fbpx
ಮನೋರಂಜನೆ

“ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಹೆಮ್ಮೆಯಿಂದ ಕನ್ನಡಕ್ಕೆ ಬರುತ್ತೇನೆ” -ಶ್ರುತಿ ಹಾಸನ್…

“ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಹೆಮ್ಮೆಯಿಂದ ಕನ್ನಡಕ್ಕೆ ಬರುತ್ತೇನೆ” -ಶ್ರುತಿ ಹಾಸನ್…

 

 

ನಟಿ ಶ್ರುತಿ ಹಾಸನ್ ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲವಂತೆ ಅವರು ಕನ್ನಡ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಕಳೆದ ಎರಡು ಮೂರು ದಿನಗಳಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಓಡಾಡುತ್ತಿತ್ತು. ಆದರೆ ಈ ವಿಷಯದ ಬಗ್ಗೆ ಸ್ವತಃ ಶ್ರುತಿ ಹಾಸನ್ ಅವರೇ ಸ್ಪಷ್ಟತೆಯನ್ನ ನೀಡಿದ್ದಾರೆ..! ಮುಂದೆ ಓದಿ.

 

 

ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿರುವ “ಪೊಗರು” ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ರವರಿಗೆ ನಾಯಕಿಯಾಗಿ ಸೌತ್ ಇಂಡಿಯಾದ ಟಾಪ್ ಹೀರೋಯಿನ್ ಆದ ಶ್ರುತಿಹಾಸನ್ ನಟಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು ಆದರೆ ಈ ಸುದ್ದಿಗೆ ನಟಿ ಶ್ರುತಿಹಾಸನ್ ಸದ್ಯಕ್ಕೆ ನಾನು ಯಾವುದೇ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ ಅಲ್ಲದೆ ಈ ಬಗ್ಗೆ ಯಾರೊಬ್ಬರ ಜೊತೆಯೂ ಕೂಡ ಮಾತುಕತೆ ನಡೆಸಿಲ್ಲ ಇವೆಲ್ಲ ಕೇವಲ ವದಂತಿಗಳು” ಎಂದು ಶ್ರುತಿ ಹಾಸನ್ ಟ್ವೀಟ್ ಮಾಡುವ ಮೂಲಕ ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಿಲ್ಲಎಂದು ಹೇಳಿದ್ದರು.

 

ಶ್ರುತಿಹಾಸನ್ ಅವರು ಕನ್ನಡದಲ್ಲಿ ನಟಿಸುವುದಿಲ್ಲ ಎಂದು ಹೇಳಿರುವುದರಿಂದ ಕೋಪಗೊಂಡಿರುವ ಕನ್ನಡ ಚಿತ್ರಾಭಿಮಾನಿಗಳು ಶ್ರುತಿಹಾಸನ್ ವಿರುದ್ಧ ಕಿಡಿಕಾರಿದ್ದರು ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಈ ಕುರಿತು ಮಾತನಾಡಿರುವ ಶ್ರುತಿ ಹಾಸನ್ ಅವರು “ಕನ್ನಡ ಚಿತ್ರರಂಗ ನನಗೆ ಚನ್ನಾಗಿಯೇ ಪರಿಚಯವಿದೆ., ನನ್ನ ತಂದೆ ಕೂಡಾ ಕನ್ನಡ ಚಿತ್ರಗಳಲ್ಲಿ ನಟಿಸಿ ಕನ್ನಡ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಬಗ್ಗೆ ನನಗೆ ಹೆಮ್ಮೆಯೂ ಇದೆ. ನಾನು ಕೂಡ ಅನೇಕ ಕನ್ನಡ ಚಿತ್ರಗಳನ್ನ ನೋಡಿದ್ದೇನೆ” ಎಂದು ಹೇಳಿದ್ದಾರೆ..

 

 

“ಕನ್ನಡ ಚಿತ್ರಗಳಲ್ಲಿ ನಟಿಸಲು ನನಗೆ ತುಂಬಾ ಆಸೆ ಇದೆ. ನನಗೆ ಇಷ್ಟವಾಗುವಂತಹ ಕಥೆ, ಪಾತ್ರ ಸಿಕ್ಕರೆ ನಾನು ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ. ಕನ್ನಡ ಚಿತ್ರದಲ್ಲಿ ನಟಿಸಲು ನನಗೆ ಹೆಮ್ಮೆ ಇದೆ. ಯಾವುದೇ ಕಲಾವಿದರು ಭಾಷೆಯ ಗಡಿಯನ್ನು ಇಟ್ಟುಕೊಳ್ಳಬಾರದು.. ಕನ್ನಡದಲ್ಲಿ ನಟಿಸಲು ನನಗೆ ಇಷ್ಟವಾಗುವಂತಹ ಪಾತ್ರ ನನ್ನನ್ನು ಹುಡುಕಿಕೊಂಡು ಬಂದೆ ದಾರುತ್ತದೆ ಬರುತ್ತದೆ ಎನ್ನುವ ನಂಬಿಕೆ ನನಗಿದೆ. ಆ ಸಮಯ ಬಂದರೆ ಕನ್ನಡದಲ್ಲಿ ನಟಿಸುವ ಅವಕಾಶವನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ.” ಎಂದು ಶ್ರುತಿಹಾಸನ್ ಅವರು ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 

 

ಪೊಗರು ಚಿತ್ರದಲ್ಲಿ ಶ್ರುತಿಹಾಸನ್ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು ಆದರೆ ಚಿತ್ರಕ್ಕೆ ಸಂಭಂದಿಸಿದಂತೆ ಯಾರೊಬ್ಬರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ. ನನ್ನ ಹತ್ತಿರ ಮಾತನಾಡಿಲ್ಲ ಅದೆಲ್ಲಾ ಸುಳ್ಳು ಸುದ್ದಿಯಾಗಿತ್ತು..ಹಾಗಾಗಿ ಟ್ವಿಟರ್ ನಲ್ಲಿ ಸದ್ಯಕ್ಕೆ ನಾನು ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಜನೆ ಇಲ್ಲ ಎಂದು ಹೇಳಿದ್ದೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top