fbpx
ಮನೋರಂಜನೆ

ಪಾಕೆಟ್ ಮನಿ ಸಿಗುತ್ತೆ ಅಂತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ನಟಿಯ ಈಗಿನ ಸಂಭಾವನೆ 2.5 ಕೋಟಿ.

ಪಾಕೆಟ್ ಮನಿ ಸಿಗುತ್ತೆ ಅಂತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ನಟಿಯ ಈಗಿನ ಸಂಭಾವನೆ 2.5 ಕೋಟಿ.

 

 

ಚಿತ್ರರಂಗದಲ್ಲಿ ಅದೃಷ್ಟವಿದ್ದರೆ ಏನೂ ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಈ ನಟಿಯೇ ಉತ್ತಮ ಉದಾಹರಣೆ. ಪಾಕೆಟ್ ಮನಿಗಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ಹುಡುಗಿ ಇವತ್ತು ಸೌತ್ ಸಿನಿ ದುನಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮೆರೆಯುತ್ತಿದ್ದಾಳೆ. ಆ ನಟಿ ಯಾರೆಂದರೆ ಸುಂದರ ಹುಡುಗಿ ‘ರಕುಲ್ ಪ್ರೀತ್ ಸಿಂಗ್’, ಕನ್ನಡದ “ಗಿಲ್ಲಿ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಇವರು ಸದ್ಯ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿಯಾಗಿದ್ದು. ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿ ಸ್ಕ್ರೀನ್ ಹಂಚಿಕೊಂಡಿದ್ದಾರೆ.

 

 

 

ಸದ್ಯ ಈ ವಾರ ಬಿಡುಗಡೆಯಾಗಿರುವ ಇವರ ‘ಸ್ಪೈಡರ್’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ್ದರು, ಆಗ ಕನ್ನಡ ಚಿತ್ರರಂಗದ ಕುರಿತು ಮತ್ತು ತಮ್ಮ ಸಿನಿ ಬದುಕಿನ ಕುರಿತು ಅನೇಕ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಘವ ಲೋಕಿ ನಿರ್ದೇಶನ ಮಾಡಿದ್ದ ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ‘ಗಿಲ್ಲಿ’ ಚಿತ್ರದ ಮೂಲಕ ರಕುಲ್ ಪ್ರೀತ್ ಸಿಂಗ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ 2009 ರಲ್ಲಿ ತೆರೆಕಂಡು ಒಳ್ಳೆಯ ಹೆಸರು ತಂದುಕೊಟ್ಟಿತ್ತು.

 

 

‘ನನಗೆ ‘ಆಗ 17 ವರ್ಷ ವಯಸ್ಸಾಗಿತ್ತು. ಚಿತ್ರದಲ್ಲಿ ನಟಿಸಿದರೆ ಸ್ವಲ್ಪ ದುಡ್ಡು ಸಿಗುತ್ತದೆ ಎಂದು ಮೊದಲ ಒಪ್ಪಿಕೊಂಡಿದ್ದೆ. ಪಾಕೆಟ್ ಮನಿ ಸಿಗುತ್ತೆ ಅಂತ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಆದರೆ ಈಗ ಇದೇ ನನ್ನ ಜಗತ್ತು, ಜೀವನ ಮತ್ತು ನಾನು ಇಲ್ಲಿನವಳೇ ಎನ್ನುವುದು ನನಗೆ ತಿಳಿದಿದೆ” ಎಂದು ರಕುಲ್ ಹಳೇ ದಿನಗಳನ್ನು ನೆನಪಿಸಿಕೊಂಡರು.

 

 

”ಕನ್ನಡ ಚಿತ್ರದಿಂದ ನಾನು ಸಿನಿಮಾ ರಂಗಕ್ಕೆ ಕಾಲಿತೆ ಎನ್ನುವುದನ್ನು ನಾನು ಮರೆಯಲಾರೆ. ‘ಗಿಲ್ಲಿ’ ನನ್ನ ಮೊದಲ ಚಿತ್ರ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಮಾಡೆಲಿಂಗ್ ಮಾಡುತ್ತಿದ್ದೆ ಆಗ ನನಗೆ ಈ ಚಿತ್ರದ ಆಫರ್ ಬಂದಿತ್ತು” ಎಂದು ಇದೆ ಸಂದರ್ಭದಲ್ಲಿ ರಾಕುಲ್ ಹೇಳಿದರು.

 

 

ಒಂದು ಕಾಲದಲ್ಲಿ ಪಾಕೆಟ್ ಮನಿ ಸಿಗುತ್ತೆ ಅನ್ನೋ ಕಾರಣಕ್ಕೆ ಚಿತ್ರದಲ್ಲಿ ನಟಿಸಿದ ರಾಕುಲ್ ಇಂದು ತಾನು ಅಭಿನಯಿಸಲು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಬರೋಬ್ಬರಿ 2.5 ಕೋಟಿ ರೂಪಾಯಿಗಳಷ್ಟಾಗಿದೆ. ಸೌತ್ ಸಿನಿ ಲೋಕದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಈಕೆ ಸದ್ಯ ವೃತ್ತಿ ಬದುಕಿನ ಉತ್ತಂಗದಲ್ಲಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top