fbpx
ಸಮಾಚಾರ

ಅಯ್ಯೋ ಪಾಪ..! ಹಿರಿಯ ನಟಿ ಮಹಾಲಕ್ಷ್ಮಿಯವರ ಬಾಳಲ್ಲಿ ವಿಧಿ ಈ ರೀತಿ ಆಟವಾಡಬಾರದಿತ್ತು.

ಅಯ್ಯೋ ಪಾಪ..! ಹಿರಿಯ ನಟಿ ಮಹಾಲಕ್ಷ್ಮಿಯವರ ಬಾಳಲ್ಲಿ ವಿಧಿ ಈ ರೀತಿ ಆಟವಾಡಬಾರದಿತ್ತು.

 

 

ಕನ್ನಡ ಹಿರಿಯ ನಟಿ ಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ನೋಡಲು ಸಾಕ್ಷಾತ್ ಲಕ್ಷಿಯಂತೆಯೇ ಇದ್ದರು.1980-90 ರಲ್ಲಿ ನಂಬರ್ ಒನ್ ನಟಿಯಾಗಿದ್ದರು. ಇವರು ಅಪರಂಜಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಚಿತ್ರದಲ್ಲಿ ಇವರ ಅಭಿನಯ ನೋಡಿ ಆಗಿನ ನಿರ್ದೇಶಕರು ಅವರನ್ನು ಹಾಕೊಂಡು ಸಿನೆಮಾ ಮಾಡಲು ಮುಂದಾಗಿದ್ದರು.ನಂತರ ಇವರು ಅಭಿನಯಿಸಿದ ‘ಸ್ವಾಭಿಮಾನ’, ‘ಮದುವೆ ಮಾಡು ತಮಾಷೆ ನೋಡು’, ‘ತಾಯಿ ಕೊಟ್ಟ ತಾಳಿ’, ‘ಜಯಸಿಂಹ’, ‘ಬ್ರಹ್ಮ ವಿಷ್ಣು ಮಹೇಶ್ವರ’, ‘ಪರಶುರಾಮ’, ‘ಹೆಂಡ್ತೀಗೆ ಹೇಳ್ಬೇಡಿ’, ‘ಮನೇಲಿ ಇಲಿ ಬೀದಿಲಿ ಹುಲಿ’ ಮುಂತಾದ ಚಿತ್ರಗಳೆಲ್ಲವು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದವು.

 

 

ಮಹಾಲಕ್ಷ್ಮಿ ಮೂಲತಃ ಚೆನ್ನೈ ನವರು ಆದ್ರೆ ನೆಲೆ ಕಂಡುಕೊಂಡಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ತಮಿಳಿನ ಖ್ಯಾತ ನಟ ಎ. ವಿ.ಎನ್ ರಾಜನ್ ಅವರ ಮಗಳಾಗಿದ್ದ ಮಹಾಲಕ್ಷ್ಮಿ ಬಣ್ಣದ ಲೋಕದ ಬಗ್ಗೆ ಎಲ್ಲಾ ಗೊತ್ತಿದ್ದೆ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು.ಹಾಗಾಗಿ ಮಹಾಲಕ್ಷ್ಮೀ ಯವರಿಗೆ ಚಿತ್ರರಂಗಕ್ಕೆ ಎಂಟ್ರಿ ಪಡೆಯಲು ಕಷ್ಟವೇನಾಗಲಿಲ್ಲ. ಮಹಾಲಕ್ಷ್ಮೀ ಯವರಿಗೆ ಹಣ ಯಶಸ್ಸು ಒಟ್ಟೊಟ್ಟಿಗೆ ಹರಿದು ಬಂದ ಕಾರಣ ಇವರಿಗೆ ಆಗದ ಜನ ಇವರನ್ನು ಅಹಂಕಾರದ ನಟಿ ಎಂದು ಬಿಂಬಿಸಲು ಶುರುಮಾಡಿದ್ದರು. ಮಹಲಕ್ಷ್ಮಿಯವರ ಯಶಸ್ಸು ಅಂದಿನ ಕಾಲದ ಸ್ಟಾರ್ ನಟರಿಗೂ ಪೈಪೋಟಿ ನೀಡುವಂತಿತ್ತು.

 

 

