fbpx
ಮನೋರಂಜನೆ

ಫಿಕ್ಸ್ ಆಯ್ತು ಚಿರು-ಮೇಘನಾ ಮದುವೆ ಡೇಟ್..! ಅಕ್ಟೋಬರ್ 22 ಕ್ಕೆ ಎಂಗೇಜ್’ಮೆಂಟ್.

ಫಿಕ್ಸ್ ಆಯ್ತು ಚಿರು-ಮೇಘನಾ ಮದುವೆ ಡೇಟ್..! ಅಕ್ಟೋಬರ್ 22 ಕ್ಕೆ ಎಂಗೇಜ್’ಮೆಂಟ್.

 

 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ರವರು ಮದುವೆ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದೆ. ಖಾಸಗಿ ಸಮಾರಂಭಗಳಲ್ಲಿ ಈ ಇಬ್ಬರು ಒಟ್ಟೊಟ್ಟಾಗಿ ಭಾಗವಹಿಸಿದ್ದರಿಂದ ಇವರಿಬ್ಬರ ಮಧ್ಯೆ ಪ್ರೀತಿ ಆಗಿದ್ದು ಈಗ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಕ್ಷಿತ್ ರಶ್ಮಿಕಾ ಬಳಿಕ ಮತ್ತೊಂದು ತಾರಾ ಜೋಡಿ ಹಸೆಮಣೆಯೇರಲು ಸಜ್ಜಾಗಿದ್ದಾರೆ.

 

 

ಈ ದೀಪಾವಳಿ ಹಬ್ಬಕ್ಕೆ ಚಿರು-ಮೇಘನಾ ರಾಜ್ ಜೋಡಿ ಸಿಹಿ ಸುದ್ದಿಯನ್ನು ನೀಡಲಿದ್ದು ಇದೇ ತಿಂಗಳು ಅಂದರೆ ಅಕ್ಟೊಬರ್ 22 ರಂದು ಚಿರು ಮತ್ತು ಮೇಘನಾ ರಾಜ್ ರವರ ನಿಶ್ಚಿತಾರ್ಥ ಬೆಂಗಳೂರಿನ ಅವರ ಮನೆಯಲ್ಲಿ ಸಾಂಪ್ರದಾಯಕವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದ ಚಿರು-ಮೇಘನಾ ರಾಜ್ ಮದುವೆ ಗಾಸಿಪ್ ಗೆ ಸದ್ಯ ತೆರೆಬಿದ್ದಿದೆ.

 

 

ಅಕ್ಟೊಬರ್ 22 ರಂದು ನಿಶ್ಚಿತಾರ್ಥ ಮಾಡಿಕೊಂಡು ಡಿಸೇಂಬರ್ ಎರಡನೇ ವಾರದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್. ಆದರೆ ಈ ಬಗ್ಗೆ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಧೃಡೀಕರಿಸದಿದ್ದರೂ ಇವರ ಮದುವೆ ನಡೆಯುವುದು ಖಚಿತ ಎಂದು ಕನ್ನಡದ ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top