fbpx
ವಿಶೇಷ

ಹೈದರಾಬಾದ್ ‘ನಿಜಾಮನ’ ಕೈಯಲ್ಲಿ ನಲುಗಿದ್ದ ‘ಹೈದರಾಬಾದ್ ಕರ್ನಾಟಕ ‘ ವಿಮೋಚನೆಯಾಗಿದ್ದು ಹೇಗೆ ? ಓದಿ 1948 ಸೆಪ್ಟೆಂಬರ್ 18 ರ ರೋಚಕ ಕಥೆ..

ಹೈದರಾಬಾದ್ ‘ನಿಜಾಮನ’ ಕೈಯಲ್ಲಿ ನಲುಗಿದ್ದ ‘ಹೈದರಾಬಾದ್ ಕರ್ನಾಟಕ ‘

ವಿಮೋಚನೆಯಾಗಿದ್ದು ಹೇಗೆ ? ಓದಿ 1948 ಸೆಪ್ಟೆಂಬರ್ 18 ರ ರೋಚಕ ಕಥೆ..

ಹೈದರಾಬಾದ್ ಕರ್ನಾಟಕ ವಿಮೋಚನೆಯಾಗಿದ್ದು ಹೇಗೆ ಓದಿ ರೋಚಕ ಕಥೆ.

 

 

1947 ರ ಸ್ವಾತಂತ್ರ್ಯದ ನಂತರ ಭಾರತದ ಸಾರ್ವಭೌಮ ಗಣರಾಜ್ಯಗಳ ಒಗ್ಗೂಡಿಸುವಿಕೆ ಸರ್ದಾರ್ ವಲ್ಲಭಾಯ್ ಪಟೇಲ್ ನೇತೃತ್ವದ ತಂಡ ಎಲ್ಲಾ ಸ್ಥಳೀಯ ರಾಜ್ಯಗಳು ಭಾರತೀಯ ಒಕ್ಕೂಟಕ್ಕೆ ವಿಲೀನಗೊಳ್ಳಲು ಹರಸಾಹಸ ಪಟ್ಟರು ಆದರೆ ಅನೇಕ ರಾಜಾಡಳಿತ ಪ್ರದೇಶಗಳು ಒಕ್ಕೂಟ ವ್ಯವಸ್ಥೆಗೆ ಸೇರದೆ ಸ್ವಾತಂತ್ರ ರಾಜ್ಯಗಳಾಗಿ ಇರಲು ಇಷ್ಟಪಟ್ಟಿದ್ದರು ,

ಒಕ್ಕೂಟ ವ್ಯವಸ್ಥೆ ಬೇಡವೆಂದ ರಾಜ ಮನೆತನ :

 

 

ಹೈದರಾಬಾದ್ ರಾಜ್ಯಗಳ ನಿಜಾಮ ಕಾಶ್ಮೀರದ ಮಹಾರಾಜ ಮತ್ತು ಜುನಾಗಾದ್ ನ ನಿಜಾಮ ಒಕ್ಕೂಟದ ಆಡಳಿತ ವ್ಯವಸ್ಥೆಗೆ ಸೇರದೆ ಇರಲು ಬಯಸಿದ್ದರು .

ಪ್ರತ್ಯೇಕ ರಾಜ ಮನೆತನ – ಹೈದರಾಬಾದ್ ಪ್ರಾಂತ್ಯ :

ಭಾರತದಲ್ಲಿ ಇಸ್ಲಾಂ ರಾಜ್ಯವನ್ನು ಮಾಡಲು ನಿಜಾಮ ಪ್ರಯತ್ನಿಸಿದರು ಎಂದು ಅನೇಕ ಉಲ್ಲೇಖಗಳು ಹೇಳುತ್ತವೆ ,ಗುಲ್ಬರ್ಗದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಾರಂಭವಾದಗ
‘ಮಿರ್ ಉಸ್ಮಾನ್ ಅಲಿ ಖಾನ್’ ನಿಜಾಮರಾಗಿದ್ದರು , 1947 ರಲ್ಲಿ ಇಡೀ ದೇಶವು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಿತು ಆದರೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರು ಹೈದರಾಬಾದ್ನ ನಿಜಾಮನ ನಿರಂಕುಶಾಧಿಕಾರದ ಆಳ್ವಿಕೆಗೆ ಒಳಗಾಗಿದ್ದರು. ರಾಷ್ಟ್ರೀಯ ಚಳವಳಿಯ ಪ್ರಭಾವವು ಗುಲ್ಬರ್ಗದಲ್ಲಿ ಹರಡಿತ್ತು ಆದರೆ ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯವನ್ನು ಪಡೆಯಲಿಲ್ಲ, ಗುಲ್ಬರ್ಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವೈಸರಾಯ್ ನಿಜಾಮನಿಗೆ ಆದೇಶ ನೀಡಿದರು.

