fbpx
ಮನೋರಂಜನೆ

ಪೊಲೀಸರ ಕಣ್ಣು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಪೂಜಾ ಗಾಂಧೀ ಕುಟುಂಬ..ಏನಿದು ಮಳೆ ಹುಡುಗಿಯ ಹೊಸ ಅವಾಂತರ

ಪೊಲೀಸರಿಂದ ತಪ್ಪಿಸಿಕೊಳ್ಳಲು ಮನೆಗಳಿಂದ ಮನೆಗೆ ಶಿಫ್ಟ್ ಆಗುತ್ತಿರುವ ಪೂಜಾ ಗಾಂಧೀ ಕುಟುಂಬ..ಏನಿದು ಮಳೆ ಹುಡುಗಿಯ ಹೊಸ ವಿವಾದ.

 

 

 

ಸದಾ ಯಾವುದಾದರೊಂದು ವಿವಾದಗಳಿಂದ ಸುದ್ದಿಯಾಗುವ ಕನ್ನಡ ನಟಿ, ಮಳೆ ಹುಡುಗಿ ಪೂಜಾ ಗಾಂಧೀ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವುದರ ಮೂಲಕ ಎಲ್ಲರು ಆಶ್ಚರ್ಯಗೊಳ್ಳುವಂತೆ ಮಾಡಿದ್ದಾರೆ. ಆದರೆ ಪೂಜಾ ಗಾಂಧೀ ಈ ಬಾರಿ ಸಂಕಷ್ಟಕ್ಕೆ ಸಿಕ್ಕಾಕೊಂಡಿರೋದು ತನ್ನ ತಂದೆಯಿಂದ. ಹೌದು, ಪೂಜಾ ಗಾಂಧಿಯವರ ತಂದೆ ಪವನ್ ಗಾಂಧೀ ರವರ ಚೆಕ್ ಬೌನ್ಸ್ ಆಗಿರುವ ಕೇಸ್ ನಲ್ಲಿ ಪವನ್ ಗಾಂಧಿಗಾಗಿ ಪೊಲೀಸರಿಂದ ಹುಡುಕಾಟ ಶುರುವಾಗಿದೆ.

 

 

 

ಬೆಂಗಳೂರಿನ ಜಯನಗರ ಹಾಗು ಬನಶಂಕರಿಯ ಆದೀಶ್ವರ್ ಶೋರೂಂನಲ್ಲಿ ಸುಮಾರು 8 ಲಕ್ಷ ಬೆಲೆಬಾಳುವ ಎಲೆಕ್ಟ್ರಾನಿಕ್ ಗೃಹೋಪಯೋಗಿ ಉಪಕರಣಗಳನ್ನು ಖರೀದಿ ಮಾಡಿದ್ದ ಪವನ್ ಗಾಂಧಿ ಅವರು ಷೋ ರೂಮ್ ನವರಿಗೆ ನಗದಿನ ಬದಲು ಚೆಕ್ ಕೊಟ್ಟಿದ್ದರು. ಆದರೆ ಪವನ್ ಗಾಂಧಿಯವರ ಬ್ಯಾಂಕ್ ಅಕೌಂಟ್ ನಲ್ಲಿ ಹಣವಿಲ್ಲದೆ ಅವರು ಷೋ ರೂಮ್ ನವರಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ನಂತರ ಪವನ್ ಗಾಂಧಿಗೆ ಚೆಕ್ ಬೌನ್ಸ್ ಆಗಿರುವ ವಿಷಯವನ್ನು ತಿಳಿಸಲು ಅಧೀಶ್ವರ್ ಶೋರೂಂ ನ ಸಿಬ್ಬಂದಿಗಳು ಫೋನ್ ಮಾಡಿದ್ದಾರೆ ಆದ್ರೆ ಆತ ಫೋನ್ ಕರೆಗೂ ಸಿಗಲಿಲ್ಲ.

 

 

 

ಇದಾದ ನಂತರ ಅಧೀಶ್ವರ್ ಶೋರೂಂ ನ ಅಡಳಿತ ಮಂಡಳಿ ವಿಧಿಯಿಲ್ಲದೆ ಕೋರ್ಟ್ ಮೊರೆ ಹೋಗಿದೆ. ಅಧೀಶ್ವರ್ ಷೋ ರೂಮ್ ನ ಅಡಳಿತ ಮಂಡಳಿ 27ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ಪವನ್ ಘಾನಿಧಿಯ ವಿರುದ್ದ್ಹ ದಾಖಲಿಸಿದೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪವನ್ ಗಾಂಧಿಯನ್ನ ಬಂಧಿಸಿ ಕರೆ ತರುವಂತೆ ಅರೆಸ್ಟ್ ವಾರೆಂಟ್ ನೀಡಿದೆ.

 

 

ಪವನ್ ಗಾಂಧಿಯನ್ನು ಅರೆಸ್ಟ್ ಮಾಡಲು ವಾರೆಂಟ್ ಹಿಡಿದು ಹೋದ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು. ಬನಶಂಕರಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಪೂಜಾಗಾಂಧಿ ಕುಟುಂಬ ಮೂರು ತಿಂಗಳ ಹಿಂದಯೇ ಮನೆ ಖಾಲಿ ಮಾಡಿದ್ದಾರೆ. ಮೂರು ಬಾರಿ ವಾರೆಂಟ್ ಲೆಟರ್ ಹಿಡಿದು ಹೋಗಿ ಬರಿಗಯ್ಯಲ್ಲಿ ಬಂದಿರುವ ಪೊಲೀಸರು ಈಗ ಮತ್ತೆ ಪೂಜಾಗಾಂಧಿ ತಂದೆ ಪವನ್ ಗಾಂಧಿಗಾಗಿ ಹುಡುಕಾಟ ಪ್ರಾರಂಭವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top