ಮನೋರಂಜನೆ

ಬಿಗ್’ಬಾಸ್ ಮನೆಯ ಸೆಲೆಬ್ರಿಗಳಿಂದ ಜನಸಾಮಾನ್ಯ ಸ್ಪರ್ಧಿಗಳ ಮೂಲೆಗುಂಪು..!

ಬಿಗ್’ಬಾಸ್ ಮನೆಯ ಸೆಲೆಬ್ರಿಗಳಿಂದ ಜನಸಾಮಾನ್ಯ ಸ್ಪರ್ಧಿಗಳ ಮೂಲೆಗುಂಪು..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಮತ್ತು ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ನಲ್ಲಿ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್ ಎಲಿಮಿನೇಷನ್ ಆಗಿದ್ದಾರೆ..

 

 

ಕಾರ್ಯಕ್ರಮ ಪ್ರಾರಂಭವಾದಾಗಿನಿಂದಲೂ ಸಾಮಾನ್ಯರ ಕೋಟಾ ದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದ ಸ್ಪರ್ಧಿಗಳಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವತೆ ಮೊದಲ ವಾರವೇ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ನಾಮಿನೇಷನ್ ಪ್ರಕ್ರಿಯೆಯಲ್ಲಿ, ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ವರು ‘ಜನಸಾಮಾನ್ಯ ಸ್ಪರ್ಧಿಗಳೇ ಆಗಿದ್ದರು..!

 

 

ಈ ವಾರದ ನಾಮಿನೇಷನ್ ನಲ್ಲೂ ಕೂಡ ನಾಮಿನೇಟ್ ಆಗಿರುವ ಎಂಟು ಜನ ಸ್ಪರ್ಧಿಗಳ ಪೈಕಿ ನಾಲ್ಕು ಜನ ಜನ ಸಾಮಾನ್ಯರೇ ನಾಮಿನೇಟ್ ಆಗಿದ್ದಾರೆ.. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿನ ಸೆಲೆಬ್ರೆಟಿ ಸ್ಪರ್ಧಿಗಳು ಜನ ಸಾಮಾನ್ಯ ಸ್ಪರ್ಧಿಗಳನ್ನು ಮಾತನಾಡಿಸುವ ರೀತಿ ಮತ್ತು ಅವರೊಂದಿಗೆ ವರ್ತಿಸುವ ರೀತಿ ಕಂಡು ಪ್ರೇಕ್ಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.. ಸದ್ಯ ಬಿಗ್ ಬಾಸ್ ಮನೆ ಸೆಲೆಬ್ರೆಟಿಗಳ ಒಂದು ಗುಂಪು ಮತ್ತು ಜನಸಾಮಾನ್ಯರೇ ಒಂದು ಗುಂಪುಗಳಾಗಿ ಒಡೆದುಕೊಂಡಿದೆ..ಸ್ವತಃ ಸಾಮಾನ್ಯ ಸ್ಪರ್ಧಿಗಳೇ ನಮ್ಮನ್ನ ಬೇರೆ ತರ ಕಾಣ್ತಾರೆ ಎಂದು ಕ್ಯಾಮರಾ ಮುಂದೆ ಹೇಳಿಕೊಳ್ಳುತ್ತಿದ್ದಾರೆ..

 

 

ಕಳೆದ ವಾರ ಕ್ಯಾಪ್ಟನ್ ಆಗಿದ್ದ ನಿವೇದಿತಾ ಗೌಡ ಕೂಡ ಸಾಮಾನ್ಯ ಸ್ಪರ್ಧಿಗಳ ಹತ್ತಿರ ಒಂದು ರೀತಿ ಮತ್ತು ಸೆಲೆಬ್ರೆಟಿ ಸ್ಪರ್ಧಿಗಳ ತುಂಬಾ ಖುಷಿಯಾಗಿ ವರ್ತಿಸಿರುವುದು ಕ್ಯಾಮರಾಗಳಲ್ಲಿ ಕಂಡುಬಂದಿದೆ.. ಅನುಪಮಾ ಗೌಡ ರವರು ಮೊದಲ ವಾರವೇ ಮನೆಯಿಂದ ಹೊರಹೋಗಲು ನಿವೇದಿತಾ ಗೌಡ ಅವರನ್ನು ನೇರ ನಾಮಿನೇಟ್ ಮಾಡಿದ್ದರು..

 

 

 ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ನೋಡಿ:

https://www.voot.com/clip/diwakar-talks-about-tejaswini/543888

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top