fbpx
ಮನೋರಂಜನೆ

ಪೊಗರು ಚಿತ್ರದಲ್ಲಿ ‘ಧೃವ ಸರ್ಜಾ’ ಜೊತೆ ನಟಿಸುವ ಬಗ್ಗೆ ‘ಶ್ರುತಿಹಾಸನ್’ ಅಧಿಕೃತವಾಗಿ ಟ್ವಿಟರ್ ನಲ್ಲಿ ಹೇಳಿದ್ದೇನು?

ಪೊಗರು ಚಿತ್ರದಲ್ಲಿ ‘ಧೃವ ಸರ್ಜಾ’ ಜೊತೆ ನಟಿಸುವ ಬಗ್ಗೆ ‘ಶ್ರುತಿಹಾಸನ್’ ಅಧಿಕೃತವಾಗಿ ಟ್ವಿಟರ್ ನಲ್ಲಿ ಹೇಳಿದ್ದೇನು?

 

 

ಕಳೆದ ಎರಡು ಮೂರು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು ಅದೇನಪ್ಪ ಅಂದ್ರೆ ನಟ ಕಮಲ್‌ ಹಾಸನ್‌ ಅವರ ಹಿರಿಯ ಪುತ್ರಿ ಮತ್ತು ಪ್ರಖ್ಯಾತ ನಟಿ ಶ್ರುತಿ ಹಾಸನ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು. ಈ ಬಗ್ಗೆ ಸ್ವತಃ ಶ್ರುತಿಹಾಸನ್ ಅವರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು? ಮುಂದೆ ಓದಿ

 

 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಚಿತ್ರದ ನಂತರ ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿರುವ “ಪೊಗರು” ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ರವರಿಗೆ ನಾಯಕಿಯಾಗಿ ಸೌತ್ ಇಂಡಿಯಾದ ಟಾಪ್ ಹೀರೋಯಿನ್ ಆದ ಶ್ರುತಿಹಾಸನ್ ನಟಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ಅವರೇ ಟ್ವಿಟ್ಟರ್ ಮೂಲಕ ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.

 

 

“ಸದ್ಯಕ್ಕೆ ನಾನು ಯಾವುದೇ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ ಅಲ್ಲದೆ ಈ ಬಗ್ಗೆ ಯಾರೊಬ್ಬರ ಜೊತೆಯೂ ಕೂಡ ಮಾತುಕತೆ ನಡೆಸಿಲ್ಲ ಇವೆಲ್ಲ ಕೇವಲ ವದಂತಿಗಳು” ಎಂದು ಶ್ರುತಿ ಹಾಸನ್ ಟ್ವೀಟ್ ಮಾಡುವ ಮೂಲಕ ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.. ಹಾಗಾಗಿ ಧ್ರುವ ಸರ್ಜಾ ಮತ್ತು ಶ್ರುತಿಹಾಸನ್ ಒಟ್ಟಾಗಿ ತೆರೆ ಮೇಲೆ ನೋಡುವ ಆಸೆಯನ್ನು ಇಟ್ಟುಕೊಂಡಿದ್ದ ಕನ್ನಡ ಚಿತ್ರ ಪ್ರೇಮಿಗಳಿಗೆ ನಿರಾಸೆಯಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top