fbpx
ಸಮಾಚಾರ

ಆಕ್ಸಿಡೆಂಟ್ ಆದ ಕಾರಲ್ಲಿ ನಾನಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ ಪ್ರಜ್ವಲ್ ದೇವರಾಜ್..!

ಆಕ್ಸಿಡೆಂಟ್ ಆದ ಕಾರಲ್ಲಿ ನಾನಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ ಪ್ರಜ್ವಲ್ ದೇವರಾಜ್..!

 

 

ಇಂದು ಬೆಳಿಗ್ಗೆಯಿಂದ ಕಾಳ್ಗಿಚ್ಚಿನಂತೆ ಸುದ್ದಿಯೊಂದು ಎಲ್ಲಕಡೆ ಹಬ್ಬಿತ್ತು ಅದೇನೆಂದರೆ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಡ್ರಗ್ಸ್ ಸೇವಿಸಿ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಓರ್ವ ಬಾಲಕ ಗಂಭೀರ ಗಾಯಗೊಂಡಿದ್ದಾನೆ ಎಂದು ಸುದ್ದಿ ಹಬ್ಬಿತ್ತು.

 

 

 

ಆದರೆ ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ಸ್ವತಃ ನಟ ಪ್ರಜ್ವಲ್ ದೇವರಾಜ್ ಅವರೇ ಸ್ಪಷ್ಟಿಕರಣ ನೀಡಿದ್ದು ಆಕ್ಸಿಡೆಂಟ್ ಆದ ಕಾರಲ್ಲಿ ನಾನಿರಲಿಲ್ಲ ಎಂದು ಹೇಳಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರಜ್ವಲ್ ದೇವರಾಜ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಲ್ಲಿ ಲೈವ್ ವಿಡಿಯೋ ಮಾಡುವುದರ ಮೂಲಕ ನಾವು ಯಾವ ಅಪಘಾತವನ್ನು ಮಾಡಿಲ್ಲ,, ಸದ್ಯ ನಾವು ಗೋವಾದಲ್ಲಿ ಶೂಟಿಂಗ್ ಮಾಡ್ತೀದ್ದೀವಿ ಇದಕ್ಕೂ ನಮಗೂ ಯಾವುದೇ ಸಂಭಂದವಿಲ್ಲ ಎಂದು ಹೇಳಿಕೊಂಡಿದ್ದಾರೆ.ನಟ ದಿಗಂತ್ ಅವರೂ ಕೂಡ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಕರೆ ಮಾಡಿ ನಮಗೂ ಇದಕ್ಕೂ ಯಾವುದೇ ಸಂಭಂದವಿಲ್ಲ ಎಂದು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿರುವ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top