fbpx
ಮನೋರಂಜನೆ

ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ ನಟಿಸಿರುವ ಈಕೆ ದೇಶದ ಮೊದಲ ಮಂಗಳಮುಖಿ ಹೀರೊಯಿನ್..! ನೀವು ಓದಲೇಬೇಕು.

ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ ನಟಿಸಿರುವ ಈಕೆ ದೇಶದ ಮೊದಲ ಮಂಗಳಮುಖಿ ಹೀರೊಯಿನ್..! ನೀವು ಓದಲೇಬೇಕು.

 

 

 

ಸಮಾಜದಲ್ಲಿ ಮಂಗಳ ಮುಖಿಯರು ಎಂದರೆ ಯಾವರೀತಿ ನೋಡಲಾಗುತ್ತೆ ಮತ್ತು ಸಮಾಜದಲ್ಲಿನ ಅವರ ಸ್ಥಿತಿಗತಿಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಆದ್ರೆ ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಇದು ಹೆಮ್ಮೆಯ ವಿಷಯ ಕೂಡ ಹೌದು, ಇದೇ ವರ್ಷ ಬಿಡುಗಡೆಯಾಗಿದ್ದ ಮಮ್ಮೂಟ್ಟಿ ಅವರ ಚಿತ್ರವೊಂದರಲ್ಲಿ ಪುರುಷನೇ ನಾಯಕಿಯ ಪಾತ್ರ ಮಾಡಿದ್ದಾರೆ, ಅಂದರೆ ಲಿಂಗಪರಿವರ್ತಿತ ಮಹಿಳೆಯೇ ಈ ಚಿತ್ರದ ಹೀರೋಯಿನ್. ಈ ಮೂಲಕ ಭಾರತೀಯ ಸಿನೆಮಾ ರಂಗದಲ್ಲೇ ನಾಯಕಿಯ ಪಾತ್ರ ಮಾಡಿದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 


ಮಮ್ಮುಟ್ಟಿ ನಟಿಸಿರುವ ಮಲೆಯಾಳಂ ಮತ್ತು ತಮಿಳಿನಲ್ಲಿ ಮೂಡಿಬಂದಿದ್ದ “ಪೆರ್ನಬು” ಚಿತ್ರದಲ್ಲಿ ನಟಿಸಿರುವ 21 ವರ್ಷದ ಅಂಜಲಿ ಮೂಲತಃ ತಮಿಳುನಾಡಿನ ಕೊಯಂಬತ್ತೂರಿನವರು. 19 ವರ್ಷ ವಯಸ್ಸಿನವಳಾಗಿದ್ದ ಅಂಜಲಿ, ಬೆಂಗಳೂರಿನಲ್ಲಿ ಪದವಿ ವುಆಸಂಗ ಮಾಡುತ್ತಿರುವಾಗ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರು. ಲಿಂಗ ಪರಿವರ್ತನೆಯನ್ನು ಮಾಡಿಸಿಕೊಳ್ಳುವ ಮುಂಚೆ ಬಹಳ ನೋವು ಅವಮಾನಗಳನ್ನು ಅನುಭವಿಸಿದ್ದರು.

 

 

ಲಿಂಗ ಪರಿವರ್ತನೆಯ ಬಳಿಕ ಅಂಜಲಿ ತನ್ನ ಕನಸಿನಂತೆ ಮಾಡೆಲಿಂಗ್ ನಲ್ಲಿ ಹೆಸರು ಮಾಡಿದ್ದರು. ಅಂಜಲಿ ಹಲವಾರು ಮ್ಯಾಗಝೀನ್‍ಗೆ ಫೋಟೋ ಶೂಟ್ ಕೂಡಾ ಮಾಡಿದ್ದಾರೆ. ಇದನ್ನು ನೋಡಿದ ನಟ ಮಮ್ಮುಟ್ಟಿ ಅವರೇ ಚಿತ್ರದ ನಿರ್ದೇಶಕ ರಾಮ್ ಅವರಿಗೆ ಅಂಜಲಿ ಅಮೀರ್ ಅವರನ್ನು ಪರಿಚಯಿಸಿ “ಪೆರ್ನಬು” ಚಿತ್ರದಲ್ಲಿ ಪ್ರಮುಖ ಪಾತ್ರದ ಅವಕಾಶ ಒದಗಿಸಿದ್ದಾರೆ.

 

 

ನಾನು ಲಿಂಗ ಪರಿವರ್ತನೆ ಹೊಂದಿದ ಆರಂಭದಲ್ಲಿ ಆ ಬಗ್ಗೆ ನನ್ನ ಮನೆಯಲ್ಲಿ ಅದನ್ನು ಒಪ್ಪಲಿಲ್ಲ. ಹಾಗಾಗಿ ಮನೆಯನ್ನೇ ಬಿಟ್ಟು ಹೊರಬಂದೆ. ಆ ನಂತರ ಕೊಯಮತ್ತೂರ್ ಹಾಗೂ ಬೆಂಗಳೂರಿನಲ್ಲಿರುವ ಹಿಜ್ರಾಗಳ ಜೊತೆಯಲ್ಲಿ ಕೆಲವು ವರ್ಷಗಳನ್ನು ಕಳೆದೆ. ಆ ದಿನಗಳು ನನ್ನ ಜೀವನದ ಅತ್ಯಂತ ಕಷ್ಟದ ದಿನಗಳಾಗಿದ್ದವು,, ಆದರೆ ಈಗ ನಮ್ಮ ಮನೆ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ಎಲ್ಲರು ನನ್ನಬ್ಬು ಪ್ರೋತ್ಸಾಹಿಸುತ್ತಿದ್ದಾರೆ. ಮಮ್ಮುಟ್ಟಿ ಸರ್ ಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ’ ಎಂದು ಅಂಜಲಿ ಹೇಳಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top