ಇಷ್ಟೆಲ್ಲಾ ಇದ್ದರೂ ಕೂಡ ಮಹಾಲಕ್ಷ್ಮೀ ಇದ್ದಕ್ಕಿದ್ದ ಹಾಗೆ ಸಿನಿಮಾ ರಂಗದಿಂದ ಕಾಣೆಯಾಗಿ ಬಿಟ್ಟರು.ಅದಕ್ಕೆ ಕಾರಣ ಚಿತ್ರರಂಗದಲ್ಲಿ ಅವರಿಗೆ ಆದ ಪ್ರೀತಿ ಮೋಸ ಎಂದು ಬಲ್ಲವರು ಹೇಳುತ್ತಾರೆ.ಇದರ ಬಗ್ಗೆ ಕೇಳೋಣ ಅಂದ್ರೆ ಮಹಾಲಕ್ಸ್ಮಿ ಎಲ್ಲೂ ಸಿಗೋದಿಲ್ಲ. ಆಗಿನ ಒಬ್ಬ ನಟರಿನೊಂದಿಗೆ ಪ್ರೇಮವಾಗಿತ್ತಂತೆ ಹಾಗಾಗಿ ಆ ನಟನ ಜೊತೆಗೆ ಸುತ್ತಾಟ ತುಂಬಾ ಜೋರಾಗಿಯೇ ನಡೆದಿತ್ತಂತೆ. ಕೊನೆಗೆ ಆ ನಟ ಮಹಾಲಕ್ಷ್ಮೀ ಗೆ ಕೈಕೊಟ್ಟು ಮೋಸ ಮಾಡಿದನಂತೆ. ಅದಷ್ಟೇ ಅಲ್ಲದೆ ಇದನ್ನು ಅರಿತು ಕೆಲವು ನಟರು ಮಹಾಲಕ್ಷ್ಮೀ ಗೆ ಟಾರ್ಚರ್ ಕೊಡುತ್ತಿದ್ದರು ಎಂದು ಹೇಳಲಾಗಿತ್ತು. ಹಾಗಾಗಿ ಚಿತ್ರರಂಗವನ್ನು ತೊರೆದರು

 

 

ಚಿತ್ರರಂಗದಿಂದ ದೂರವಾದ ನಂತರ, ಚಿತ್ರರಂಗಕ್ಕೆ ಹೊರತಾದ ವ್ಯಕ್ತಿಯೊಬ್ಬನನ್ನು ಮಹಾಲಕ್ಷ್ಮಿ ಮದುವೆ ಆದರು ಅಂತ ಸುದ್ದಿ ಹರಿದಾಡಿತ್ತು. ನಂತರ ಅವನಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆ ಆಗಿ ಅವರಿಗೆ ಡೈವೋರ್ಸ್ ನೀಡಿ ಮೂರನೇ ಮದುವೆಯಾಗಿದ್ದರು. ತಮ್ಮ ಮೂರನೇ ಗಂಡನ ಜೊತೆ ಕೆಲ ಕಾಲ ಅಮೇರಿಕಾದಲ್ಲಿ ವಾಸವಾಗಿದ್ದರು ಆದ್ರೆ ದಾಂಪತ್ಯ ಕಲಹದಿಂದ ಮೂರನೇ ಮದುವೆಯೂ ಮುರಿದುಬಿದ್ದಾಗ ನಟಿ ಮಹಾಲಕ್ಷ್ಮಿ ಮಾನಸಿಕ ಖಿನ್ನತೆಗೆ ಒಳಗಾದರು ಎಂಬುದು ಕೆಲ ಮೂಲಗಳು ಹೇಳುತ್ತವೆ. ಹೀಗೆ ಜೀವನದಲ್ಲಿ ನೋವಿನಿಂದ ಕಂಗೆಟ್ಟಿ ಹೋಗಿದ್ದ ಸಮಯದಲ್ಲಿ ಮಹಾಲಕ್ಷ್ಮಿಯವರ ನೆರವಿಗೆ ನಿಂತಿದ್ದು ಕ್ರಿಶ್ಚಿಯನ್ ಸಮುದಾಯದವರು. ನಂತರ ಮಹಲಕ್ಷ್ಮಿಯವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

 

 

ಜೀವನದಲ್ಲಿ ಎಷ್ಟು ಯಶಸ್ಸನ್ನು ಕಂಡಿದ್ದರೋ ಅದಕ್ಕಿಂತ ದುಪ್ಪಟ್ಟು ನೋವನ್ನು ಕಂಡಿದ್ದ ಮಹಾಲಕ್ಷ್ಮೀ ಕ್ರೈಸ್ತ ಸನ್ಯಾಸಿ ಯಾಗಿ ಚರ್ಚ್ ಸೇರಿಕೊಂಡುಬಿಟ್ಟರು. ಬಣ್ಣದ ಲೋಕದ ಕನಸು,, ಪ್ರೀತಿಯ ಕನಸು ಎಲ್ಲವನ್ನು ಬದಿಗೊತ್ತಿ ಈಗ ಚೆನ್ನೈನ ಚರ್ಚ್ ಒಂದರಲ್ಲಿ ಸನ್ಯಾಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಯಾಕೆ ಹೀಗೆ ಸನ್ಯಾಸಿಯಾಗಿದ್ದರೆ ಎಂದು ಹೇಳುವುದಕ್ಕೆ ಅವರು ಯಾವ ಪ್ರಶ್ನೆಗಳಿಗೂ ಉತ್ತರ ನೀಡುತ್ತಿಲ್ಲ. ಇನ್ನು ಯಾವ ಸಂದರ್ಶನಕಾರರಿಗೂ ಕೂಡ ಸಂದರ್ಶನ ನೀಡುತ್ತಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top