fbpx
ಸಮಾಚಾರ

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದ ಯುವ ಆಟಗಾರ ದುರ್ಮರಣ..!

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದ ಯುವ ಆಟಗಾರ ದುರ್ಮರಣ..!

ಭಾರತದ 17 ವರ್ಷದ ಒಳಗಿನ ತಂಡದ 12 ವರ್ಷದ ಭಾರತೀಯ ಯುವ ಕ್ರಿಕೆಟಿಗನೊಬ್ಬ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 17 ವರ್ಷದ ಒಳಗಿನ ಟೂರ್ನಿಯಲ್ಲಿ ಭಾಗವಹಿಸಲೆಂದು ಬಂದಿದ್ದ ಗುಜರಾತ್ ಮೂಲದ ಈ ಆಟಗಾರ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಶ್ರೀಲಂಕಾ ಮಾಧ್ಯಮ ವರದಿ ಮಾಡಿದೆ.

 

 

ಮಂಗಳವಾರ ಸಂಜೆ ಈಜುಕೊಳಕ್ಕೆ ನಾಲ್ವರು ಸದಸ್ಯರೊಂದಿಗೆ ಬಂದಿದ್ದ ಈತ ಪಮುನುಗಾಮಾ ಈಜುಕೊಳಕ್ಕೆ ಇಳಿದಿದ್ದ ವೇಳೆ ಈ ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದ ಕೂಡಲೇ ಸ್ನೇಹಿತರು ಅವರನ್ನು ಈಜುಕೊಳದಿಂದ ಹೊರತೆಗೆದು ಪಮುನುಗಾಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಆ ಆಟಗಾರ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

 

 

ಸದ್ಯ ಆ ಆಟಗಾರನ ಮೃತದೇಹವನ್ನು ಶ್ರೀಲಂಕಾದ ರಾಗಮ ಟೀಚಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಶ್ರೀಲಂಕಾದ ಮಾದ್ಯಮಗಳು ವರದಿ ಮಾಡಿವೆ. ಆ ಆಟಗಾರ ಗುಜರಾತ್ ರಾಜ್ಯದ ಸೂರತ್ ನ ಸೋನಾ ನರೇಂದ್ರ ಎಂದು ಪಿಟಿಐ ಗುರುತಿಸಿದೆ. ಬುಧವಾರ ರಾತ್ರಿ ಶ್ರೀಲಂಕಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡವು ಗೆಲುವಿನ ವಿಜಯವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಹುಡುಗನ ಮರಣದ ಸುದ್ದಿಯು ಎಲ್ಲರರಿಗೂ ಆಘಾತವಾಗಿ ಪರಿಣಮಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top