ದೇವರು

ನಾಳೆ 25ನೇ ಅಕ್ಟೋಬರ್ ಕಾರ್ತಿಕ ಮಾಸದ ಲಾಭ ಪಂಚಮಿಯ ದಿನ ಈ ದಿನ ಗಣೇಶ ದೇವರನ್ನು ಪೂಜಿಸಿದರೆ ಧನದ ಹೊಳೆಯನ್ನೇ ಹರಿಸುತ್ತಾನೆ.

ನಾಳೆ ಇಪ್ಪತ್ತೈದನೇ ಅಕ್ಟೋಬರ್ ಕಾರ್ತಿಕ ಮಾಸದ ಲಾಭ ಪಂಚಮಿಯ ದಿನ ಈ ದಿನ ಗಣೇಶ ದೇವರನ್ನು ಪೂಜಿಸಿದರೆ ಧನದ ಹೊಳೆಯನ್ನೇ ಹರಿಸುತ್ತಾನೆ.

ಕಾರ್ತಿಕ ಮಾಸದ ಹುಣ್ಣಿಮೆಯ ಚಂದ್ರನು ಕಾರ್ತಿಕ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಆದ್ದರಿಂದ ಈ ಮಾಸಕ್ಕೆ ಕಾರ್ತಿಕ ಮಾಸ ಎಂದು ಹೆಸರು. ಈ ಮಾಸದಲ್ಲಿ ಮಾಡುವ ಪೂಜೆ, ಅರ್ಚನೆಗಳು, ಅಭಿಷೇಕಗಳು, ಪುಣ್ಯಸ್ನಾನ ಅತ್ಯಂತ ವಿಶಿಷ್ಟವಾದವು.

 

 

ಈ ಕಾರ್ತಿಕ ಮಾಸದಲ್ಲಿ ಬರುತ್ತಿರುವ ಬುಧವಾರ ಅಂದರೆ ನಾಳೆ ಅಕ್ಟೋಬರ್ 25ನೇ ಲಾಭ ಪಂಚಮಿಯು ಬಂದಿರುವುದು ಇದು ತುಂಬಾ ಶುಭಕರವಾದ ದಿನ ಅದರಲ್ಲೂ ಬುಧವಾರ ಬಂದಿರುವುದರಿಂದ ಗಣೇಶನ ದಿನವಾದ ಬುಧವಾರ ತುಂಬಾ ಪವಿತ್ರ ಮತ್ತು ಶುಭ ಎಂದು ಭಾವಿಸಲಾಗಿದೆ .

ಗಣೇಶನಿಗೆ ವಿಘ್ನವಿನಾಶಕ ವಿಘ್ನ ನಿವಾರಕ ಎಂದು ಸಹ ಕರೆಯಲಾಗುತ್ತದೆ ಈ ದಿನ ಮಾಡುವ ಗಣೇಶನ ಪೂಜೆಯಲ್ಲಿ ಈ ಒಂದು ಉಪಾಯವನ್ನು ಪಾಲಿಸಿದರೆ ಅದು ಸಾವಿರ ಪಟ್ಟು ಒಳ್ಳೆಯದಾಗುವುದು ಎಂದು ಹೇಳಲಾಗಿದೆ ಈ ದಿನ ಲಾಭ ಪಂಚಮಿಯೂ ಬಂದಿರುವುದರಿಂದ ನೀವು ಏನೇ ಮಾಡಿದರೂ ಅದು ಶೀಘ್ರವಾಗಿ ಫಲಪ್ರದವಾಗಿ ಲಾಭವಾಗುವುದು.

 

 

ಬುಧವಾರದ ಅಕ್ಟೋಬರ್ 25 ನೇ ತಾರೀಖಿನಂದು  ಬೆಳಗ್ಗೆ ಬೇಗನೆ ಎದ್ದು ಸ್ನಾನ ಮತ್ತು ನಿತ್ಯ ಕರ್ಮಗಳನ್ನು  ಮುಗಿಸಿಕೊಂಡು ಖಾಲಿ ಹೊಟ್ಟೆಯಲ್ಲಿಯೇ ಪೂಜೆಯನ್ನು ಮಾಡಬೇಕು .

ಮೊದಲು ಗಣೇಶನಿಗೆ ಕೆಂಪು ಸಿಂಧೂರದಿಂದ ತಿಲಕವನ್ನು ಹಚ್ಚಿದ ನಂತರ ಇಪ್ಪತ್ತೊಂದು ಗರಿಕೆ ಹುಲ್ಲನ್ನು ಗಣೇಶನಿಗೆ ಅರ್ಪಿಸಬೇಕು. ನೆನಪಿಡಿ ಗರಿಕೆ ಹುಲ್ಲು ತಾಜಾ ವಾಗಿರಬೇಕು ಅದನ್ನು ಎಣಿಕೆ ಮಾಡಿ ಇಪ್ಪತ್ತೊಂದು ಸಂಖ್ಯೆಯಲ್ಲಿಯೇ ಇರಬೇಕು. ಗರಿಕೆಯನ್ನು ಶುದ್ಧಗೊಳಿಸಿ ನಂತರ ಗಣೇಶನಿಗೆ ಅರ್ಪಿಸಿ ಪೂಜೆ ಪ್ರಾರ್ಥನೆ ಸಲ್ಲಿಸಿ.

