fbpx
ಮನೋರಂಜನೆ

ದರ್ಶನ್ ಎದುರು ಯುದ್ಧಕ್ಕೆ ಮಹೇಶ್ ಬಾಬು ತಯಾರು..ಕನ್ನಡಿಗರು ಡಿ ಬಾಸ್ ನನ್ನು ಕೈ ಬಿಡುವರೇ??

ದರ್ಶನ್ ಎದುರು ಯುದ್ಧಕ್ಕೆ ಮಹೇಶ್ ಬಾಬು ತಯಾರು..ಕನ್ನಡಿಗರು ಡಿ ಬಾಸ್ ನನ್ನು ಕೈ ಬಿಡುವರೇ??

 

 

 

 

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹು ತಾರಾಗಣದ ಬಹು ನಿರೀಕ್ಷಿತ ತಾರಕ್ ಸಿನಿಮಾ ದಸರಾ ಅಂಗವಾಗಿ ಇದೇ ಸೆಪ್ಟೆಂಬರ್ 29 ರಂದು ಅದ್ಧೂರಿಯಾಗಿ ಬಿಡುಗಡೆ ಆಗಲು ತಯಾರಿ ನಡೆಸಿದೆ.. ಅದೇ ವಾರದಲ್ಲಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ರವರ ಸ್ಪೈಡರ್ ಚಿತ್ರ ಕೂಡ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲೇ ಬಿಡುಗಡೆ ಆಗುತ್ತಿದೆ..

 

 

 

ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಮಾಡಿರುವ ನಮ್ಮ ದರ್ಶನ್ ರವರಿಗೆ ಮಹೇಶ್ ಬಾಬುರವರ ಚಿತ್ರ ಪೈಪೋಟಿ ಯಾಗಿ ನಿಂತಿದೆ.. ತಾರಕ್ ಬಿಡುಗಡೆಗೆ ಕೇವಲ ಒಂದು ದಿನ ಮುಂಚಿತವಾಗಿ ಬಿಡುಗಡೆಯಗುತ್ತಿರುವ ಈ ಸ್ಪೈಡರ್ ನಮ್ಮ ತಾರಕ್ ನನ್ನು ಹಿಂದಿಕ್ಕುವುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ..

 

 

 

ಇವೆರೆಡರ ನಡುವೆ ದೊಡ್ಡ ಮಟ್ಟದ ಕ್ಲ್ಯಾಶ್ ಆಗುವುದಂತೂ ಸತ್ಯ.. ಈಗಾಗಲೇ ಟೀಸರ್ ಮತ್ತು ಟ್ರೇಲರ್ ಗಳಿಂದ ಯೂಟ್ಯೂಬ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿರುವ ತಾರಕ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಅಭಿನಯಿಸಿರುವುದು ಕಂಡು ಬಂದಿದೆ..

 

 

ಅತ್ತ ತೆಲುಗಿನಲ್ಲೂ ಪ್ರಿನ್ಸ್ ಮಹೇಶ್ ಬಾಬು ರವರ ಸ್ಪೈಡರ್ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ.. ಸದ್ಯ ಪ್ರೇಕ್ಷಕ ಮಹಾಪ್ರಭು ಏನು ಮಾಡುವನೆಂದು ಸೆಪ್ಟೆಂಬರ್‌ 29 ರವರೆಗೆ ಕಾಯಲೇ ಬೇಕಿದೆ..ಏನೇ ಆಗಲಿ ಕನ್ನಡಿಗರಾಗಿ ನಮ್ಮ ಕನ್ನಡ ಸಿನಿಮಾಗೆ ಆಧ್ಯತೆ ಕೊಟ್ಟಾಗಲೇ ನಮ್ಮ ಚಿತ್ರರಂಗ ಬೆಳೆಯುವುದು.. ಆಲ್ ದಿ ಬೆಸ್ಟ್ ತಾರಕ್..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top