fbpx
ಮನೋರಂಜನೆ

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಬರೋಬ್ಬರಿ ಎಂಟು ಜನ ನಾಮಿನೇಟ್..!

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಬರೋಬ್ಬರಿ ಎಂಟು ಜನ ನಾಮಿನೇಟ್..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಮತ್ತು ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ನಲ್ಲಿ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್ ಎಲಿಮಿನೇಷನ್ ಆಗಿದ್ದಾರೆ.. ಸುಮಾ ಅವ್ರ ನಂತರ ಎರಡನೇ ವಾರದ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರಹೋಗುವುದಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ..

 

 

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿಯನ್ನು ನಾಮಿನೇಷನ್ ಮಾಡುವುದಕ್ಕೆ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬರೋಬ್ಬರಿ 9 ಜನ ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ..ಮನೆಯ ಎಲ್ಲಾ ಸದಸ್ಯರು ವೋಟಿಂಗ್ ಮೂಲಕ 9 ಜನ ಸ್ಪರ್ದಿಗಳನ್ನು ನಾಮಿನೇಟ್ ಮಾಡಿದರೆ.. ಎರಡನೇ ವಾರದ ಕ್ಯಾಪ್ಟನ್ ಆಗಿರುವ ಶ್ರುತಿ ಪ್ರಕಾಶ್ ಅವ್ರು ಒಬ್ಬ ಸ್ಪರ್ಧಿಯನ್ನು ನಾಮಿನೇಟ್ ನಿಂದ ಸೇಫ್ ಮಾಡಿದ್ದಾರೆ. ಅಲ್ಲಿಗೆ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರ ಸಂಖ್ಯೆ 8… ಮುಂದೆ ಓದಿ

 

 

ದಿವಾಕರ್ ರವರಿಗೆ 6 ವೋಟ್ ಗಳು ಬಿದ್ದರೆ ಮೇಘ ಅವರಿಗೆ 5 ವೋಟ್ ಗಳು ಬಿದ್ದಿವೆ..ಜಗನ್ನಾಥ್ ಅವರು ನಾಲ್ಕು ವೋಟ್ ಗಳೊಂದಿಗೆ ಕೃಷಿ 3 ವೋಟ್ ಗಳೊಂದಿಗೆ ಸಮೀರ್ ಆಚಾರ್ಯ 5 ವೋಟ್ಗಳೊಂದಿಗೆ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ. ಉಳಿದಂತೆ ಕಾರ್ತಿಕ್, ಆಶಿತಾ,ದಯಾಳ್ ಪದ್ಭನಾಭನ್, ರಿಯಾಜ್ ತಲಾ ಎರಡೆರಡು ವೋಟ್ ಗಳು ಬಿದ್ದಿವೆ…

 

 

ಮೊದಲವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಕ್ಯಾಪ್ಟನ್ ಶ್ರುತಿ ಪ್ರಕಾಶ್ ರವರಿಗೆ ನಾಮಿನೇಟ್ ಆದವರ ಪೈಕಿ ಒಬ್ಬರನ್ನು ಸೇವ್ ಮಾಡುವ ಅಧಿಕಾರ ಕೊಡಲಾಗಿತ್ತು..ಆ ಅಧಿಕಾರದಂತೆ ಜಯರಾಮ್ ಕಾರ್ತಿಕ್ ಅವರನ್ನು ಎಲಿಮಿನೇಷನ್ ನಿಂದ ಸೇವ್ ಮಾಡಿದ್ದಾರೆ..ಉಳಿದ ಎಂಟು ಜನ ಸ್ಪರ್ಧಿಗಳು ಈ ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top