fbpx
ದೇವರು

ಇನ್ಮುಂದೆ ಕರ್ನಾಟಕದವರು ಈ ದೇವಸ್ಥಾನಗಳಿಗೆ ಹೋಗಬೇಕಂದ್ರೆ ಆಧಾರ್ ಕಡ್ಡಾಯವಾಗಿ ಬೇಕೇಬೇಕು .

ಇನ್ಮುಂದೆ ಕರ್ನಾಟಕದವರು ಈ ದೇವಸ್ಥಾನಗಳಿಗೆ ಹೋಗಬೇಕಂದ್ರೆ ಆಧಾರ್ ಕಡ್ಡಾಯ.

 

 

ಉತ್ತರಾಖಂಡ್‍ನ ಬದ್ರಿನಾಥ್, ಕೇದಾರ್‍ನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಕರ್ನಾಟಕದಿಂದ ಹೋಗುವ ಭಕ್ತಾದಿಗಳಿಗೆ ಕರ್ನಾಟಕ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ತೀರ್ಥ ಯಾತ್ರೆ ಹೋಗುವುದಕ್ಕೆ ಯಾತ್ರಿಗಳಿಗೆಂದು ಕರ್ನಾಟಕ ಸರ್ಕಾರ ನೀಡಲಾಗುವ 20,000 ರೂಪಾಯಿ ಸಹಾಯಧನದ ದುರ್ಬಳಕೆ ಆಗದೇ ಇರಲು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆಗಸ್ಟ್ 17 ರಂದು ಬಿಡುಗಡೆಗೊಳಿಸಿದ ಚಾರ್ ಧಾಮ್ ಯಾತ್ರಿಗಳ ಮಾರ್ಗಸೂಚಿಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಅಂಶವನ್ನು ಸೇರಿಸಲಾಗಿದೆ

 

 

ಪ್ರತಿ ವರ್ಷ 1000-1500 ರಾಜ್ಯದ ಯಾತ್ರಿಕರು ಈ ಸಬ್ಸಿಡಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಯಾತ್ರಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಬ್ಸಿಡಿಯ ಹಣವನ್ನು ದುರ್ಬಳಕೆಯನ್ನು ತಡೆಗಟ್ಟಲು ಆಧಾರ್ ಕಾರ್ಡ್ಅನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

 

ತೀರ್ಥಯಾತ್ರೆಗೆ ಹೋಗುವ ರಾಜ್ಯದ ಮಧ್ಯಮ ವರ್ಗ ಮತ್ತು ಬಡವರಿಗೆ ಸಹಾಯವಾಗಲೆಂದು 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಸಬ್ಸಿಡಿಯನ್ನು ಯೋಜನೆಯನ್ನು ಜಾರಿಗೆ ತಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top