ದೇವರು

ತಿಲಕವನ್ನು ಹಣೆಗೆ ಶೋಕಿಗೆ ಹಚ್ಕೊಳೋದಲ್ಲ ಅದರ ಹಿಂದೆ ಇರೋ ವೈಜ್ಞಾನಿಕ ಕಾರಣನು ತಿಳ್ಕೊಂಡಿರ್ಬೇಕು

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಿಲಕವನ್ನು ಹಣೆಗೆ ಹಚ್ಚಿಕೊಳ್ಳುವ ಹಿಂದೆ ಇರುವ ವೈಜ್ಞಾನಿಕ ಕಾರಣ.

 

ತಿಲಕವನ್ನು ಹಣೆಗೆ ಹಚ್ಚಿಕೊಳ್ಳುವುದು ತುಂಬಾ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಪಡೆದಿದೆ.ಇದು ಬರೀ ಮಂಗಳಕರವಷ್ಟೇ ಅಲ್ಲ.ಅದು ಒಂದಕ್ಕಿಂತ  ಹೆಚ್ಚು ಲಾಭದಾಯಕವಾಗಿಯೂ ಇದೆ.

 

 

ನೀವು ನೋಡಿರಬಹುದು ,ನಾವು ಎಷ್ಟು ಸರಳವಾಗಿ ತಿಲಕವನ್ನು ಹಚ್ಚಿಕ್ಕೊಳ್ಳುತ್ತೇವೆಂದು.ನೀವು ನಿಮ್ಮ ಹಣೆಯ ಮೇಲೆ ಒಂದು ಸರಿಯಾದ ಸ್ಥಳದಲ್ಲಿ ಒಂದು  ಬಾಗದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ತಿಲಕವನ್ನು ಸಹ ಸೇರಿಸಲಾಗಿದೆ.ಇದನ್ನು ಎಲ್ಲಾ ತರದ ಪೂಜೆಯಲ್ಲಿ ಬಳಸಲಾಗಿದೆ.

ನಮ್ಮ ಸಂಪ್ರದಾಯ ಮತ್ತು ಆಚರಣೆಗಳು ತುಂಬಾ ಹಳೆಯದು ಎಂದು ಎಣಿಸಬಹುದು.ಆದರೆ ತುಂಬಾ

ಜನರು ಇದನ್ನೆಲ್ಲಾ ಈಗ ಮರೆತುಬಿಟ್ಟಿದ್ದಾರೆ.ತಿಲಕವನ್ನು ಹಚ್ಚಿಕೊಳ್ಳುವುದರ ಹಿಂದೆ  ವೈಜ್ಞಾನಿಕ ಕಾರಣ

ಮತ್ತು ಮಹತ್ವ ಎರಡೂ ಇದೆ.

 

 

ಎಲ್ಲರೂ ಕುಂಕುಮ ಅಥವಾ ಚಂದನದ ತಿಲಕವನ್ನು ಪೂಜೆಗಳಲ್ಲಿ ಹಚ್ಚಿಕೊಳ್ಳುತ್ತಾರೆ.ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ,ದೇವಸ್ಥಾನಕ್ಕೆ ಹೋದಾಗ,ಮಂಗಳ ಕಾರ್ಯಗಳಲ್ಲಿ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಲಾಗುತ್ತದೆ.ಎರಡು ಕಣ್ಣುಗಳ ಹುಬ್ಬಿನ  ಮಧ್ಯದಲ್ಲಿ ಉಂಗುರ ಬೆರಳಿನಿಂದ   ತಿಲಕ,ಕುಂಕುಮ, ಅಥವಾ ಚಂದನವನ್ನು ಇಟ್ಟುಕೊಳ್ಳಲಾಗುತ್ತದೆ.

 

 

ಉಂಗುರ ಬೆರಳಿನ ಕೆಳಗಿನ ಸ್ಥಳವನ್ನು ಸೂರ್ಯ ಪರ್ವತ ಅಥವಾ ಸೂರ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ ಹಾಗೆ ಆಜ್ಞಾ ಚಕ್ರವು ಹಣೆಯಲ್ಲಿ ಇರುವುದು. ಆಜ್ಞಾ ಚಕ್ರದ ಮೇಲೆ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಅದು ಜಾಗೃತ ಗೊಳ್ಳುತ್ತದೆ.ಹಣೆಯ ಮೇಲೆಯೇ ಆಜ್ಞಾ ಚಕ್ರವು ಇರುವ ಕಾರಣ ಅಲ್ಲಿಗೆ ನಾವು ತಿಲಕವನ್ನು ಇಟ್ಟುಕೊಳ್ಳುವುದರಿಂದ  ಸೂರ್ಯನ ಮಾದರಿಯಲ್ಲೇ ಮುಖಕ್ಕೆ ತೇಜಸ್ಸು ಮತ್ತು ಹೊಳಪನ್ನು ತಿಲಕ ನೀಡುವುದು ಎನ್ನುವುದು ಸಹ ಒಂದು ನಂಬಿಕೆ.

 

 

ನಿಮ್ಮ ಮನಸ್ಸು ಮತ್ತು ದೇಹದ ಸೌಂದರ್ಯದ ರೀತಿಯಲ್ಲಿ ಇದು ಬರೀ ಸೌಂದರ್ಯಶಾಸ್ತ್ರ ಅಲ್ಲ.ಆದರೆ ತಿಲಕವು ಆಜ್ಞಾ ಚಕ್ರವನ್ನು ಜಾಗೃತಗೊಳಿಸುವುದು.ಇದರಿಂದ ಪ್ರತಿಯೊಬ್ಬರು ಸಹ  ಬುದ್ಧಿವಂತಿಕೆ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.

 

 

ಇದರ ಜೊತೆಗೆ ಯಾವ ಸ್ಥಳದಲ್ಲಿ ತಿಲಕವನ್ನು ಹಚ್ಚಲಾಗುವುದೋ ಅಲ್ಲಿ ಒಂದು ಮುಖ್ಯವಾದ ಮನುಷ್ಯನ ಮನಸ್ಸಿಗೆ ಸಂಬಂಧಪಟ್ಟ ನರ ಇರುವುದರಿಂದ ಅದು ನಮ್ಮ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ನಮ್ಮ ದೇಹದೊಳಗೆ ಹಾಗೇ ನಮ್ಮ ಗಮನವನ್ನು ಸಹ ಕೇಂದ್ರೀಕರಿಸಲು ಸಹಾಯ ಮಾಡುವುದು .ಆದ್ದರಿಂದ  ಚಂದನದ ತಿಲಕ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವುದು,ನಾವು ಒಂದು ರೀತಿಯಲ್ಲಿ  ಪೂಜೆ ಮಾಡಿದಂತೆಯೇ  ಆಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top