fbpx
ಸಮಾಚಾರ

ಮಹಿಳೆಯ ಒಳ ಉಡುಪಿನೊಂದಿಗೆ ಭಾರತ ನಕ್ಷೆ ಹೋಲಿಸಿ ಟ್ವೀಟ್ ಮಾಡಿದ ಪತ್ರಕರ್ತ..! ಭುಗಿಲೆದ್ದ ಆಕ್ರೋಶ.

ಮಹಿಳೆಯ ಒಳ ಉಡುಪಿನೊಂದಿಗೆ ಭಾರತ ನಕ್ಷೆ ಹೋಲಿಸಿ ಟ್ವೀಟ್ ಮಾಡಿದ ಪತ್ರಕರ್ತ..! ಭುಗಿಲೆದ್ದ ಆಕ್ರೋಶ.

 

 

ಭಾರತೀಯ ಭೂಪಟದ ಜೊತೆಗೆ ಮಹಿಳೆಯ ಒಳ ಉಡುಪನ್ನು ಹೋಲಿಕೆ ಮಾಡುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವುದು ಈಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. ಆಸ್ಟ್ರೇಲಿಯಾದ ಹೆಸರಾಂತ ಕ್ರಿಕೆಟ್ ಪತ್ರಕರ್ತನೊಬ್ಬನು ಈ ರೀತಿ ಮಾಡಿದ್ದು ಟ್ವಿಟ್ಟರ್ ನಲ್ಲಿ ಈತನ ವಿರುದ್ಧ ಭಾರತೀಯರು ಭಾರಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

 

 

ಡೆನಿಸ್ ಫ್ರೀಡ್‌ಮ್ಯಾನ್ ಎಂಬ ಆಸ್ಟ್ರೇಲಿಯಾದ ಕ್ರಿಕೆಟ್ ಪತ್ರಕರ್ತನು ತನ್ನ ಟ್ವಿಟ್ಟರ್ ಖಾತೆಯಲ್ಲಿ ” ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಇದನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಭಾರತದ ನಕ್ಷೆಯ ಜೊತೆಗೆ ಇವಳು ಯಾಕೆ ಇದನ್ನು ಹಾಕಿದ್ದಾಳೆಂದು ಗೊತ್ತಾಗ್ತಿಲ್ಲ” ಎಂದು ಆ ಫೋಟೋ ಸಮೇತ ಪೋಸ್ಟ್ ಮಾಡಿ ಭಾರತತೀಯರನ್ನು ಗೇಲಿ ಮಾಡಿದ್ದಾರೆ..ಈತ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ಭಾರತೀಯ ಕ್ರೀಡಾಭಿಮಾನಿಗಳು ಅವನ ವಿರುದ್ಧ ರೊಚ್ಚಿಗೆದ್ದು ಆಸ್ಟ್ರೇಲಿಯಾ ನಕ್ಷೆಯನ್ನು ವಿವಿಧ ವಸ್ತುಗಳಿಗೆ ಹೋಲಿಸಿದ ಚಿತ್ರಗಳನ್ನು ಅವನಿಗೆ ಟ್ವಿಟರ್ ಮೂಲಕ ಕಳುಹಿಸುತ್ತಿದ್ದಾರೆ.

 

 

ಆಸ್ಟ್ರೇಲಿಯಾ ತಂಡವು ಭಾರತ ಕ್ರಿಕೆಟ್ ತಂಡದ ವಿರುದ್ಧ ಸತತ ಸೋಲಿನಿಂದ ಸುಣ್ಣವಾಗಿದ್ದು ಇದನ್ನು ಸಹಿಸಿಕೊಳ್ಳಲಾಗದೆ ಈ ಮಹಾನುಭಾವ ಈ ರೀತಿ ಒಂದು ರಾಷ್ಟ್ರದ ಗೌರವವನ್ನು ಅವಮಾನ ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಅವರ ಹತಾಶ ಮನೋಭಾವವನ್ನು ತೋರಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top