fbpx
ಸಮಾಚಾರ

“ಮೋದಿ ನನ್ನನ್ನು ಮದ್ವೆ ಮಾಡ್ಕೊಳಿ” ಎಂದು ಒಂದು ತಿಂಗಳಿಂದ ಧರಣಿ ಕುಳಿತಿರುವ ಮಹಿಳೆ..!

“ಮೋದಿ ನನ್ನನ್ನು ಮದ್ವೆ ಮಾಡ್ಕೊಳಿ” ಎಂದು ಒಂದು ತಿಂಗಳಿಂದ ಧರಣಿ ಕುಳಿತಿರುವ ಮಹಿಳೆ..!

 

 

ಪ್ರಧಾನಿ ನರೇಂದ್ರ ಮೋದಿಯನ್ನ ಮದುವೆಯಾಗಬೇಕು ಎಂದು ಜೈಪುರದ 40 ವರ್ಷದ ಮಹಿಳೆಯೊಬ್ಬರು ದೆಹಲಿಯ ಜಂತರ್ ಮಂತರ್ ಹತ್ತಿರ ಕಳೆದ 1 ತಿಂಗಳಿನಿಂದ ಧರಣಿ ಕುಳಿತಿರುವ ವಿಲಕ್ಷಣ ಸಂಗತಿಯೊಂದು ಬೆಳಕಿಗೆ ಬಂದಿದೆ. ‘ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದು ನನ್ನನ್ನು ಭೇಟಿಯಾಗುವ ತನಕ ನಾನು ಇಲ್ಲಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದು ಕುಳಿದ್ದಾಳೆ ಆ ಮಹಿಳೆ.

 

 

ರಾಜಸ್ಥಾನದ ಜೈಪುರ ಮೂಲದವರಾದ ಓಂ ಶಾಂತಿ ಶರ್ಮಾ ಎಂಬ ಮಹಿಳೆ ಕಳೆದ ಸೆಪ್ಟೆಂಬರ್ 08 ನೇ ತಾರೀಕಿನಿಂದ ಅಲ್ಲಿ ಧರಣಿ ಕುಳಿತಿದ್ದಾರೆ.”ನನ್ನ ಮಾನಸಿಕ ಸ್ಥಿತಿ ಚನ್ನಾಗಿಯೇ ಇದೆ ನನಗೆ ಈ ಹಿಂದೆ ಮದುವೆಯಾಗಿದ್ದು ಆದರೆ ನಮ್ಮ ಸಂಸಾರ ಹಾಳಾಗಿ ಈಗ ನಾನು ಒಂಟಿಯಾಗಿದ್ದೇನೆ. ನನ್ನ ಹಾಗೆ ಮೋದಿ ಕೂಡ ಒಂಟಿಯಾಗಿದ್ದಾರೆ ಹಾಗಾಗಿ ಅವರು ನನ್ನನ್ನು ಮದುವೆ ಮಾಡಿಕೊಳ್ಳಲಿ’ ಎಂದು ಹೇಳುತ್ತಿದ್ದಾಳೆ..

 

 

ಈ ವಿಷಯ ತಿಳ್ಕೊಂಡ್ರೆ ಜನ ನಗುತ್ತಾರೆ ಅಂತ ನನಗೆ ಗೊತ್ತಿದೆ. ಆದರೆ ನಾನು ಮೋದಿ ಅವರ ಮೇಲೆ ಮೋಹವಿದೆ ಎಂಬ ಕಾರಣಕ್ಕೆ ಅವರನ್ನು ಮದುವೆ ಆಗಲು ಬಯಸುತ್ತಿಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ದೊಡ್ಡವರಿಗೆ ಗೌರವ ನೀಡಿಕೊಂಡು ಬಂದವಳು. ನಾನು ಮೋದಿಯವರಿಗೆ ಅವರ ಕೆಲಸದಲ್ಲಿ ಸಹಾಯ ಮಾಡಬೇಕು ಹಾಗಾಗಿ ನನ್ನನ್ನು ಮದುವೆ ಮಾಡಿಕೊಳ್ಳಿ ಅಂತ ಅವರಲ್ಲಿ ಬೇಡಿಕೊಳ್ಳುತ್ತಿದ್ದೇನೆ’ ಎಂದು ಶಾಂತಿ ಶರ್ಮ ಹೇಳಿದ್ದಾರೆ.

 

 

ಅಷ್ಟಕ್ಕೂ ಧರಣಿಗೆ ಕುಳಿತಿರುವ ಈ ಮಹಿಳೆ ಬಡವೆಯೇನಲ್ಲಾ ಇವಳು ಕೈತುಂಬಾ ಹಣ ಆಸ್ತಿ ಇರುವ ಶ್ರೀಮಂತ ಮಹಿಳೆ ಈಕೆಗೆ ಇಪ್ಪತ್ತು ವರ್ಷದ ಮಗಳು ಕೂಡ ಇದ್ದಾಳೆ. ಗುರುದ್ವಾರಗಳಲ್ಲಿ ಊಟ ಸೇವಿಸಿ, ಸಾರ್ವಜನಿಕ ಶೌಚಾಲಯಗಳನ್ನು ಬಳಸಿಕೊಂಡು ಧರಣಿ ನಡೆಸುತ್ತಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top