 

 

ಯಾರೂ ಭಗವಂತನಾದ ಗಣೇಶ ದೇವನಿಗೆ ಲಾಭ ಪಂಚಮಿಯ ದಿನ ಗರಿಕೆ ಹುಲ್ಲನ್ನು ಅರ್ಪಿಸಿ ಪೂಜಿಸುತ್ತಾರೋ. ಅವರಿಗೆ ಕುಬೇರನ ರೀತಿಯಲ್ಲಿ ಶ್ರೀಮಂತರಾಗುವ ಅರ್ಹತೆಯನ್ನು ಗಣೇಶನು ಕರುಣಿಸುತ್ತಾನೆ. ಅವರ ಮನೆಯಲ್ಲಿ ಎಂದಿಗೂ ಸಹ ಧನ ಧಾನ್ಯ, ಸಿರಿ, ಸಂಪತ್ತಿಗೆ ಕೊರತೆ ಕಾಣುವುದಿಲ್ಲ.

ಗಣೇಶನನ್ನು ಪ್ರಸನ್ನಗೊಳಿಸುವ ಲಡ್ಡು ಅಥವಾ ಮೋದಕವನ್ನು ಗಣಪತಿಯ ದೇವಸ್ಥಾನದಲ್ಲಿ ಅಥವಾ ನಿಮ್ಮ ಮನೆಯ ಪೂಜಾ ಕೋಣೆಯಲ್ಲಾದರೂ ನೈವೇದ್ಯವಾಗಿ ಅರ್ಪಿಸಿ ಪೂಜೆಯನ್ನು ಮಾಡಬಹುದು.ಪೂಜೆಯ ನಂತರ  ಇದನ್ನು ಅಕ್ಕಪಕ್ಕದವರ ಮನೆಗೂ ಸಹ ಪ್ರಸಾದದ ರೂಪದಲ್ಲಿ ವಿತರಿಸಿದರೆ ಇನ್ನೂ ಒಳ್ಳೆಯದು.

 

 

ಗಣೇಶನಿಗೆ ಹಸುವಿನ ತುಪ್ಪ ಎಂದರೂ ಸಹ ಬಹಳ ಇಷ್ಟ. ತುಪ್ಪವನ್ನು ರೋಗ ನಾಶಿನಿ ಎಂದು ಸಹ ಕರೆಯಲಾಗುತ್ತದೆ  ಮತ್ತು ಪಂಚಾಮೃತದಲ್ಲಿಯೂ ಸಹ ತುಪ್ಪವನ್ನು ಬಳಸಲಾಗುತ್ತದೆ. ಗಣೇಶನಿಗೆ ಶುದ್ಧ ಹಸುವಿನ ತುಪ್ಪದಿಂದ ಒಂದು ದೀಪವನ್ನು ಗಣೇಶ ದೇವನ ಮುಂದೆ ಬೆಳಗಿಸುವುದರಿಂದ ಜ್ಞಾನ ,ಬುದ್ಧಿ ಮತ್ತು ಧನ ಸಂಪತ್ತು ಕರುಣಿಸುವನು. ಆದ್ದರಿಂದ ಒಂದು ತುಪ್ಪದ ದೀಪವನ್ನು ಅವಶ್ಯಕವಾಗಿ ನಾಳೆ ಅಂದರೆ ಲಾಭ ಪಂಚಮಿಯ ದಿನ ಗಣೇಶನ ಮುಂದೆ ದೀಪ ಬೆಳಗಿಸಿ.

 

 

ದುರ್ಗಾ ಮಾತೆಯ ನೂರಾ ಎಂಟು ಹೆಸರುಗಳನ್ನು ಮತ್ತು ಅದರ ಅರ್ಥಗಳನ್ನು ಈ ದಿನ ರಾತ್ರಿ ಓದಿದರೆ ಮತ್ತು ಕೇಳಿದರೆ  ನಿಮ್ಮ ಮನೆಯಲ್ಲಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗಿ , ನಿಮ್ಮ ಮನೆಯಲ್ಲಿ ಸುಖ ಸಂಪತ್ತು ಸಮೃದ್ಧಿಯಾಗಿ ಹೆಚ್ಚುತ್ತಾ ಹೋಗುವುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top