ದೇವರು

ಪೂಜೆ ಮಾಡೋ ಮುಂಚೆ ಮತ್ತು ಪೂಜೆಯನ್ನು  ಮಾಡುವಾಗ ಈ ನಿಯಮಗಳು ತಪ್ಪದೆ ಪಾಲಿಸಲೇಬೇಕು

ನಾವು ಪೂಜೆ ಮಾಡುವ ಮುನ್ನ ಮತ್ತು ಪೂಜೆಯನ್ನು  ಮಾಡುವಾಗ

ಪಾಲಿಸಬೇಕಾದ ನಿಯಮಗಳು.

 

 

ಪ್ರತಿಯೊಬ್ಬರೂ ಆ ದೇವರ ಕೃಪೆಯನ್ನು ಪಡೆಯಬೇಕು ಎಂದು ಕೋರಿಕೊಳ್ಳುತ್ತಾರೆ. ಅದಕ್ಕಾಗಿಯೇ ಪೂಜೆಯನ್ನು ಮಾಡುತ್ತಾ ಇರುತ್ತಾರೆ. ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ಖಂಡಿತವಾಗಿಯೂ ಪಾಲಿಸಲೇಬೇಕು.ಆದರೆ ಈ ಪೀಳಿಗೆಯ ಜನರಿಗೆ ಆ ನಿಯಮದ ಬಗ್ಗೆ ತಿಳಿದಿಲ್ಲ . ಪೂಜೆಯ  ಮುಖ್ಯವಾದ ನಿಯಮಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ

ಪೂಜೆ ಮಾಡುವ ಮುನ್ನ ಬೆಳಗಿನ ಜಾವ ಬೇಗನೆ  ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನ ಮಾಡಿದ ನಂತರ ಮಡಿ ಬಟ್ಟೆಯನ್ನು ಧರಿಸಬೇಕು.

 

 

ದೇವರ ಮನೆಯನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಿಂದಿನ ದಿನ ಪೂಜೆ ಮಾಡಿದ ಹೂವುಗಳು, ಅಕ್ಷತೆಗಳು ಏನಾದರೂ ಇದ್ದರೆ ಅದನ್ನು ಮೊದಲಿಗೆ ತೆಗೆದು ಹೊರಗೆ ಹಾಕಿ ದೇವರ ಕೋಣೆಯನ್ನು ಸ್ವಚ್ಛ ಮಾಡಬೇಕು.

ದೇವರಿಗೆ ತಿಲಕ ಅಥವಾ ಕುಂಕುಮವನ್ನು ಇಡಬೇಕು. ವಿಷ್ಣು ಅವತಾರದ ಮೂರ್ತಿಗಳಿಗೆ ಗಂಧದ ಬೊಟ್ಟು, ಶಿವನಿಗೆ ವಿಭೂತಿಯನ್ನು ಇಡಬೇಕು,  ಹೆಣ್ಣು ದೇವರಿಗೆ ಮಾತ್ರ ಕುಂಕುಮವನ್ನು ಇಡಬೇಕು.

 

 

ದೀಪಗಳಿಗೆ ಮೊದಲು ಎಣ್ಣೆಯನ್ನು ಹಾಕಿದ ಮೇಲೆ ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬೇಕು.

ಎಳ್ಳೆಣ್ಣೆ ಅಥವಾ ತುಪ್ಪ ಇದ್ದರೆ ದೀಪಾರಾಧನೆಗೆ ತುಂಬಾ  ಒಳ್ಳೆಯದು.

ದೀಪಾರಾಧನೆ ತಾಮ್ರ ಬೆಳ್ಳಿ ಬಂಗಾರ ಅಥವಾ ಮಣ್ಣಿನಿಂದ ಮಾಡಿದ ದೀಪಗಳನ್ನು ಮಾತ್ರ ಉಪಯೋಗಿಸಬೇಕು. ಸ್ಟೀಲ್ನನಿoದ ಮಾಡಿದ ದೀಪವನ್ನು ಉಪಯೋಗಿಸಬಾರದು.

 

 

ಒಂದು ಬತ್ತಿಯಿಂದ ದೀಪಾರಾಧನೆ ಮಾಡಬಾರದು. ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬತ್ತಿಗಳನ್ನು ಉಪಯೋಗಿಸಬೇಕು.

ದೀಪವನ್ನು ಯಾವತ್ತೂ ಸಹ ನೆಲದ ಮೇಲೆ ಇಡಬಾರದು. ಒಂದು  ಅಥವಾ ಅದಕ್ಕಿಂತ ಹೆಚ್ಚಿನ ಬತ್ತಿಗಳನ್ನು ಉಪಯೋಗಿಸಬೇಕು. ಒಂದು ತಟ್ಟೆಯಲ್ಲಿ ಆದರೂ ಅಥವಾ ಎಲೆಯ ಮೇಲೆ ಆದರೂ ಇಡಬೇಕು.

 

 

ಶಿವ ಭಕ್ತರಾದರೆ  “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು  ಐದು ಬಾರಿ ಜಪಿಸಬೇಕು.

ವಿಷ್ಣುವಿನ ಭಕ್ತರಾದರೆ  “ಓಂ ನಮೋ ನಾರಾಯಣಾಯ ನಮಃ”  ಎಂದು ಐದು ಬಾರಿ ಜಪಿಸಬೇಕು.

ನೈವೇದ್ಯವನ್ನು ಸಮರ್ಪಿಸಬೇಕು.  ಬೆಳ್ಳಿಯ ತಟ್ಟೆ, ಬಾಳೆ ಎಲೆ ಅಥವಾ ವೀಳ್ಯದೆಲೆಯಿಂದ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು.ನೈವೇದ್ಯವನ್ನು ಸಮರ್ಪಿಸಿದ ಬಳಿಕವೇ ಆರತಿಯನ್ನು ಬೆಳಗಬೇಕು.

 

 

ಆರತಿ ಆದ ನಂತರ ಎರಡು ನಿಮಿಷಗಳ ಕಾಲ ಆ ಜಾಗದಿಂದ ಹೊರಗಡೆ ಬರಬೇಕು ದೇವರು ಆ ನೈವೇದ್ಯವನ್ನು ಸ್ವೀಕರಿಸಿದ ನಂತರ ಅದು ಮಹಾ ಪ್ರಸಾದವಾಗುತ್ತದೆ.

ನಂತರ ಅದನ್ನು ಮನೆಯ ಮಂದಿ ಎಲ್ಲರೂ ಸಹ ಮಹಾ ಪ್ರಸಾದವೆಂದು ಸ್ವೀಕರಿಸಿದರೆ ಒಳ್ಳೆಯದು.ಹೀಗೆ ಪೂಜೆಯನ್ನು ಶ್ರದ್ಧೆ, ಭಕ್ತಿಯಿಂದ  ಮಾಡಿದರೆ ಒಳ್ಳೆಯ ಫಲಿತಾಂಶಗಳನ್ನು ಸಹ ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top