fbpx
ಮಾಹಿತಿ

ಕೇವಲ ಮಾತಲ್ಲಿ ಅಭಿವೃದ್ಧಿ ಅಂತ ಬೊಗಳೆ ಬಿಡೋ ಜನಪ್ರತಿನಿಧಿಗಳು ಕಲಾಪಕ್ಕೂ ಹಾಕಿದ್ದಾರೆ ಚಕ್ಕರ್.. ಕಲಾಪಕ್ಕೆ ಅತಿಹೆಚ್ಚು ಚಕ್ಕರ್ ಹೊಡೆದವವರು ಯಾರು ಗೊತ್ತಾ? ಲಿಸ್ಟ್ ಇಲ್ಲಿದೆ ನೋಡಿ

ಕೇವಲ ಮಾತಲ್ಲಿ ಅಭಿವೃದ್ಧಿ ಅಂತ ಬೊಗಳೆ ಬಿಡೋ ಜನಪ್ರತಿನಿಧಿಗಳು ಕಲಾಪಕ್ಕೂ ಹಾಕಿದ್ದಾರೆ ಚಕ್ಕರ್.. ಕಲಾಪಕ್ಕೆ ಅತಿಹೆಚ್ಚು ಚಕ್ಕರ್ ಹೊಡೆದವವರು ಯಾರು ಗೊತ್ತಾ? ಲಿಸ್ಟ್ ಇಲ್ಲಿದೆ ನೋಡಿ  

 

 

ಚುನಾವಣೆ ಬಂತು ಅಂದ್ರೆ ಜರ ಬಳಿ ಅಂದು ಅಭಿವೃದ್ಧಿ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕೆಲವು ಜನಪ್ರತಿಗಳು ಚುನಾವಣೆ ಮುಗಿದ ಮೇಲೆ ತಮ್ಮ ಜನ ಮತ್ತು ತಮ್ಮ ಕ್ಷೇತ್ರವನ್ನು ಮರೆತೇ ಬಿಡ್ತಾರೆ. ಇನ್ನು ಕ್ಷೇತ್ರದ ಅಭಿವೃದ್ಧಿಯ ವಿಚಾರವನ್ನು ಯಾರೂ ಕೇಳೋಹಾಗಿಲ್ಲ. ಅಭಿವೃದ್ಧಿಯ ವಿಚಾರ ಇರಲಿ ಹೋಗ್ಲಿ ಕಲಾಪಕ್ಕಾದರೂ ಹೋಗಿ ತಮ್ಮ ಕ್ಷೇತ್ರದ ಜನರ ಸಮಸ್ಯೆ ಬಗ್ಗೆ , ಅಭಿವೃದ್ಧಿಯ ಚರ್ಚಿಸ್ತಾರಾ. ಅದೂ ಇಲ್ಲ..,

 

 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳೇ ಕಳೆದರೂ ಈಗಲೂ ಎಷ್ಟೋ ಜನಪ್ರತಿನಿಧಿಗಳು ಕಲಾಪಕ್ಕೆ ಅತಿ ಹೆಚ್ಚು ಚಕ್ಕರ್ ಹಾಕಿದ್ದಾರೆ. 2013ರಿಂದ 2017 ಜೂನವರೆಗೆ ಒಟ್ಟು 218 ದಿನ ನಡೆದಿರುವ ಕಲಾಪಕ್ಕೆ ಯಾರ್ಯಾರು ಅತಿ ಕಡಿಮೆ ದಿನ ಕಲಾಪಕ್ಕೆ ಹಾಜರಾಗಿದ್ದಾರೆ ಎಂಬ ಪಟ್ಟಿ ಇಲ್ಲಿದೆ ನೋಡಿ.

 

 

ಕಲಾಪಕ್ಕೆ ಅತಿ ಕಡಿಮೆ ದಿನ ಹಾಜರಾದವರು:

1. ಅಂಬರೀಶ್ – 04 ದಿನ ಮಾತ್ರ ಹಾಜರು.

2. ಸಂತೋಷ್ ಲಾಡ್ – 05 ದಿನ ಹಾಜರು.

3. ಸಂಭಾಜೀ ಪಾಟೀಲ್ – 62 ದಿನ ಹಾಜರು.

4. ಗಣೇಶ ಹುಕ್ಕೇರಿ – 63 ದಿನ ಹಾಜರು.

5. ಇಕ್ಬಾಲ್ ಅನ್ಸಾರಿ – 71 ದಿನ ಹಾಜರು

6. ಆನಂದ ಸಿಂಗ್ – 82 ದಿನ ಹಾಜರು.

7. ಎಸ್. ರಘು – 85 ದಿನ ಹಾಜರು.

8. ಸುರೇಶ ಬಾಬು – 88 ದಿನ ಹಾಜರು.

 

 

ಕೇವಲ ಇವರಷ್ಟೇ ಅಲ್ಲ, ಕಲಾಪಕ್ಕೆ ಚಕ್ಕರ್ ಹೊಡೆದವರ ದೊಡ್ಡ ಪಟ್ಟಿಯೇ ಇದೆ. ಕಳಪೆ ನಡೆಯುದೇ ತಮ್ಮ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸೋಕೆ ಆದರೆ ಕಲಾಪಕ್ಕೆ ಚಕ್ಕರ್ ಹೊಡೆಯುವ ಈ ಜನಪ್ರತಿನಿಧಿಗಳು ಮತ್ತ್ಯಾವ ಪುರುಷಾರ್ಥಕ್ಕೆ ಚುನಾವಣೆಯಲ್ಲಿ ಗೆದ್ದಿದ್ದಾರೆ ಎನ್ನುವುದೇ ಜನಸಾಮಾನ್ಯರ ಪ್ರಶ್ನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Nk says:

Bere noukararu chakkara hodadre sambala cut…. evargenu madbeku… rajya aaloru evaru

To Top