fbpx
ಮನೋರಂಜನೆ

‘ತಾರಕ್’ ಚಿತ್ರದಲ್ಲಿ ತಾತನ ಪಾತ್ರ ಮಾಡಲು ದೇವರಾಜ್ ಹಾಕಿದ್ದ ಕಂಡೀಷನ್ ಏನು ಗೊತ್ತಾ?

‘ತಾರಕ್’ ಚಿತ್ರದಲ್ಲಿ ತಾತನ ಪಾತ್ರ ಮಾಡಲು ದೇವರಾಜ್ ಹಾಕಿದ್ದ ಕಂಡೀಷನ್ ಏನು ಗೊತ್ತಾ?

 

 

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಮಿಲನ ಪ್ರಕಾಶ್ ನಿರ್ದೇಶನದ ಬಹುನಿರೀಕ್ಷಿತ ‘ತಾರಕ್’ ಚಿತ್ರ ದಸರಾ ಹಬ್ಬದ ಪ್ರಯುಕ್ತ ಈ ವಾರ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಟ್ರೈಲರ್ ಟೀಸರ್ ಗಳು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.

 

 

ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಅವರು ‘ತಾರಕ್’ ಚಿತ್ರದಲ್ಲಿ ತಾತನ ಪಾತ್ರ ಮಾಡಲು ಒಂದು ಷರತ್ತನ್ನು ವಿಧಿಸಿದ್ದರಂತೆ. ಆ ಕಂಡೀಷನ್ ಏನು? ಮುಂದೆ ಓದಿ.

 

 

“ಈ ಚಿತ್ರದ ತಾತನ ಪಾತ್ರದಲ್ಲಿ ತಾನು ಹೇಗೆ ಕಾಣುತ್ತೇನೆ ಎನ್ನುವುದನ್ನ ಮೇಕಪ್ ಸಮೇತ ಟೆಸ್ಟ್ ಮಾಡಬೇಕು. ಅದನ್ನು ನೋಡಿ ಅದು ನನಗೆ ಇಷ್ಟವಾದರೆ ಮಾತ್ರ ನಾನು ಪಾತ್ರ ಮಾಡುತ್ತೇನೆ ” ಎಂದು ಹೇಳಿದ್ದರಂತೆ. ನಂತರ ದೇವರಾಜ್ ಅವರಿಗೆ ತಾತನ ಗೆಟಪ್ ಹಾಕಿ ತೋರಿಸಿದ ನಂತರವೇ ತಾತನ ಪಾತ್ರ ಮಾಡಲು ಒಪ್ಪಿಕೊಂಡರಂತೆ.

 

 

ಅಂದಹಾಗೆ ತಾರಕ್ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top