fbpx
ಸಮಾಚಾರ

ಮಂತ್ರಿಗಳಿಗೆ ಓಪನ್ ಚಾಲೆಂಜ್ ಹಾಕಿದ ಚಿತ್ರದುರ್ಗದ ವಿದ್ಯಾರ್ಥಿನಿ.

ಮಂತ್ರಿಗಳಿಗೆ ಓಪನ್ ಚಾಲೆಂಜ್ ಹಾಕಿದ ಚಿತ್ರದುರ್ಗದ ವಿದ್ಯಾರ್ಥಿನಿ.

 

 

 

ಹೌದು ಮಂತ್ರಿಗಳ ಜೊತೆ ಮಾತನಾಡುವುದಕ್ಕೆ ಕೆಲವರು ಹೆದರುತ್ತಾರೆ ಆದರೆ ಈ ವಿದ್ಯಾರ್ಥಿನಿ ಸಚಿವ ಆಂಜನೇಯರಿಗೆ ಸವಾಲೊಂದನ್ನು ಹಾಕಿದ್ದಾಳೆ..ಚಿತ್ರದುರ್ಗದ ನಯನಾ ಕಾರ್ಯಕ್ರಮವೊಂದರಲ್ಲಿ ಸಚಿವರಿಗೆ ಸವಾಲ್ ಹಾಕಿದ ವಿದ್ಯಾರ್ಥಿನಿಯಾಗಿದ್ದಾಳೆ..

 

 

ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಒಂದರಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸಚಿವ ಆಂಜನೇಯರವರು.. ಸರ್ ಎಮ್ ವಿಶ್ವೇಶ್ವರಯ್ಯ, ಯು ಆರ್ ರಾವ್.. ಅಂಬೇಡ್ಕರ್ ಹೀಗೆ ಮಹಾನ್ ವ್ಯಕ್ತಿಗಳೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿರಿವುದು.. ಹಾಗಾಗಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಬೇಡಿ ಅಂದು ವಿದ್ಯಾರ್ಥಿಗಳಿಗೆ ಹೇಳುವಾಗ ಅದೇ ಊರಿನ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿನಿಯಾದ ನಯನ ರವರು ಆಂಜನೇಯರ ಸಮೇತ ಇಡೀ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ..

 

 

 

ಸರ್ಕಾರಿ ಶಾಲೆಗೆ ಸೇರಿ ಎಂದು ಜನ ಪ್ರತಿನಿಧಿಗಳು ಭಾಷಣ ಮಾಡುತ್ತೀರಿ.. ಆದರೆ ಸರ್ಕಾರಿ ಶಾಲೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದಿಲ್ಲ.. ಹಾಗೆನಾದರು ನೀವು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಿದ್ದೇ ಆದಲ್ಲಿ ನಾನು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಯನ್ನೇ ಸೇರುತ್ತೇನೆ ಎಂದಿದ್ದಾಳೆ..

 

 

 

ನಾನು ಈಗಾಗಲೇ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಸರ್ಕಾರಿ ಶಾಲೆಗಳ ದುರಾವಸ್ಥೆಯ ಬಗ್ಗೆ ತಿಳಿಸಿದರು ಏನೂ ಪ್ರಯೋಜನ ವಾಗಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ..ಏನೇ ಆಗಲಿ ನಮ್ಮ ದುಡ್ಡಿನಿಂದ ನಡೆಯುತ್ತಿರುವ ಸರ್ಕಾರಕ್ಕೆ ಹೀಗೆ ಅವರ ಕೆಲಸದ ಬಗ್ಗೆ ಪ್ರಶ್ನೆ ಮಾಡುವವರಿದ್ದಾರೆ ಎಂಬ ಅರಿವು ಬರಲೇಬೇಕಾಗಿದೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top