fbpx
ಮನೋರಂಜನೆ

ದಸರಾ ಉತ್ಸವಕ್ಕೆ ಮೆರುಗು ತರಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಟಗರು ಚಿತ್ರತಂಡ.

ದಸರಾ ಉತ್ಸವಕ್ಕೆ ಮೆರುಗು ತರಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಟಗರು ಚಿತ್ರತಂಡ.

 

 

 

ಎಲ್ಲೆಲ್ಲೂ ನಾಡ ಹಬ್ಬ ದಸರಾ ಸಂಭ್ರಮ.. ದಸರಾ ಉತ್ಸವಕ್ಕೆ ಮೆರಗು ತರಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಟಗರು ಚಿತ್ರತಂಡ.. ದಸರಾ ಸಂಭ್ರಮವನ್ನು ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ಜೆ.ಸಿ ನಗರದ ದಸರಾ ಸಮಿತಿ.. ಈ ಭಾರಿ ಉತ್ಸವಕ್ಕೆ ತಾರಾ ರಂಗನ್ನು ತರಲಿದೆ..

 

 

 

ಜೆಸಿ ನಗರ ಮೈದಾನದಲ್ಲಿ ನಡೆಯಲಿರೋ 104ನೇ ವರ್ಷದ ದಸರಾ ಉತ್ಸವಕ್ಕೆ ಬುಧವಾರದಂದು ಸಂಜೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಈ ಸಂದರ್ಭಸಲ್ಲಿ ಇಡೀ ಟಗರು ಚಿತ್ರತಂಡವೂ ಹಾಜರಿರಲಿದೆ. ಇದೇ ಸಂದರ್ಭದಲ್ಲಿ ಶಿವಣ್ಣನಿಗಾಗಿ ವಿಶೇಷ ಕಾರ್ಯಕ್ರಮ ಮತ್ತು ಅದೇ ವೇದಿಕೆಯಲ್ಲಿ ಟಗರು ಚಿತ್ರದ ಟೀಸರ್ ಬಿಡುಗಡೆ ಮಾಡಲೂ ಸಹ ದಸರಾ ಸಮಿತಿ ಆಯೋಜಕರು ನಿರ್ಧರಿಸಿದ್ದಾರೆ.

 

 

 

ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಸಮಾಜ ಸೇವಕಿಯಾಗಿ ಅಪಾರ ಹೆಸರು ಸಂಪಾದಿಸಿರುವ ಸುನೀತಾ ಮಂಜುನಾಥ್ ಈ ಬಾರಿ ಜೆ.ಸಿ. ನಗರ ದಸರಾ ಮಹೋತ್ಸವ ಮತ್ತಷ್ಟು ರಂಗೇರಲು ಕಾರಣರಾಗಿದ್ದಾರೆ. ಸುನೀತಾ ಮಂಜುನಾಥ್ ಅವರಿಗೆ ಬಿ.ಇ. ಎಂಟೆಕ್ ಮುಗಿಸಿದ ನಂತರ ರೇಲ್ವೇ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಕೆಲಸ ಅರಸಿಬಂದಿತ್ತು. ಆದರೆ ಸರ್ಕಾರಿ ಕೆಲಸ ಪಡೆಯೋದಕ್ಕಿಂತಾ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಾಗರೀಕರ ಸಂಕಷ್ಟಗಳಿಗೆ ಮಿಡಿಯಬೇಕು ಅನ್ನೋದು ಸುನೀತಾ ಅವರ ಹೆಬ್ಬಯಕೆಯಾಗಿತ್ತು.

 

 

 

 

ಸುನೀತಾ ಮಂಜುನಾಥ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೇ ಅವರದ್ದೇ ಆದ ಶಿಕ್ಷಣ ಸಂಸ್ಥೆಗಳನ್ನೂ ಹೊಂದಿದ್ದಾರೆ. ಚನ್ನಕೇಶವ ಸಮೂಹ ಶಿಕ್ಷಣ ಸಂಸ್ಥೆಗೆ ಸೇರಿದ ಸಂಜಯನಗರದ ರಾಧಾಕೃಷ್ಣ ಆಂಗ್ಲ ಶಾಲೆ, ಕೆಂಗೇರಿ ಉಪನಗರದ ರಾಧಾಕೃಷ್ಣ ಸ್ಕೂಲ್ ಆಫ್ ಎಜುಕೇಶನ್ ಮತ್ತು ಏಡೆಡ್ ಸಂಸ್ಥೆಗಳಾದ ಮಾನಸ ಕನ್ನಡ ಪ್ರೌಢಶಾಲೆ ಮತ್ತು ಕಮಲಾ ಪ್ರೌಢಶಾಲೆ ಸುನೀತಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಶಿವಣ್ಣ ಕನ್ನಡತನದ ಪ್ರತೀಕದಂತಿರುವವರು. ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರೋ ಶಿವಣ್ಣ ನಾಡಹಬ್ಬದ ಭಾಗವಾಗಲು ಅರ್ಹರೆಂಬ ಕಾರಣದಿಂದ, ಆ ಅಭಿಮಾನದಿಂದ ಅವರನ್ನು ದಸರಾ ಸಮಿತಿಯ ಮಹೋತ್ಸವಕ್ಕೆ ಆಹ್ವಾನಿಸಬೇಕು ಎನ್ನುವುದು ಸುನೀತಾ ಮಂಜುನಾಥ್ ಅವರ ಬಯಕೆಯಾಗಿತ್ತು. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಸಹಕಾರದಿಂದ `ಟಗರು’ ತಂಡ ದಸರಾ ಉತ್ಸವದಲ್ಲಿ ಭಾಗವಹಿಸಲು ಖುಷಿಯಿಂದ ಒಪ್ಪಿಕೊಂಡಿದೆ.

ಹತ್ತಾರು ಸಾವಿರ ಮಂದಿ ಕೂತು ಸಮಾರಂಭವನ್ನು ವೀಕ್ಷಿಸುವ ಸುಸಜ್ಜಿತ ವ್ಯವಸ್ಥೆಯಲ್ಲಿ `ಟಗರು’ ಚಿತ್ರತಂಡ ಸೆಪ್ಟೆಂಬರ್ ೨೭ರ ಬುಧವಾರ ಸಂಜೆ ೭ಕ್ಕೆ ಪ್ರತ್ಯಕ್ಷವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top