fbpx
ಸಮಾಚಾರ

ಅಯ್ಯೋ ಪಾಪ..! ಶರಣ್ ನ ಅಧ್ಯಕ್ಷ ಸಿನಿಮಾದ ಹೀರೋಯಿನ್ ಗೆ ಹೀಗಾಗಬಾರದಿತ್ತು.

ಅಯ್ಯೋ ಪಾಪ..! ಶರಣ್ ನ ಅಧ್ಯಕ್ಷ ಸಿನಿಮಾದ ಹೀರೋಯಿನ್ ಗೆ ಹೀಗಾಗಬಾರದಿತ್ತು.

 

 

ಶರಣ್ ಮತ್ತು ಚಿಕ್ಕಣ್ಣ ನಟಿಸಿದ್ದ ಅಧ್ಯಕ್ಷ ಚಲನಚಿತ್ರ ನೀವೆಲ್ಲರೂ ನೋಡಿರುತ್ತೀರಿ. ಈ ಇಬ್ಬರು ಕಾಮಿಡಿ ಆಕ್ಟರ್ ಗಳು ಅಧ್ಯಕ್ಷ ಸಿನಿಮಾದ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ್ದರು. ಈ ಚಿತ್ರದಲ್ಲಿ ಶರಣ್ ಅವರಿಗೆ ನಾಯಕಿಯಾಗಿ ಅಂದದ ಚೆಲುವೆ ಹೀಬಾ ಪಟೇಲ್ ರವರು ನಟಿಸುದ್ದರು. ಈ ಚಿತ್ರದ ಸೂಪರ್ ಹಿಟ್ ಆದ ನಂತರ ಕೆಲವು ತೆಲುಗು ತಮಿಳು ಚಿತ್ರಗಳಲ್ಲಿ ಆಕ್ಟ್ ಮಾಡಿದ್ದರು.

 

 

ಇಲ್ಲಿ ವಿಷಯ ಏನೆಂದರೆ ನಟಿ ಹೀಬಾ ಬಣ್ಣದ ಲೋಕಕ್ಕೆ ಕಾಲಿಡುವ ಮುಂಚಿನಿಂದಲೂ ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದರು. ಸಿನಿಮಾದಲ್ಲಿ ನಟಿಸುವಂತೆ ಆಕೆಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಏನಾಯಿತೋ ಏನೋ ಗೊತ್ತಿಲ್ಲ ಇವರಿಬ್ಬರ ನಡುವೆ ಬ್ರೇಕ್ ಆಪ್ ಆಗಿ ಇಬ್ಬರೂ ಬೇರೆ ಬೇರೆ ಆಗಿದ್ದಾರೆ.

 

 

ಲವ್ ಬ್ರೇಕ್ ಅಪ್ ಆದ ನಂತರ ಹೀಬಾ ತೆಲುಗಿನಲ್ಲಿ ಕುಮಾರಿ 21f ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಕುಮಾರಿ 21f ಚಿತ್ರದಲ್ಲಿ ನಾಯಕ ಆಗಿದ್ದ ರಾಜ್ ಅವರ ಮೇಲೆ ಹೀಬಾ ಅವ್ರಿಗೆ ಲವ್ ಆಗಿತ್ತಂತೆ. ರಾಜ್ ಮತ್ತು ಹೀಬಾ ಇಬ್ಬರೂ ಒಟ್ಟಿಗೆ ಸುಮಾರು ನಾಲ್ಕು ಚಿತ್ರಗಳಲ್ಲಿ ನಟಿಸುದ್ದರು, ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.

 

 

ಆದ್ರೆ ಕೊನೆಯಲ್ಲಿ ಈ ಇಬ್ಬರೂ ದೂರವಾದರು. ಇದರಿಂದ ಹೀಬಾ ಅವರಿಗೆ ಬರುತ್ತಿದ್ದ ಆಫರ್ ಗಳು ಕಡಿಮೆಯಾದವು. ದೂರವಾದ ಮೇಲೆ ರಾಜ್ ಜೊತೆ ನಟಿಸಲ್ಲ ಎಂದು ಹೇಳಿದ್ದರಿಂದ ಸ್ವತಃ ರಾಜ್ ಅವರೇ ಹೀಬಾ ಗೆ ಅವಕಾಶ ಸಿಗದೇ ಇರೋ ಹಾಗೆ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅತ್ತ ಹಳೆ ಲವರ್ ನಿಂದ ಮೋಸ ಹೋಗಿ ಇತ್ತ ನಟ ರಾಜ್ ಕೂಡ ಇಲ್ಲದೆ ಒಂಟಿಯಾಗಿ ಲವ್ ಫೆಲ್ಯೂರ್ ನಲ್ಲಿ ನಟಿ ಹೀಬಾ ಮಾನಸಿಕವಾಗಿ ಬಳಲಿಹೋಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top