ಮನೋರಂಜನೆ

ಬರೋಬ್ಬರಿ ಆರು ಭಾಷೆಗಳಲ್ಲಿ ಬರುತ್ತಿದೆ “ದಿ ವಿಲನ್” ಚಿತ್ರದ ಟೀಸರ್

ಬರೋಬ್ಬರಿ ಆರು ಭಾಷೆಗಳಲ್ಲಿ ಬರುತ್ತಿದೆ “ದಿ ವಿಲನ್” ಚಿತ್ರದ ಟೀಸರ್.

 

 

 

ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯಲ್ಲಿ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರ ಭರದಿಂದ ಶೂಟಿಂಗ್ ನಡೆಸುತ್ತಿದ್ದು ಈಗಾಗಲೇ ಶೇಕಡಾ 70ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಮುಂದೆ ಓದಿ..

 

 

ದಿ ವಿಲನ್ ಚಿತ್ರವೂ ಆರು ಭಾಷೆಗಳಲ್ಲಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಲ್ಲಿ ವಿಶೇಷವೇನೆಂದರೆ ದಿ ವಿಲನ್ ಚಿತ್ರದ ಟೀಸರ್ ಅನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದ್ದು ಈ ಟೀಸರ್ ಎಲ್ಲಾ ಆರು ಭಾಷೆಗಳಲ್ಲೂ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ..

 

 

ದಿ ವಿಲನ್ ಚಿತ್ರವು ಕನ್ನಡ,ಹಿಂದಿ, ತಮಿಳು,ತೆಲುಗು,ಬಂಗಾಳಿ ಮತ್ತು ಮಲೆಯಾಳಂ ಗಳಲ್ಲಿ ಏಕಕಾಲದಲ್ಲಿ ಮೂಡಿ ಬರುತ್ತಿದೆ.. ಚಿತ್ರದ ಟೀಸರ್ ಅನ್ನು ಕೂಡ ಆರು ಭಾಷೆಗಳಲ್ಲೂ ರಿಲೀಸ್ ಮಾಡುವ ಪ್ಲಾನ್ ನಲ್ಲಿ ಚಿತ್ರತಂಡವಿದೆ.ಇದೇ ಮೊದಲ ಬಾರಿಗೆ ಕನ್ನಡದ ಇಬ್ಬರು ದಿಗ್ಗಜ ನಟರಾದ ಶಿವಣ್ಣ ಮತ್ತು ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಚಿತ್ರಕ್ಕೆ ಭಾರಿ ಕ್ರೇಜ್ ಹುಟ್ಟಿಕೊಂಡಿದೆ..

 

 

ಚಿತ್ರದಲ್ಲಿ ನಾಯಕಿಯರಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಮತ್ತು ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ..ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ..

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top