fbpx
ಮನೋರಂಜನೆ

ಯೂಟ್ಯೂಬ್ ನಲ್ಲೀಗ ಹಲವು ಕನ್ನಡ ಚಿತ್ರಗಳದ್ದೇ ದರ್ಬಾರ್..!

ಯೂಟ್ಯೂಬ್ ನಲ್ಲೀಗ ಹಲವು ಕನ್ನಡ ಚಿತ್ರಗಳದ್ದೇ ದರ್ಬಾರ್..!

 

 

ಯೂಟ್ಯೂಬ್ ನಲ್ಲೀಗ ಕನ್ನಡ ಚಿತ್ರಗಳದ್ದೇ ಹವಾ,, ಪರ ಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಂತಿರುವ ಕನ್ನಡ ಚಿತ್ರರಂಗದ ಸ್ಟಾರ್ ಮತ್ತು ನವ ನಟರ ಚಿತ್ರದ ಟ್ರೈಲರ್ ಗಳು, ಹಾಡುಗಳು ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗುತ್ತಿವೆ. ಕನ್ನಡದ ಯಾವ್ಯಾವ ಚಿತ್ರದ ಹಾಡುಗಳು,, ಟ್ರೈಲರ್ ಗಳು ಯೂಟ್ಯೂಬ್ ನಲ್ಲಿ ಸಕತ್ ಟ್ರೆಂಡ್ ಆಗ್ತಿವೆ ಅನ್ನೋದನ್ನ ಮುಂದೆ ಓದಿ ತಿಳ್ಕೊಳಿ.

 

ಕಿಚ್ಚ ಸುದೀಪ್ ಟೀಸರ್:

 

 

 

ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಅವರು ಒಂದು ಸಣ್ಣ ಅತಿಥಿ ಪಾತ್ರ ಮಾಡಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜು ಕನ್ನಡ ಮೀಡಿಯಂ ಚಿತ್ರತಂಡ ಒಂದು ವಿಶೇಷ ಟೀಸರ್ ವೊಂದನ್ನ ಬಿಡುಗಡೆಮಾಡಿತ್ತು. ಈ ಟೀಸರ್ ಬಿಡುಗಡೆಯಾದ ಆರಂಭದ ಮೂರ್ನಾಲ್ಕು ದಿನ ಯೂಟ್ಯೂಬ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು. ಕೇವಲ ಒಂದು ವಾರದಲ್ಲಿ 1 ಮಿಲಿಯನ್ ಹಿಟ್ಸ್ ಪಡೆದಿತ್ತು.

 

ದರ್ಶನ್ “ತಾರಕ್” ಟೀಸರ್;

 


ಕಳೆದ ವಾರ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರದ ಟೀಸರ್ ಮತ್ತು ಟ್ರೈಲರ್ ಗಳು ಕೂಡ ಯೂಟ್ಯೂಬ್ ನಲ್ಲಿ ಸಕತ್ ಸದ್ದು ಮಾಡಿದ್ದು, ‘ತಾರಕ್’ ಚಿತ್ರದ ಟೀಸರ್ ನ ಸದ್ಯ ಎಂಟುವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆರಂಭದಲ್ಲಿ ಈ ಟೀಸರ್ ಕೂಡ ಯೂಟ್ಯೂಬಿನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು.

 

ಯೂಟ್ಯೂಬ್ ನಲ್ಲಿ “ಧ್ರುವ” ಭರ್ಜರಿ ಸೌಂಡು:

 

 

 

ದ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರದ ಹಾಡು ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿ ಮಾಡಿದೆ. ಈ ಹಾಡನ್ನು 27 ಲಕ್ಷ ಮಂದಿ ಜನ ಯೂಟ್ಯೂಬ್ ನಲ್ಲಿ ವೀಕ್ಷಣೆ ಮಾಡಿದ್ದಾರೆ. ಮತ್ತೊಂದು ಹಾಡು ಪುಟ್ಟ ಗೌರಿ ಕೂಡ ಯೂಟ್ಯೂಬ್ ನಲ್ಲಿ ಅದ್ಬುತ ಯಶಸ್ಸನ್ನು ಗಳಿಸಿದೆ. ಇದೇ ಚಿತ್ರದ ಟ್ರೈಲರ್ ಕೂಡ ಭಾರಿ ಸದ್ದು ಮಾಡಿದ್ದು ಸದ್ಯ 6 ನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ.

 

ಹಂಬಲ್ ಪೊಲಿಟಿಷಿಯನ್ ನೊಗರಾಜ್ ಟ್ರೈಲರ್:

 

 

 

ನಾಯಕನಾಗಿ ನಿರೂಪಕ ಡ್ಯಾನಿಶ್‌ ಸೇಠ್ ಕಾಣಿಸಿಕೊಂಡಿರುವ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಟ್ರೈಲರ್ ರಿಲೀಸ್ ಆದ ಕೇವಲ ಎರಡೇ ದಿನದಲ್ಲಿ 3 ಲಕ್ಷಕ್ಕೂ ಜನರು ನೋಡಿರುವ ಈ ಟ್ರೈಲರ್ ಸದ್ಯ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸಾಲಿನಲ್ಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top