fbpx
ಸಮಾಚಾರ

ಓಲಾ.ಉಬರ್ ವಿರುದ್ಧ ‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ಬಿಡುಗಡೆಗೊಳಿಸಿದ HDK.

ಓಲಾ ಉಬರ್ ವಿರುದ್ಧ  ‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ಬಿಡುಗಡೆಗೊಳಿಸಿದ HDK.

 

 

 

ಓಲಾ, ಉಬರ್‌ ಕಂಪನಿಗಳ ವಿರುದ್ಧ ತಿರುಗಿಬಿದ್ದಿದ್ದ ಡ್ರೈವರ್ ಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಾಳತ್ವದಲ್ಲಿ ನಿರ್ಮಿಸಿದ್ದ ‘ನಮ್ಮ ಟೈಗರ್‌’ ಮೊಬೈಲ್ ಆ್ಯಪ್‌ ಆಧಾರಿತ ಸೇವೆಗೆ ಮೊದಲ ಹಂತದ ಚಾಲನೆ ದೊರೆತಿದ್ದು, ಮುಂದಿನ ಸೋಮವಾರದಿಂದ ಅಂದರೆ ಸೆಪ್ಟೆಂಬರ್ 25 ರಿಂದ ಚಾಲಕರ ರಿಜಿಸ್ಟರ್ ಪ್ರಕ್ರಿಯೆ ಶುರುವಾಗಲಿದೆ.

 

 

 

ಓಲಾ, ಉಬರ್‌ ಕಂಪೆನಿಗಳಿಗೆ ಪರ್ಯಾಯವಾಗಿ ಡ್ರೈವರ್ ಗಳು ಮತ್ತು ಓನರ್ ಗಳು ನಿರ್ಮಿಸಿರುವ ‘ಹುಲಿ ಟೆಕ್ನಾಲಜೀಸ್‌’ ಕಂಪೆನಿಯು ತನ್ನ ಮೊದಲ ಮೊಬೈಲ್‌ ಆ್ಯಪ್‌ ಅನ್ನು ಗುರುವಾರ ಬಿಡುಗಡೆ ಮಾಡಿದೆ.ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದಲ್ಲಿ ನಡೆದ ಸಣ್ಣ ಕಾರ್ಯಕ್ರಮದಲ್ಲಿ, ಕುಮಾರಸ್ವಾಮಿ ಅವರೇ ಮೊದಲಿಗರಾಗಿ ತಮ್ಮ ಮೊಬೈಲ್‌ನಲ್ಲಿ ಈ ಆಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ‘ನಮ್ಮ ಟೈಗರ್‌ ಡ್ರೈವರ್‌’ ಆ್ಯಪ್‌ ರಿಲೀಸ್ ಮಾಡಿದರು. 20 ದಿನಗಳ ಬಳಿಕ ಈ ಆಪ್ ಮೂಲಕ ಗ್ರಾಹಕರ ಅಪ್ಲಿಕೇಶನ್‌ಗೆ ಚಾಲನೆ ನೀಡಲಾಗುವುದು.

 

 

 

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ‘Namma TYGR Driver’ ಆ್ಯಪ್‌ ಅನ್ನು ಚಾಲಕರು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ನಂತರ
ಆ್ಯಪ್‌ ನಲ್ಲಿ ಸರಿಯಾದ ಮಾಹಿತಿಗಳನ್ನು ನೀಡಿವುದರ ಮೂಲಕ ಲಾಗ್‌–ಇನ್‌ ಆಗಿ ನೊಂದಾಯಿಸಿಕೊಳ್ಳಬೇಕು, ನಂತರ ಕಂಪೆನಿಯ ಪ್ರತಿನಿಧಿಗಳು ಲಾಗಿನ್ ಆಗಿರುವ ಚಾಲಕರನ್ನು ಸಂಪರ್ಕಿಸುತ್ತಾರೆ. 20 ದಿನಗಳಲ್ಲಿ 10,000 ಚಾಲಕರನ್ನು ನೋಂದಾಯಿಸಿಕೊಳ್ಳವ ನಿರೀಕ್ಷೆ ಇದೆ.

 

 

ಚಾಲಕರ ನೋಂದಣಿ ಪ್ರಕ್ರಿಯೆ ಮುಗಿದ ಮೇಲೆ ಪ್ರಯಾಣಿಕರ ಸೇವೆಗಾಗಿ ಎಂತಲೇ ಪ್ರತ್ಯೇಕವಾಗಿ ‘ನಮ್ಮ ಟೈಗರ್‌’ ಆ್ಯಪ್‌ ರಿಲೀಸ್ ಮಾಡಲಿದ್ದೇವೆ ಅದಾದ ಬಳಿಕ ಕಂಪೆನಿ ಟ್ಯಾಕ್ಸಿಗಳು ರಸ್ತೆಗೆ ಇಳಿಯಲಿವೆ’ ಚಾಲಕರ ಸಂಘದ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top