 

 

ಹೈದರಾಬಾದ್ ಪ್ರಾಂತ್ಯ :

ಹೈದರಾಬಾದ್ ಸಂಸ್ಥಾನಗಳಲ್ಲಿನ ಜನ ಆತಂಕದಿಂದಲೇ ಬದುಕುತ್ತಿದ್ದರು , ದೇಶದಲ್ಲಿಯೇ ದೊಡ್ಡದಾದ ಸಂಸ್ಥಾನ ಹೈದರಾಬಾದ್ ಆಗಿತ್ತು , ಸುಮಾರು 82 ,000 ಚದರ ಮೈಲಿಯಷ್ಟು ವಿಸ್ತಾರವಾಗಿದ್ದ ಸಂಸ್ಥಾನದ ಜನಸಂಖ್ಯೆ ಒಟ್ಟು ವಿಸ್ತಾರ 1 ಕೋಟಿ 60 ಲಕ್ಷ .

ಹೈದರಾಬಾದ್ ಕರ್ನಾಟಕಇತಿಹಾಸ :

 

 

ಗುಲ್ಬರ್ಗ ದ ಹಳೆಯ ಹೆಸರು ಕಲ್ಬುರ್ಗಿ ಎಂದುಆದರೆ ಗುಲ್ಬರ್ಗ ಎಂಬ ಪದವು ಪರ್ಷಿಯನ್ ಭಾಷೆಯಿಂದ ಬಂದಿದ್ದು ‘ಗುಲ್’ ಎಂದರೆ ಹೂವು ‘ಬಾರ್ಗ’ ಎಂದರೆ ಎಲೆಗಳು
ಎಂದು .ಹೂವುಗಳು ಮತ್ತು ಮರಗಳಿಂದ ಕೂಡಿದ್ದ ಸುಂದರ ಪ್ರದೇಶವಾಗಿದ್ದ ಕಾರಣ ಈ ಹೆಸರನ್ನು ಬಹಮನಿ ರಾಜವಂಶದ ಮುಸ್ಲಿಂ ಆಡಳಿತಗಾರರು ನೀಡಿದ್ದಾರೆಂದು ಹೇಳಲಾಗುತ್ತದೆ ಅವರಿಂದಲೇ ಈ ಸ್ಥಳವು ಬಹಳ ಜನಪ್ರಿಯಗೊಂಡಿತ್ತು , ಇದರ ಜೊತೆ ಬೀದರ್ ,ರಾಯಚೂರು , ಕೊಪ್ಪ , ಬಳ್ಳಾರಿ ಸಹ ಸೇರಿದ್ದವು .

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ :

ಆಗ ಗುಲ್ಬರ್ಗದಲ್ಲಿ ಕೋಮುಗಲಭೆಗಳು ಸಹ ಶುರುವಾಗಿದ್ದವು ,ನಿಜಾಮನು ಈ ರಾಜ್ಯವನ್ನು ಪಾಕಿಸ್ತಾನದ ಜೊತೆ ಸೇರಿಸಲು ಸಂಚು ಮಾಡಿದ್ದನು , ಗುಲ್ಬರ್ಗಾ ಜಿಲ್ಲೆಯ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಯಾಸಪಟ್ಟರು, ಆರ್ಯ ಸಮಾಜ , ಹೈದರಾಬಾದ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಮತ್ತು ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಜಾಗೃತಗೊಳಿಸಲು ಶುರುಮಾಡಿದರು .

