fbpx
ಸಮಾಚಾರ

ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕ್ಕೀಡಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್

ದಿಗಂತ್ ಮತ್ತು ಪ್ರಜ್ವಲ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ..ಇಬ್ಬರಿಗೂ ಗಾಯ.

 

 

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಅಪಘಾತಗಳು ಹೆಚ್ಚಾಗಿಬಿಟ್ಟಿವೆ. ಕಿರುತೆರೆಯ ನಟ ನಟಿಯರು ಸೋಲೂರಿನ ಬಳಿ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದರು, ಅಲ್ಲದೆ ಕೋಮಲ್ ಮತ್ತು ಲೂಸ್ ಮಾದ ಯೋಗಿಯವರಿಗೂ ಕೆಂಪೇಗೌಡ-2 ಚಿತ್ರದ ಚಿತ್ರೀಕರಣದ ವೇಳೆ ಅಪಘಾತವಾಗಿ ಗಾಯಗಳಾಗಿದ್ದವು. ಹಾಗೂ ಗೋದ್ರಾ ಚಿತ್ರದ ಚಿತ್ರೀಕರಣದ ವೇಳೆ ನಟ ಸತೀಶ್ ನೀನಾಸಂ ಅವರಿಗೂ ಅಪಘಾತವಾಗಿ ಸಣ್ಣ ಪುಟ್ಟ ಗಾಯಗಳಾಗಿದ್ದವು .ಇದೆಲ್ಲರ ನಡುವೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ರಿಗೂ ಅಪಘಾತವಾಗಿದೆ.

 

 

ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಪ್ರಯಾಣಿಸುತ್ತಿದ್ದ ಐಷಾರಾಮಿ ಬೆಂಝ್ ಮರ್ಸಿಡಿಸ್ ಬೆಂಝ್ ಎಎಂಜಿ ಜಿ ವ್ಯಾಗನ್ ದುಬಾರಿ ಕಾರು ಬೆಂಗಳೂರಿನ ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಅಪಘಾತಕೀಡಾಗಿದ್ದು, ಇಬ್ಬರಿಗೂ ಸಣ್ಣ ಗಾಯಗಳಾಗಿವೆ ಎಂದು ಹೇಳಲಾಗಿದೆ. ಈ ಅಪಘಾತ ನೆಡೆದ ಸಮಯದಲ್ಲಿ ದಿಗಂತ್ ಮತ್ತು ಪ್ರಜ್ವಲ್ ಜೊತೆ ಆದಿಕೇಶವಲು ರವರ ಮೊಮ್ಮಗ ವಿಷ್ಣು ಸಹ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 

 

ಲಾಲ್ ಬಾಗ್ ರೋಡ್ ಕಡೆಯಿಂದ ಬಹಳ ವೇಗವಾಗಿ ಬಂದ ಆ ಕಾರು ಸೌತ್ ಎಂಡ್ ಸರ್ಕಲ್ ಹತ್ತಿರವಿರುವ ಬಿಬಿಎಂಪಿ ನಾಮಫಲಕಕ್ಕೆ ಜೋರಾಗಿ ಗುದ್ದಿದೆ ಎಂಬ ವಿಷಯ ಮೂಲಗಳಿಂದ ತಿಳಿದುಬಂದಿದೆ. ಈ ಅಪಘಾತದಲ್ಲಿ ಒಂದು ಓಮ್ನಿ ಕಾರು ಕೂಡ ಪಲ್ಟಿಯಾಗಿದ್ದು ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನಲಾಗಿದೆ. ಇನ್ನು ಜಯನಗರದ ಸಂಚಾರಿ ಪೊಲೀಸ್ ಠಾಣಾ ಪೋಲಿಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top