fbpx
ಜಾಗೃತಿ

ಸತ್ಯವನ್ನು ಬಹಿರಂಗಪಡಿಸಿದ್ದಕ್ಕೆ ಹತ್ಯೆಗೆ ಒಳಗಾದ ದೇಶದ ಪ್ರಮುಖ ವಿಚಾರವಾದಿ ಪತ್ರಕರ್ತರುಗಳಿವರು.

ಸತ್ಯವನ್ನು ಬಹಿರಂಗಪಡಿಸಿದ್ದಕ್ಕೆ ಹತ್ಯೆಗೆ ಒಳಗಾದ ದೇಶದ ಪ್ರಮುಖ ವಿಚಾರವಾದಿ ಪತ್ರಕರ್ತರುಗಳಿವರು.

 

 

ದಿಟ್ಟ ಪತ್ರಕರ್ತೆಯಾಗಿ, ಭಾರತದ ಸ್ವತಂತ್ರ ನಾಗರಿಕಳಾಗಿ, ಜಾತ್ಯತೀತ ವಾದದ ಪರವಾಗಿ ಹೋರಾಟ ನಡೆಸುತ್ತಿದ್ದ ವಿಚಾರವಾದಿ ಗೌರಿಲಂಕೇಶ್ ಸೆಪ್ಟೆಂಬರ್ 5 ರಂದು ಹಂತಕರ ಗುಂಡೇಟಿಗೆ ಬರ್ಬರ ಹತ್ಯೆಯಾಗಿದ್ದರು. ಅವರಸೈದ್ಧಾಂತಿಕ ನಿಲುವುಗಳು ಅಜೀರ್ಣವಾಗದ ಕೆಲವು ವಿಕೃತ ಮನಸುಗಳು ಅವರನ್ನು ಹತ್ಯೆಗೈದಿದ್ದಾರೆ. ಭಾರತದಲ್ಲಿ 1992 ರಿಂದ 2015 ಪತ್ರಕರ್ತರು ಸಾರ್ವಜನಿಕವಾಗಿ ಸತ್ಯವನ್ನು ಬಹಿರಂಗಪಡಿಸಿದಕ್ಕಾಗಿ 64 ಪತ್ರಕರ್ತರನ್ನು ಹತ್ಯೆಗಯ್ಯಲಾಗಿದೆ…ಆ ಪತ್ರಕರ್ತರುಗಳಲ್ಲಿ ಪ್ರಮುಖ 8 ಪತ್ರಕರ್ತರ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ ಬನ್ನಿ.

1.ರಾಮ್ ಚಂದರ್ ಛತ್ರಪತಿ:

 

 
ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಅವರು ಶಿಕ್ಷೆಗೊಳಗಾಗವು ಈ ವ್ಯಕ್ತಿ ಕೂಡ ಕಾರಣವಾಗಿದ್ದಾರೆ. ಗುರ್ಮೆತ್ ರಾಮ್ ರಹೀಮ್ ಆರೋಪಿಸಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿದ ಮೊದಲ ವ್ಯಕ್ತಿ ಇವರಾಗಿದ್ದರು.ಅಕ್ಟೋಬರ್ 14, 2002 ರಂದು ಅವರನ್ನು ಸ್ಕೂಟರ್ ನಿಂದ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಇವರನ್ನು ಹತ್ಯೆ ಗೈದಿದ್ದರು.

2.ರಾಜದೇವ್ ರಂಜನ್.

 


ರಾಜದೇವ್ ರಂಜನ್ ರವರ ಮೇಲೆ ನಡೆದ ದಾಳಿ ಮಾಧ್ಯಮದ ಗಮನ ಸೆಳೆಯಿತು ಮತ್ತು ಪತ್ರಿಕೋದ್ಯಮಕ್ಕೆ ತೀವ್ರ ಬೆದರಿಕೆಯನ್ನು ಕಂಡಿತ್ತು. ಅವರು ಅನೆಕ್ಜ ರಾಜಕೀಯ ವ್ಯಕ್ತಿಗಳ ವಿರುದ್ಧ ನೇರವಾಗಿ ಬರೆಯುತ್ತಿದ್ದರು. ಇವರನ್ನು ಸಹ ಸ್ಕೂಟರ್ ನಿಂದ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಗೈದಿದ್ದರು.

