fbpx
ಮನೋರಂಜನೆ

ರಕ್ಷಿತಾ ಕೋರಿಕೆಯನ್ನ ಕೊನೆಗೂ ಈಡೇರಿಸಿದ ದಾಸ ದರ್ಶನ್..!

ರಕ್ಷಿತಾ ಕೋರಿಕೆಯನ್ನ ಕೊನೆಗೂ ಈಡೇರಿಸಿದ ದಾಸ ದರ್ಶನ್..!

 

 

ಇತ್ತೀಚಿಗೆ ನಟಿ ರಕ್ಷಿತಾ ರವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಪೋಸ್ಟ್ ಗಳ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು ಒಂದು ಬೇಡಿಕೆಯನ್ನು ಇಟ್ಟಿದ್ದರು. ಈಗ ದರ್ಶನ್ ಅವರು ಆ ಬೇಡಿಕೆಯನ್ನು ಈಡೇರಿಸಿದ್ದಾರೆ. ಯಾವ್ದಪ್ಪ ಆ ಬೇಡಿಕೆ ಅಂತೀರಾ? ಮುಂದೆ ಓದಿ.

 

 

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚನ್ನಪ್ಪ ನಟ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಬೇಕು ಎಂದು ಆಸೆಪಟ್ಟಿದ್ದರು.ಈ ವಿಷಯವನ್ನು ತಿಳಿದ ರಕ್ಷಿತ ಪ್ರೇಮ್ ಚನ್ನಪ್ಪರನ್ನು ಭೇಟಿಮಾಡುವಂತೆ ನಟ ದರ್ಶನ್ ಗೆ ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಕೇಳಿಕೊಂಡಿದ್ದರು.

ನಟಿ ರಕ್ಷಿತಾ ದರ್ಶನ್ ಬಳಿ ಬೇಡಿಕೊಂಡಿದ್ದನ್ನು ಈಡೇರಿಸುತ್ತಾರಾ ದರ್ಶನ್.?

 

 

ಈಗ ರಕ್ಷಿತಾ ಅವ್ರ ಮನವಿಗೆ ಕಿವಿಗೊಟ್ಟಿರುವ ದರ್ಶನ್ ತಮ್ಮ ಅಭಿಮಾನಿ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಚನ್ನಪ್ಪನನ್ನು ಭೇಟಿ ಮಾಡಿದ್ದಾರೆ. ದರ್ಶನ್ ಅವರು ಚನ್ನಪ್ಪನನ್ನು ಭೇಟಿ ಮಾಡಿರುವ ಬಗ್ಗೆ ದರ್ಶನ್ ಅಭಿಮಾನಿಗಳು ಟ್ವಿಟರ್ ನಲ್ಲಿ ಪೋಸ್ಟ್ ಗಳನ್ನು ದರ್ಶನ್ ಮತ್ತು ಚನ್ನಪ್ಪ ಜೊತೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಆ ಫೋಟೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top