fbpx
ಮನೋರಂಜನೆ

ಕಾಣೆಯಾಗಿದ್ದ ನಟಿ ಮಾಧವಿ ಕೊನೆಗೂ ಪತ್ತೆಯಾಗಿದ್ದಾರೆ..ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ?

ಕಾಣೆಯಾಗಿದ್ದ ನಟಿ ಮಾಧವಿ ಕೊನೆಗೂ ಪತ್ತೆಯಾಗಿದ್ದಾರೆ..ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ?

 

 

ಕನ್ನಡ,ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಸೂಪರ್ ಸ್ಟಾರ್’ಗಳ’ಜೊತೆ ನಟಿಸಿದವರು ಇವರು ಕನ್ನಡದಲ್ಲಿ ಡಾ.ವಿಷ್ಣು, ರಾಜ್, ಶಂಕರ್​ನಾಗ್,​ ಶ್ರೀನಾಥ್ ಸೇರಿದಂತೆ ಆಗಿನ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದರು. ಅಲ್ಲದೆ ಚಿರಂಜೀವಿ, ಬಾಲಕೃಷ್ಣ, ಕಮಲ್ ಹಾಸನ್ ಸೇರಿದಂತೆ ತೆಲುಗು ತಮಿಳಲ್ಲೂ ಸ್ಟಾರ್ ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

 

 

ಇಷ್ಟಕ್ಕೂ ಇವಾಗ ಏಕೆ ಇವರ ಸುದ್ದಿ ಅಂತೀರಾ ವಿಷ್ಯ ಇದೆ ಅದೇನೆಂದ್ರೆ ಕೆಲ ವರ್ಷಗಳ ಹಿಂದೆ ಇದ್ದಕ್ಕಿಂದಂತೆ ಕಾಣೆಯಾಗಿಬಿಟ್ಟಿದ್ದರು ಅವರು ಎಲ್ಲಿಗೆ ಹೋದರು ಎಂಬ ವಿಷ್ಯ ಯಾರಿಗೂ ಗೊತ್ತಿರಲಿಲ್ಲ ಅವರ ಹಲವಾರು ಅಭಿಮಾನಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಇಷ್ಟು ದಿನ ಕಾಣೆಯಾಗಿದ್ದ ನಟಿ ಮಾಧವಿ ಈಗ ಪತ್ತೆಯಾಗಿದ್ದಾರೆ.ಈಗ ಅವ್ರು ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಎಂದು ಇಲ್ಲಿ ಓದಿ ತಿಳಿದುಕೊಳ್ಳಿ.

 

 

ಭಾರತೀಯ ಮತ್ತು ಜರ್ಮನ್ ಹೆಸರಿನ ಔಷಧೀಯ ಉದ್ಯಮಿಯಾದ ರಾಲ್ಫ್ ಶರ್ಮಾ ಅವರನ್ನ 1996ರಲ್ಲಿ ಮಾಧವಿ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲೇ ಮಾಧವಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೊರತು ಹೋದರು. ಅಲ್ಲಿ ತನ್ನ ಗಂಡನ ಮೆಡಿಕಲ್ ಫಾರ್ಮಸಿ ಕಂಪನಿಗೆ ಸ್ವತಃ ಮಾಧವಿ ಅವರೇ ಸಿಇಓ ಆಗ್ತಾರೆ.

 

 

ಗಂಡನ ಕಂಪನಿಯ ಕೆಲಸಗಳಲ್ಲಿ ಮಾಧವಿ ಬ್ಯುಸಿಯಾಗಿದ್ದ ಮಾದವಿಯವರಿಗೆ ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲಾ ಶರ್ಮಾ ಎಂಬ ಮೂರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಬೆಳ್ಳಿತೆರೆಯಲ್ಲಿ ಸೂಪರ್ ಸ್ಟಾರ್ ಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡು ಸತತ ಇಪ್ಪತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮೆರೆದಿದ್ದ ಮಾಧವಿ ಈಗ ಅಮೆರಿಕಾದಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top