಅಭಿಮಾನಿಗಳಿಗೆ ತ್ರಿಬಲ್ ಗಿಫ್ಟ್! ಆ 3 ಗಿಫ್ಟ್ ಯಾವು ಗೊತ್ತಾ?

 

 

ಈ ವರ್ಷ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಬರ್ತಡೇ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಈ ವರ್ಷ ಸುದೀಪ್ ಮನೆ ಮುಂದೆ ಕಟೌಟ್ ಹಾಕೋದು ಬ್ಯಾನರ್ ಹಾಕುವ ಕೆಲಸ ಇರೋದಿಲ್ಲ ಅಂತ ಸುದೀಪ್ ಅಭಿಮಾನಿಗಳು ಬೇಸರಗೊಳ್ಳಬೇಕಾಗಿಲ್ಲ ಏಕೆಂದರೆ ಅಭಿಮಾನಿಗಳು ಮತ್ತು ಚಿತ್ರತಂಡದವರು ಕಿಚ್ಚನ ಬರ್ತ್ ಡೇಯನ್ನ ವಿಶೇಷವಾಗಿಸಲು ಸಿದ್ದವಾಗಿದ್ದಾರೆ.

 

 

ಸುದೀಪ್ ಅವರ ಬರ್ತಡೇ ದಿನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ದೊರೆಯಲಿದೆ ಆ ಗಿಫ್ಟ್ ಗಳು ಏನು ಅಂತೀರಾ ಅವೇ ಕಿಚ್ಚನು ನಟಿಸಿರುವ ಮೂರು ಚಿತ್ರಗಳ ಟೀಸರ್, ಪೋಸ್ಟರ್, ಮತ್ತು ಮೋಶನ್ ಪೋಸ್ಟರ್ . ಈಗಾಗ್ಲೇ ಜೋಗಿ ಪ್ರೇಮ್ ನಿರ್ದೇಶನದಲ್ಲಿ ನಟಿಸುತ್ತಿರುವ ದಿ ವಿಲ್ಲನ್ ಚಿತ್ರದ ಮೋಶನ್ ಪೋಸ್ಟರ್ ಅನ್ನು ಕಿಚ್ಚನ ಬರ್ತಡೇ ಅಂದರೆ ಸೆಪ್ಟೆಂಬರ್ 02 ರ ಸರಿಯಾಗಿ ಮಧ್ಯರಾತ್ರಿ 12 ಗಂಟೆ ಮೋಶನ್ ಪೋಸ್ಟರ್ ರಿಲೀಸ್ ಮಾಡಲಿದೆ ಹೀಗಂತ ಸ್ವತಃ ಪ್ರೇಮ್ ಅವರೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

https://twitter.com/DirectorPREM_R/status/902453996857655297

ಇನ್ನು ದಿ ವಿಲನ್ ಚಿತ್ರದ ನಂತರ ಕಿಚ್ಚ ನಟಿಸಲಿರುವ ಕೃಷ್ಣ ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಫಸ್ಟ್ ಲುಕ್ ಕೂಡ ಕಿಚ್ಚನ ಬರ್ತಡೇ ದಿನದಂದೇ ಬಿಡುಗಡೆಗೊಳ್ಳಲಿದೆ. ಈಗಾಗಲೇ ಬ್ಯಾಂಕಾಕ್ ನಲ್ಲೆ ಫೋಟೋ ಶೂಟ್ ನಡೆದಿರುವ ಈ ಚಿತ್ರದಲ್ಲಿ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

ಇನ್ನು ಸುದೀಪ್ ಅವರು ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜು ಕನ್ನಡ ಮೀಡಿಯಂ ಚಿತ್ರದ ವಿಶೇಷ ಟೀಸರ್ ಅನ್ನು ಸುದೀಪ್ ಅವರ ಬರ್ತಡೇ ಪ್ರಯುಕ್ತ ಬಿಡುಗಡೆಗೊಳ್ಳಲಿದೆ. ಹೀಗೆ ಒಂದೇ ದಿನ ಮೂರು ಬೇರೆ ಬೇರೆ ಲುಕ್ ಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಭಾಗ್ಯ ಕಿಚ್ಚನ ಅಭಿಮಾನಿಗಳಿಗೆ ದೊರೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top