3. ನರೇಂದ್ರ ದಾಬೋಲ್ಕರ್:

 

 
1980ರ ದಶಕದಿಂದಲೇ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದ ನರೇಂದ್ರ ದಾಬೋಲ್ಕರ್ ಅವರು ತಮ್ಮ ಹೋರಾಟಗಳಲ್ಲಿ ಜೀವನವನ್ನು ಮುಡಿಪಾಗಿಸಿದ್ದರು. ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ಚಳುವಳಿಯ ಮಂಚೂಣಿಯಲ್ಲಿದ್ದ 68 ವರ್ಷದ ಡಾ. ದಾಬೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಹಾಡು ಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.ಇಬ್ಬರು ಯುವಕರು ಮೋಟಾರ್ ಸೈಕಲಿನ ಮೇಲೆ ಬಂದು ಹತ್ತಿರದಿಂದ ಗುಂಡಿಟ್ಟು ಕೊಂದಿದ್ದರು.

4.ಎಂ.ಎಂ ಕಲಬುರ್ಗಿ:

 

 
ಆಗಸ್ಟ್‌, 30 2015 ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಹಿರಿಯ ಸಂಶೋಧಕ, ಸಾಹಿತಿ ಮತ್ತು ವಿಚಾರವಾದಿ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದ್ದರು. ಧಾರವಾಡದಲ್ಲಿನ ಅವರ ಮನೆಗೆ ನುಗ್ಗಿದ ಅಪರಿಚಿತರು ಅವರ ಹಣೆ ಮತ್ತು ಎದೆಗೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದರು.

5.ಸಂದೀಪ್ ಕೊಠಾರಿ :

 

 
ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮ್ಯಾಂಗನೀಸ್ ಹಾಗೂ ಮರಳು ದಂಧೆಯ ಕುರಿತು ನಿರಂತರವಾಗಿ ನಯೀ ದುನಿಯಾ ಎಂಬ ಪತ್ರಿಕೆಗೆ ವರದಿ ಮಾಡುತ್ತಿದ್ದ ಸಂದೀಪ್ ಕೊಠಾರಿಯನ್ನು 19 ಜೂನ್ 2015ರಂದು ಬಾಲ್‍ಘಾಟ್ ಜಿಲ್ಲೆಯ ಉರ್ಮಿ ಎಂಬ ಊರಿಗೆ ಸ್ನೇಹಿತನ ಬೈಕಿನಲ್ಲಿ ಹೋಗುತ್ತಿದ್ದ ಮರಳು ಮಾಫಿಯಾದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂಡಿದ್ದರು.

6.ಜಗೇಂದ್ರ ಸಿಂಗ್ :

 

 
ಉತ್ತರ ಪ್ರದೇಶದ ಶಾಸಕರೊಬ್ಬರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಲವಂತವಾಗಿ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಹೊರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಬರೆದಿದ್ದ ಜಗೇಂದ್ರ ಸಿಂಗ್ ಅವರನ್ನು ಪೊಲೀಸರೇ ಹತ್ಯೆಗೈದಿದ್ದರು.

7. ಗೋವಿಂದ ಪನ್ಸಾರೆ:

 

 
ಎಡಪಂಥೀಯ ಚಿಂತಕರಾಗಿದ್ದ ಮತ್ತು ರಸ್ತೆ ಟೋಲ್‌ ಸಂಗ್ರಹದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ವಿಚಾರವಾದಿಯಾದ ಗೋವಿಂದ ಪನ್ಸಾರೆಯವರನ್ನು ಫೆಬ್ರವರಿ 17, 2015ರ ಅವರ ನಿವಾಸದ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಅವರನ್ನು ಹತ್ಯೆಗೈದಿದ್ದರು.

8. ಗೌರಿ ಲಂಕೇಶ್:

 

 
ಕರ್ನಾಟಕದ ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ, ವಿಚಾರವಾದಿಯಾದ ಗೌರಿ ಲಂಕೇಶ್ ಅವರು ಸೇರಿದ್ದಾರೆ. ನೆನ್ನೆ ಸಂಜೆ ಸರಿಸುಮಾರು 7.30 ರಲ್ಲಿ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಹಂತಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಗೌರಿಯವರು ಸದಾ ಬಲಪಂಥೀಯರ ವಿಚಾರ ಮತ್ತು ಸಿದ್ದಾಂತಗಳನ್ನು ಟೀಕಿಸುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top