fbpx
ಮನೋರಂಜನೆ

ರಮೇಶ್ ಅರವಿಂದ್-ಕಾಜಲ್ ಅಗರ್ ವಾಲ್ ಚಿತ್ರಕ್ಕೆ ಅದ್ದೂರಿ ಚಾಲನೆ.

ರಮೇಶ್ ಅರವಿಂದ್-ಕಾಜಲ್ ಅಗರ್ ವಾಲ್ ಚಿತ್ರಕ್ಕೆ ಅದ್ದೂರಿ ಚಾಲನೆ.

 

 

 

ಕಂಗನಾ ರಣಾವತ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಕ್ವೀನ್ ಚಿತ್ರವು ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಈ ಚಿತ್ರವನ್ನು ಕನ್ನಡ ಅಮತ್ತು ತಮಿಳಿನಲ್ಲಿ ನಿರ್ದೇಶನ ಮಾಡಲಿದ್ದಾರೆ.

 

 

 

ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಈ ಚಿತ್ರ ರಿಮೇಕ್ ಅಗಲಿದ್ದು, ಕನ್ನಡದ ಅವತರಣಿಕೆಗೆ ಪಾರೂಲ್ ಯಾದವ್ ಹೀರೋಯಿನ್ ಆಗಿ ಫಿಕ್ಸ್ ಆಗಿದೆ. ತಮಿಳಿನಲ್ಲಿ ಆ ಪಾತ್ರ ಕಾಜಲ್ ಅಗರ್ವಾಲ್ ಮಾಡಲಿದ್ದಾರೆ. ಕನ್ನಡದಲ್ಲಿ ಬಟರ್ ಫ್ಲೈ ಎಂತಲೂ ಹಾಗೂ ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಎಂಬ ಟೈಟಲ್ ನಲ್ಲಿ ಚಿತ್ರಗಳು ಮೂಡಿಬರಲಿವೆ. ‘ಪ್ಯಾರಿಸ್.. ಪ್ಯಾರಿಸ್’ ಸಿನಿಮಾದ ಮುಹೂರ್ತ ನಿನ್ನೆ ನಡೆದಿದೆ.

 

 

 

ಅಕ್ಟೊಬರ್ 1ರಂದು ಗೋಕರ್ಣದಲ್ಲಿ ‘ಬಟರ್​ಫ್ಲೈ’ ಮೊದಲ ಹಂತದ ಶೂಟಿಂಗ್ ಸ್ಟಾರ್ಟ್ ಆಗಲಿದೆ ‘ಪ್ಯಾರಿಸ್ ಪ್ಯಾರಿಸ್’ ಚಿತ್ರ ಕೂಡ ಸ್ವಲ್ಪ ದಿನಗಳಲ್ಲೇ ಶೂಟಿಂಗ್ ಸ್ಟಾರ್ಟ್ ಆಗುತ್ತಿದೆ. ಈ ಎರಡು ಚಿತ್ರಗಳ ಮೊದಲ ಹಂತದ ಶೂಟಿಂಗ್ ಮುಗಿದ ನಂತರ ವಿದೇಶಿ ಲೊಕೇಷನ್​ಗಳಿಗೆ ತೆರಳಿ ಚಿತ್ರೀಕರಿಸಲಾಗುತ್ತದೆ. ಫಾರಿನ್ ಲೊಕೇಶನ್ ಗಳಲ್ಲಿ ಪಾರುಲ್ ಮತ್ತು ಕಾಜಲ್ ಏಕಕಾಲಕ್ಕೆ ಕ್ಯಾಮರಾ ಎದುರು ನಟಿಸಲಿದ್ದಾರೆ.

 


.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top