fbpx
ಮಾಹಿತಿ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಸ್ವಂತ ಮನೆ ಕಟ್ಟಿಸಿಕೊಳ್ಳಲು ಈ ರೀತಿಯಾಗಿ ಅರ್ಜಿಯನ್ನು ಹಾಕಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಸ್ವಂತ ಮನೆ ಕಟ್ಟಿಸಿಕೊಳ್ಳಲು ಈ ರೀತಿಯಾಗಿ ಅರ್ಜಿಯನ್ನು ಹಾಕಬೇಕು.

 

 

 

 

 

ಮನುಷ್ಯನಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳಲ್ಲಿ ಮನೆ ಕೂಡ ಒಂದು.ದೇಶದ ಎಲ್ಲ ಕುಟುಂಬಗಳಿಗೂ ಒಂದೊಂದು ಮನೆ ಇರಲೇಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ವಸತಿ ಯೋಜನೆಯೇ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 2022ರೊಳಗೆ ವಸತಿ ಕಲ್ಪಿಸಿಕೊಡುವ ಯೋಜನೆ ಇದಾಗಿದೆ.ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆಂದು ಹಣಕಾಸಿನ ಸಹಾಯ ಮಾಡಲಾಗುತ್ತದೆ.

ನಿಮಗೂ ಸ್ವತಃ ಮನೆ ಕಟ್ಟಿಸಿಕೊಳ್ಳಲು ಅಸೆ ಇದೆಯಾ ಹಾಗಾದ್ರೆ ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವ ವಿವಿಧ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

ಹಂತ-1.

ಈ ಯೋಜನೆಗೆ ನೀವು ಅರ್ಜಿ ಹಾಕಬೇಕೆಂದರೆ ನೀವು ಆಧಾರ್ ಕಾರ್ಡ್ ಅನ್ನು ಕಾಡ್ಡಾಯವಾಗಿ ಹೊಂದಿರಬೇಕು. ನಿಮ್ಮ ವಾರ್ಷಿಕ ವರಮಾನದ ಪ್ರಮಾಣ ಪತ್ರವನ್ನು ನೀವು ಮಾಡಿಸಿಕೊಂಡಿಟ್ಟಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಪ್ರಧಾನಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. ಅಲ್ಲಿ ‘ಸಿಟಿಜನ್ ಅಸೆಸ್ಮೆಂಟ್’ ಮೆನುವಿನಲ್ಲಿರುವ ಪ್ರಧಾನಮಂತ್ರಿ ಅವಾಸ್ ಯೋಜನೆ ಅರ್ಜಿ ಆಯ್ಕೆಯನ್ನು ಕ್ಲಿಕ್ ಮಾಡಿ.

 

 

ಹಂತ-2.

ಸಿಟಿಜನ್ ಅಸೆಸ್ಮೆಂಟ್’ ಮೆನುವಿನಲ್ಲಿ ಪ್ರಸ್ತುತ ನೀವು ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿದ್ದರೆ Slum Dwellers ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ಗ್ರಾಮೀಣ, ನಗರ, ಅರೆ ನಗರ ಪ್ರದೇಶಗಳಲ್ಲಿ ವಾಸವಾಗಿದ್ದರೆ Benefits under other 3 Components ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಒಂದು ಹೊಸ ಪುಟ ತೆರೆಯುತ್ತದೆ ಆ ಪುಟದಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿಮಾಡಬೇಕು. ಯಾವುದೇ ತಪ್ಪುಗಳಾಗದಂತೆ ಅರ್ಜಿಯಲ್ಲಿ ಭರ್ತಿಮಾಡಬೇಕು.

 

ಹಂತ-3.

ಅರ್ಜಿಯನ್ನು ತುಂಬಿದ ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಇದು “I am aware that any claims regarding my inclusions/exclusions shall remain with State govt/urban local body and MoHUPA is just facilitating the process” ಎಂದು ತೋರಿಸುತ್ತದೆ.
ಅರ್ಜಿಯ ಕೊನೆಯಲ್ಲಿ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ಭಾತಿಮಾಡಿ. ನಂತರ save ಆಯ್ಕೆಯನ್ನು ಕ್ಲಿಕ್ ಮೇಲೆ ಮಾಡಿ ನೀವು print ಮೇಲೆ ಕ್ಲಿಕ್ ಮಾಡಿ ಪ್ರಿಂಟ್ ಔಟ್ ಪಡೆಯಬಹುದು.

 

ಹಂತ-4.

ನಿಮ್ಮ save ಮಾಡಿದ ನಂತರ ಸ್ಕ್ರೀನ್ ಮೇಲೆ ಹೊಸದಾಗಿ ಒಂದು ನೋಂದಣಿ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ಆ ನೋಂದಣಿ ಸಂಖ್ಯೆಯನ್ನು ಎಚ್ಚರಿಕೆಯಿಂದ ಬರೆದಿಟ್ಟುಕೊಳ್ಳಬೇಕು. ಮುಂದೆ ನಿಮ್ಮ ಅರ್ಜಿಯನ್ನು ಎಡಿಟ್ ಮಾಡಬೇಕೆನಿಸಿದಲ್ಲಿ ಈ ಸಂಖ್ಯೆ ಕಡ್ಡಾಯವಾಗಿರಬೇಕಾಗುತ್ತದೆ.ಮತ್ತು ಈ ನೊಂದಣಿ ಸಂಖ್ಯೆಯನ್ನು ಬಳಸಿ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

3 Comments
Anand Halagali says:

1) whether this facility is only for BPL or for all?
2) it is only for construction or to get site also?

Allapur LT sindagi road vijayapur

Allapur LT sindagi road vijayapur
Pin code 586104

To Top