 

 

ಹಿಂಸೆ ಮಾರ್ಗದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಶ್ರೀ ರಮಾನಂದ ತೀರ್ಥರು ಈ ಪ್ರಾಂತ್ಯದಲ್ಲಿ ಅಹಿಂಸೆ ಮಾರ್ಗದಲ್ಲಿ ತಮ್ಮ ಹೋರಾಟ ಮುಂದುವರಿಸಿದರು ಇದೆ ಕಾರಣಕ್ಕೆ ಬಂಧನಕ್ಕೂ ಒಳಗಾದರು ಆದರೆ ಇವರ ಬಂಧನದ ನಂತರ ಹೋರಾಟ ಹಿಂಸಾ ಮಾರ್ಗ ತಾಳಿತ್ತು , ಮಹಿಳೆಯರು ಮಕ್ಕಳಾದಿಯಾಗಿ ಬಂದೂಕು ಹಿಡಿದು ಹೋರಾಟ ಮಾಡಲು ಶುರು ಮಾಡಿದ್ದರು .

‘ಆಪರೇಷನ್ ಪೋಲೊ’ ಕಾರ್ಯಾಚರಣೆ :

 

 

ಆಗಿನ ಗೃಹ ಮಂತ್ರಿಯಾಗಿದ್ದ ಸರ್ದಾರ್ ವಲ್ಲಭಾಯ್ ಪಟೇಲ್ ರು ಇಲ್ಲಿನ ಎಲ್ಲ ಹೋರಾಟದ ಮಾಹಿತಿಯನ್ನು ಪಡೆದುಕೊಂಡರು , ಇನ್ನು ಸುಮ್ಮನಿದ್ದರೆ ಸರಿಯಲ್ಲ ಎಂದು ಮನಗೊಂಡು ಸೈನ್ಯಕ್ಕೆ ಆದೇಶ ನೀಡಿದರು.
1948 ಸೆಪ್ಟೆಂಬರ್ 13 ‘ಆಪರೇಷನ್ ಪೋಲೊ’ ಎಂಬ ಹೆಸರಿನ ಕಾರ್ಯಾಚರಣೆ ಹೈದರಾಬಾದ್ ತಲುಪಿತ್ತು , ಸೊಲ್ಲಾಪುರ ,ಬೇಜವಾಡ ಹೀಗೆ ಒಟ್ಟು 5 ಕಡೆಗಳಿಂದ ಸೈನ್ಯ ಮುತ್ತಿತ್ತು, ಮೇಜರ್ ಜನೆರಲ್ ಜೆ. ಎನ್ ಚೌದರಿಯವರ ನೇತೃತ್ವದ ಸೈನ್ಯ ರಜಾಕಾರರ ಪಡೆಯ ವಿರುದ್ಧ ಹೋರಾಟ ಮಾಡಿತ್ತು .

 

 

ಸೆಪ್ಟೆಂಬರ್ 17 ಸಂಜೆ 5 ರ ಸುಮಾರಿಗೆ ಹೈದರಾಬಾದ್ ಸಂಸ್ಥಾನಗಳ ಸೇನೆಯ ಮುಖ್ಯಸ್ಥ ಎಲ್ .ಉದ್ರುಜ್ ಜೆ. ಎನ್ ಚೌದರಿಯವರ ನೇತೃತ್ವದ ಸೈನ್ಯಕ್ಕೆ ಶರಣಾದರು ಹಾಗೆಯೇ ತಮಗೂ ರಜಾಕಾರರ ಪಡೆಗು ಯಾವುದೇ ಸಂಬಂಧವಿಲ್ಲವೆಂದು ಘೋಷಣೆ ಮಾಡಿದರು.

 

 

ಸೆಪ್ಟೆಂಬರ್ 18 ರಂದು ನಿಜಾಮನು ಭಾರತದ ಒಕ್ಕೂಟ ವ್ಯವಸ್ಥೆಗೆ ಹೈದರಾಬಾದ್ ಅಧಿಕೃತವಾಗಿ ಸೇರಿಸಿ ಅಂಗೀಕಾರದ ಪತ್ರಕ್ಕೆ ಸಹಿ ಹಾಕಿದನು .
ಹೀಗೆ ಹೈದರಾಬಾದ್ ಕರ್ನಾಟಕದ ಜನರು ವಿಮೋಚನೆ ಹೊಂದಿ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top